Price Down: ಗ್ಯಾಸ್ ಬೆಲೆ ಇಳಿಕೆಯ ನಡುವೆ ವಾಹನ ಮಾಲೀಕರಿಗೆ ಕೇಂದ್ರದಿಂದ ಬಂಪರ್ ಗುಡ್ ನ್ಯೂಸ್, ಘೋಷಣೆಯೊಂದೇ ಭಾಕಿ.

ಇದೀಗ ಕೇಂದ್ರ ಸರ್ಕಾರ ಕಚ್ಚಾ ತೈಲಗಳ ಬೆಲೆಯ ಇಳಿಕೆಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.

Petrol Price Down: ಹೊಸ ವರ್ಷದ ಆರಂಭದಿಂದ ಜನರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ದಿನಕ್ಕೆ ಒಂದಾದರು ನಿತ್ಯ ಬಳಕೆಯ ವಸ್ತುವಿನ ಬೆಲೆ ಏರಿಕೆ ಕಾಣುತ್ತಿದೆ. ಪ್ರಸ್ತುತ ಜನರು ಯಾವುದೇ ವಸ್ತುಗಳನ್ನು ಖರೀದಿಸಬೇಕಿದ್ದರು ಹೆಚ್ಚಿನ ಹಣ ನೀಡಬೇಕಾಗಿದೆ. ಈ ಬಾರಿ ಹಣಕಾಸು ವರ್ಷ ಜನರ ಜೇಬಿಗೆ ಬಾರಿ ಪ್ರಮಾಣದಲ್ಲಿ ಕತ್ತರಿ ಹಾಕಿದೆ.

ಗ್ಯಾಸ್ ಸಿಲಿಂಡರ್(Cylinder), ಪೆಟ್ರೋಲ್(Petrol), ಡೀಸೆಲ್(Diesel) ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ಇತ್ತೀಚೆಗಂತೂ ಸೊಪ್ಪು, ತರಕಾರಿ, ಹಾಲು, ಅಡುಗೆ ಎಣ್ಣೆ, ಬೇಳೆಕಾಳು ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ಸದ್ಯ ಬೆಲೆ ಏರಿಕೆಯ ಪರಿಣಾಮದಿಂದ ತತ್ತರಿಸುತ್ತಿರುವ ಜನತೆಗೆ ಕೇಂದ್ರ ಸರ್ಕಾರ ಕೆಲ ವಸ್ತುಗಳ ಬೆಲೆಯಲ್ಲಿ ಇಳಿಕೆ ಮಾಡಲು ಮುಂದಾಗಿದೆ.

Petrol Price Down
Image Credit: Abplive

ವಸ್ತುಗಳ ಬೆಲೆಯ ಇಳಿಕೆಗೆ ಮುಂದಾದ ಕೇಂದ್ರ ಸರ್ಕಾರ
ಇನ್ನು ದೇಶದಲ್ಲಿ ಕಳೆದ ಎರಡು ತಿಂಗಳ ಹಿಂದೆ ಟೊಮೊಟೊ ಗಣನೀಯ ಏರಿಕೆ ಕಂಡಿತ್ತು. ಆದರೆ ಇದೀಗ ಟೊಮೊಟೊ ದರ ಇಳಿಕೆ ಕಾಣುವ ಮೂಲಕ ಜನರಿಗೆ ಖುಷಿ ನೀಡಿದೆ. ಇನ್ನು ಜನರು ಹೆಚ್ಚಾಗಿ ಗ್ಯಾಸ್ ಬೆಲೆಯ ಇಲಖೆಯ ನಿರೀಕ್ಷೆಯಲ್ಲಿದ್ದರು. ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಬೆಲೆ ಪರಿಷ್ಕರಣೆ ಆಗುತ್ತದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಇಳಿಕೆ ಘೋಷಿಸಿದ್ದು ಇದೀಗ ಇದರ ಬೆನ್ನಲ್ಲೇ ಕಚ್ಚಾ ತೈಲಗಳ ಬೆಲೆಯ ಇಳಿಕೆಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಘೋಷಣೆಯ ಬೆನ್ನಲ್ಲೇ ಜನಸಾಮಾನ್ಯರಿಗೆ ಸಿಹಿ ಸುದ್ದಿ
ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಇದರ ಜೊತೆಗೆ ಈ ಯೋಜನೆಯಡಿ ಕೇಂದ್ರವು ದೇಶದಲ್ಲಿ 75 ಲಕ್ಷ ಹೊಸ LPG ಸಂಪರ್ಕವನ್ನು ಘೋಷಿಸಿದೆ. ಇನ್ನು ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬೆನ್ನಲ್ಲೇ ಇದೀಗ ಶೀಘ್ರದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡುವ ಬಗ್ಗೆ ಸೂಚನೆ ಲಭಿಸಿದೆ.

petrol and diesel price
Image Credit: Indianexpress

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಸಾಧ್ಯತೆ
ಕಚ್ಚಾ ತೈಲಗಳ ಬೆಲೆಯ ಏರಿಕೆಯಿಂದಾಗ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆಯುತ್ತಿವೆ. ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳು ಬೇಡಿಕೆ ಕಳೆದುಕೊಳ್ಳುತ್ತಿರುವ ಕಾರಣ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಅನಿವಾರ್ಯವಾಗಿದೆ.

Join Nadunudi News WhatsApp Group

ಬೆಲೆ ಏರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಸದ್ಯದಲ್ಲೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿ ಜನರಿಗೆ ಸ್ವಲ್ಪ ಪ್ರಮಾಣದ ಆರ್ಥಿಕ ಹೊರೆ ಕಡಿಮೆ ಮಾಡಲಿದೆ. ಇನ್ನು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಕಡಿತಗೊಳಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group