Pakistan Inflation: ಮತ್ತಷ್ಟು ದಿವಾಳಿಯಾದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಕಂಡು ದಂಗಾದ ಜನರು.

ಪಾಕಿಸ್ತಾನದಲ್ಲಿ ಗಗನಕ್ಕೆ ಏರಿದ ಪೆಟ್ರೋಲ್ ಬೆಲೆ, ಕಂಗಾಲಾದ ಗ್ರಾಹಕರು

Petrol Price In Pakistan: ಪಾಕಿಸ್ತಾನದಲ್ಲಿ ಮತ್ತೊಮ್ಮೆ ಹಣದುಬ್ಬರತೆಯ ಪರಿಸ್ಥಿತಿ ಎದುರಾಗಿದೆ. ಜನರು ಈಗಾಗಲೇ ಹಣದುಬ್ಬರತೆಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಸದ್ಯ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದ ಜನರು ಹಣದುಬ್ಬರತೆಗೆ ಸಿಲುಕುವಂತಾಗಿದೆ. ಆರ್ಥಿಕತೆಯಲ್ಲಿ ಪಾಕಿಸ್ತಾನವು ಬಹುತೇಕ ಹಿಂದುಳಿದಿದೆ ಎನ್ನಬಹುದು. ಸದ್ಯ ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆ ಎಂದರೆ ತಪ್ಪಾಗಲಾರದು.

ಆರ್ಥಿಕ ಬಿಕ್ಕಟ್ಟಿನ ಕಾರಣ ಪಾಕಿಸ್ತಾನದಲ್ಲಿ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಸದ್ಯ ಪಾಕಿಸ್ತಾನದಲ್ಲಿ ಎಲ್ಲವು ದುಬಾರಿಯಾಗಿದ್ದು, ಜನರು ಕಂಗಾಲಾಗುವಂತಾಗಿದೆ. ಇನ್ನು ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಹಿಟ್ಟಿನ ಬೆಲೆ ಕೇಳಿದರೆ ನೀವು ಅಚ್ಚರಿ ಪಡುವುದಂತೂ ಖಚಿತ. ಏಕೆಂದರೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಅಷ್ಟೊಂದು ದುಬಾರಿಯಾಗಿದೆ ಎನ್ನಬಹುದು.

Petrol Price In Pakistan
Image Credit: Dailyausaf

ಮತ್ತಷ್ಟು ದಿವಾಳಿಯಾದ ಪಾಕಿಸ್ತಾನ
ಭಯೋತ್ಪಾದಕರಿಗೆ ಆಹಾರ ನೀಡುವುದು, ಅವರಿಗೆ ಆರ್ಥಿಕ ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಈ ಕಾರಣಕ್ಕಾಗಿಯೇ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎದುರು ಹಣಕ್ಕಾಗಿ ಪಾಕಿಸ್ತಾನ ಪರಿತಪಿಸುತ್ತಿದೆ. ಅಲ್ಲದೇ ಹಣದುಬ್ಬರ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ.

ಪೆಟ್ರೋಲ್ ಬೆಲೆ ಕಂಡು ದಂಗಾದ ಜನರು
ಹೌದು, ಪ್ರತಿ ಲೀಟರ್ ಪೆಟ್ರೋಲ್ ಗೆ 290 ರೂ. ನೀಡಬೇಕಾದ ಪರಿಸ್ಥಿತಿ ಪಾಕಿಸ್ತಾನ ಜನತೆಗೆ ಎದುರಾಗಿದೆ. ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ 800 ರೂ. ನೀಡಬೇಕಾಗಿದೆ. ಇದರಿಂದಾಗಿ ಪಾಕಿಸ್ತಾನದ ನಾಗರಿಕರು ತತ್ತರಿಸಿ ಹೋಗಿದ್ದಾರೆ. ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

Petrol Price Hike In Pakistan
Image Credit: Tribune

ಈಗ ಪಾಕಿಸ್ತಾನದಲ್ಲಿ ಗೋಧಿ ಕಟಾವು ಮಾಡುವ ಸೀಸನ್. ಹೀಗಿದ್ದರೂ ಒಂದು ಕೆಜಿ ಗೋಧಿ ಹಿಟ್ಟು 800 ರೂ. ಕೊಡಬೇಕು. ಈಗ ರೊಟ್ಟಿಗೆ 25 ರೂ. ನೀಡಬೇಕು. ಇದರಿಂದ ಜನಸಾಮಾನ್ಯರು ಮೂರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಹಿಂದೆ ಒಂದು ಕೆ.ಜಿ ಹಿಟ್ಟು 230 ರೂ. ಇತ್ತು. ಆದರೆ ದಿಢೀರ್ 800 ರೂ. ಏರಿಕೆಯಾಗಿದೆ. ಒಂದು ಲೀಟರ್ ಹಾಲಿಗೆ 212, ಅಕ್ಕಿ ಕೆಜಿಗೆ 330, ಸೇಬು ಕೆಜಿಗೆ 300, ಟೊಮೆಟೊ ಕೆಜಿಗೆ 125, ಈರುಳ್ಳಿ ಕೆಜಿಗೆ 125, ಪೆಟ್ರೋಲ್ ಲೀಟರ್‌ ಗೆ 290 ಆಗಿದ್ದು , ಜನರು ಎಲ್ಲ ವಸ್ತುಗಳನ್ನು ಖರೀದಿಸಲು ಯೋಚಿಸುವಂತಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪಾಕಿಸ್ತಾನದ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Join Nadunudi News WhatsApp Group

1 Liter Petrol Price In Pakistan
Image Credit: India TV News

Join Nadunudi News WhatsApp Group