Personal Loan: ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಮಾಡಬೇಕಾ…? ಹಾಗಾದರೆ RBI ನ ನಿಯಮಗಳನ್ನ ತಿಳಿದುಕೊಳ್ಳಿ.

ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಮಾಡುವ ಮುನ್ನ RBI ನ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

Personal Loan Rules And Regulations: ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ Personal Loan ಅನ್ನು ನೀಡುತ್ತದೆ. ಸಾಕಷ್ಟು ಜನರು ತಮ್ಮ ಆರ್ಥಿಕ ಸಮಸ್ಯೆಯ ಸಮಯದಲ್ಲಿ ವೈಯಕ್ತಿಕ ಸಾಲವನ್ನು ಪಡೆಯುತ್ತಾರೆ. ಇನ್ನು ವೈಯಕ್ತಿಕ ಸಾಲವು ಅಸುರಕ್ಷಿತ ಸಾಲವಾಗಿದೆ. ಇತ್ತೀಚೆಗಷ್ಟೇ RBI ಈ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದಂತೆ ನಿಯಮವನ್ನು ಬಿಗಿಗೊಳಿಸಿದೆ.

ಪರ್ಸನಲ್ ಲೋನ್ ಅನ್ನು RBI ಭದ್ರತೆ ಇಲ್ಲದೆ ಸಾಲ ಅಂದರೆ Unsecured Loan ಎಂದು ಪರಿಗಣಿಸಿದೆ. ಈ ಕಾರಣಕ್ಕೆ ಬ್ಯಾಂಕುಗಳಿಗೆ ಇರುವ Risk Factor ಪ್ರಮಾಣವನ್ನು ಶೇ. 25 ರಿಂದ ಶೇ. 125 ಕ್ಕೆ ಏರಿಕೆ ಮಾಡಲಾಗಿದೆ. ವೈಯಕ್ತಿಕ ಸಾಲದ ಬಡ್ಡಿದರ ಹೆಚ್ಚಾಗಿರುವ ಕಾರಣ ಇನ್ನುಮುಂದೆ ಈ ಸಾಲವನ್ನು ಪಡೆಯುವ ಮುನ್ನ ಎಚ್ಚರ ವಹಿಸುವುದು ಉತ್ತಮ.

Personal Loan Rules
Image Credit: The Hindu Business Line

ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಮಾಡಬೇಕಾ…?
ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಪಡೆಯುವ ಪ್ರಕ್ರಿಯೆ ಇನ್ನುಮುಂದೆ ಗ್ರಾಹಕರಿಗೆ ಕಷ್ಟವಾಗುತ್ತದೆ. ಇನ್ನು ವೈಯಕ್ತಿಕ ಸಾಲವನ್ನು ಪಡೆಯುವ ಮುನ್ನ ಗ್ರಾಹಕರು ಬಹಳ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ವೈಯಕ್ತಿಕ ಸಾಲವನ್ನು ಪಡೆಯುವ ಮುನ್ನ ಎಲ್ಲ ವಿಚಾರದ ಬಗ್ಗೆ ಅರಿವಿರಬೇಕು. ವೈಯಕ್ತಿಕ ಸಾಲವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ ಎಂದಾದರೆ ಮಾತ್ರ ನೀವು ಸಾಲವನು ಪಡೆಯಬೇಕು. ವೈಯಕ್ತಿಕ ಸಾಲವು ಅಸುರಕ್ಷಿತ ಸಾಲ ಆಗಿರುವ ಕಾರಣ ಸಾಲ ಮರುಪಾವತಿಯ ಬಗ್ಗೆ ವಿಶೇಷ ಗಮನ ಹರಿಸಬೇಕು. ನೀವು ವೈಯಕ್ತಿಕ ಸಾಲವನ್ನು ಪಡೆಯುವ ಮುನ್ನ ಈ ವಿಚಾರಗಳ ತಿಳಿದಿರುವುದು ಉತ್ತಮ.

RBI ನ ನಿಯಮಗಳನ್ನ ತಿಳಿದುಕೊಳ್ಳಿ
•ನೀವು ವೈಯಕ್ತಿಕ ಸಾಲವನ್ನು ಪಡೆಯುವ ಮುನ್ನ ನಿಮ್ಮ ತಿಂಗಳ ಆದಾಯ ಎಷ್ಟಿದೆ ಎನ್ನುವುದನ್ನು ಮೊದಲು ಲೇಖರ ಹಾಕಿ. ನಿಮ್ಮ ಆದಾಯದಲ್ಲಿ ಎಲ್ಲ ಖರ್ಚುಗಳು ಕಳೆದ ನಂತರ ಸಾಲದ EMI ಪಾವತಿ ಸಾಧ್ಯವೇ..? ಎನ್ನುವುದರ ಬಗ್ಗೆ ಓದಲು ಗಮನಹರಿಸಬೇಕು. ಮಾಸಿಕ ಆದಾಯದ ಉಳಿತಾಯ ಇಲ್ಲದೆ ನೀವು ಹೆಚ್ಚಿನ ಸಾಲವನ್ನು ತೆಗೆದುಕೊಂಡರೆ ನಂತರ ಮರುಪಾವತಿಯ ವೇಳೆ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

Personal Loan Latest Update
Image Credit: Tata Capital

•ಇನ್ನು ನಿಮ್ಮಗೆ ಬ್ಯಾಂಕ್ ಸಾಲವನ್ನು ನೀಡುವ ಮೊದಲು ಕ್ರೆಡಿಟ್ ಸ್ಕೋರ್ ನ ಬಗ್ಗೆ ತಿಳಿಯುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೊರ್ ಅನ್ನು ಹೊಂದಿದ್ದಾರೆ ಮಾತ್ರ ಸಾಲವನ್ನು ನೀಡಲಾಗುತ್ತದೆ. ಕ್ರೆಡಿಟ್ ಸ್ಕೊರ್ ನಿಮ್ಮ ಸಾಲದ ಮರುಪಾವತಿಯ ಅರ್ಹತೆಯನ್ನು ಕೂಡ ನಿರ್ಧರಿಸುತ್ತದೆ. ಈ ಕಾರಣಕ್ಕೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳಿ.

Join Nadunudi News WhatsApp Group

•ಇನ್ನು ಮುಖ್ಯವಾಗಿ ನೀವು ಯಾವುದೇ ಬ್ಯಾಂಕ್ ನಲ್ಲಿ ಸಾಲವನು ಪಡೆಯುವ ಮೊದಲು ಬ್ಯಾಂಕ್ ನೀವು ಉದ್ಯೋಗದಲ್ಲಿದ್ದೀರಾ..? ಎನ್ನುವುದನ್ನು ಗಮನಯಿಸುತ್ತದೆ. ಹಾಗೆಯೆ ನೀವು ಪದೇ ಪದೇ ಉದ್ಯೋಗವನ್ನು ಬದಲಿಸುತ್ತಿದ್ದರೆ ನಿಮ್ಮಲ್ಲಿ ಸ್ಥಿರತೆ ಇಲ್ಲ ಎನ್ನುವ ಕಾರಣ ಸಾಲದ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇದೆ. ಹೀಗಾಗಿ ನೀವು ಒಂದೇ ಸ್ಥಳದಲ್ಲಿ ಉದ್ಯೋಗವನ್ನು ಮಾಡುವುದು ಅಗತ್ಯವಾಗಿದೆ.

Join Nadunudi News WhatsApp Group