Petrol Price: ವಾಹನ ಹೊಂದಿರುವವರಿಗೆ ಗುಡ್ ನ್ಯೂಸ್, ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಆಗಲಿದೆ.

ಕಚ್ಚಾ ತೈಲಗಳ ಬೆಲೆ ಇಳಿಕೆಯಾದ ಕಾರಣ ದೇಶದಲ್ಲಿ ಪೆಟ್ರೋಲ್ ಮತ್ತಿ ಡೀಸೆಲ್ ಬೆಲೆ ಕಡಿಮೆ ಆಗುವ ನಿರೀಕ್ಷೆ ಇದೆ.

Petrol And Diesel Price Decrease: ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ (New financial Year) ಆರಂಭಗೊಂಡಿದ್ದು ಅನೇಕ ನಿಯಮಗಳು ಬದಲಾಗಿವೆ. ಇತ್ತಿಚೆಗಂತೂ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಬಾರಿಯ ಹಣಕಾಸು ವರ್ಷ ಹಣದುಬ್ಬರದ ಪರಿಸ್ಥಿಯನ್ನು ಹೆಚ್ಚಿಸಿದೆ.

ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದಾರೆ. ಇನ್ನು ಕಚ್ಚಾ ತೈಲಗಳ ಬೆಲೆ ವಿಪರೀತ ಏರಿಕೆಯಾಗುತ್ತಲೇ. ಆದರೆ ಇದೀಗ ಸರ್ಕಾರ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ದರದಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆ.

Petrol And Diesel Price Decrease
Image Credit: firstpost

ವಾಹನ ಹೊಂದಿರುವವರಿಗೆ ಗುಡ್ ನ್ಯೂಸ್
ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಪೆಟ್ರೋಲ್ ಡೀಸೆಲ್ ಗಳ ಮೇಲಿನ ಬೇಡಿಕೆ ಹೆಚ್ಚಾಗಿವೆ. ಹಾಗಾಗಿ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಹಲವಾರು ಕಾರಣಗಳಿಂದ ಕಚ್ಚಾ ತೈಲಗಳ ಬೆಲೆ ಹೆಚ್ಚುತ್ತಿದೆ. ಹಲವಾರು ಜಾಗತಿಕ ವಿದ್ಯಮಾನಗಳಿಂದ ಪೆಟ್ರೋಲ್, ಡೀಸೆಲ್ ಗಳ ಬೆಲೆ ಪ್ರಭಾವಿಸಲ್ಪಡುತ್ತದೆ. ಕಳೆದ ಬಾರಿ ರಷ್ಯಾ ಹಾಗೂ ಉಕ್ರೇನ್ ಯುದ್ಧವೂ ಪ್ರಾರಂಭದ ಕಾರಣಕ್ಕಾಗಿ ಕಚ್ಚಾ ತೈಲಗಳ ಬೆಲೆ ಗಗನಕ್ಕೇರಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಆಗಲಿದೆ
ಇದೀಗ ಪ್ರತಿ ಟನ್ ಗೆ 4,100 ರೂ. ಗಳಿದ್ದ ಪೆಟ್ರೋಲಿಯಂ ಕಚ್ಚಾತೈಲದ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ ಎಂದು ಸರ್ಕಾರ ಸೂಚನೆ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನುವ ವರದಿಯಾಗಿದೆ. ಪೆಟ್ರೋಲ್ ಡೀಸೆಲ್ ಮತ್ತು ವಾಯುಯಾನ ಟರ್ಬೈನ್ ಇಂಧನದ ಮೇಲಿನ ತೆರಿಗೆಯನ್ನು ಸರ್ಕಾರ ಶೂನ್ಯಕ್ಕೆ ಇರಿಸಿದೆ.

Good news for vehicle owners
Image Credit: financialexpress

ತೈಲ ಬೆಲೆಯ ಏರಿಕೆ ಹಾಗೂ ಇಳಿಕೆಯ ಆಧಾರದ ಮೇಲೆ ಸರ್ಕಾರ ಹದಿನೈದು ದಿನಗಳಿಗೊಮ್ಮೆ ತೆರಿಗೆ ದರವನ್ನು ಪರಿಷ್ಕರಿಸುತ್ತದೆ. ಮೇ 1 ರಂದು ಸರ್ಕಾರವು ಪೆಟ್ರೋಲಿಯಂ ಮೇಲಿನ ತೆರಿಯನ್ನು ಪ್ರತಿ ಟನ್ ಗೆ 6,400 ರೂ. ಗಳಿಂದ 4,100 ರೂಪಾಯಿಗೆ ಇಳಿಸಿತ್ತು. ಹಾಗೆಯೆ ಏಪ್ರಿಲ್ 19 ರಂದು ತೈಲದ ಮೇಲಿನ ಸುಂಕವನ್ನು ಪ್ರತಿ ಟನ್ ಗೆ 6,400 ರೂ ಹೆಚ್ಚಿಸಿದೆ. ಇನ್ನು ಏಪ್ರಿಲ್ 4 ರಂದು ಭಾರತವು ಪೆಟ್ರೋಲಿಯಂ ಕಚ್ಚಾ ತೈಲಗಳ ತೆರಿಗೆಯನ್ನು ಪ್ರತಿ ಟನ್ ಗೆ 3,500 ರೂ. ಗಳಿಂದ ಶೂನ್ಯಕ್ಕೆ ಇಳಿಸಿತ್ತು.

Join Nadunudi News WhatsApp Group

Join Nadunudi News WhatsApp Group