ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ, ಅಯ್ಯೋ ಪಾಪಾ ಅನಿಸುತ್ತದೆ ನೋಡಿ.

ಹಣದುಬ್ಬರ ಅನ್ನುವುದು ಕೆಲವು ದೇಶವನ್ನ ಯಾವ ರೀತಿಯಲ್ಲಿ ಕಾಡುತ್ತಿದೆ ಅಂದರೆ ಅಲ್ಲಿನ ಜನರ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಇನ್ನು ಹೆಚ್ಚು ಹಣದುಬ್ಬರ ಸಮಸ್ಯೆಯನ್ನ ಎದುರಿಸುತ್ತಿರುವ ದೇಶ ಅಂದರೆ ಅದು ಪಾಕಿಸ್ತಾನ ಮತ್ತು ಶ್ರೀಲಂಕಾ ಎಂದು ಹೇಳಿದರೆ ತಪ್ಪಾಗಲ್ಲ. ಶ್ರೀಲಂಕಾದ ಜನರಿಗೆ ಊಟಕ್ಕೂ ಇಲ್ಲದ ಪರಿಸ್ಥಿತಿ ಈಗ ಉಂಟಾಗಿದ್ದು ಅಲ್ಲಿನ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆ ಏರಿದೆ ಎಂದು ಹೇಳಬಹುದು. ಒಂದು ಕಡೆ ರಷ್ಯಾ ಮತ್ತು ಉಕ್ರೇನ್ ದೇಶದ ಯುದ್ಧದ ಕಾರಣ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಇನ್ನೊಂದು ಕಡೆ ಹಣದುಬ್ಬರದ ಕಾರಣ ಶ್ರೀಲಂಕಾದಲ್ಲಿ ಜನರ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಹೇಳಬಹುದು.

ಇನ್ನು ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಎಂದು ತಿಳಿದರೆ ನಿಮಗೆ ಕೂಡ ಅಯ್ಯೋ ಪಾಪಾ ಅನಿಸುತ್ತದೆ. ಹಾಗಾದರೆ ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು ಶ್ರೀಲಂಕಾದಲ್ಲಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು ಇದರ ನಡುವೆ ಪೆಟ್ರೋಲ್ ಮತ್ತು ಡಿಸೇಲ್ ಬೆಳೆಗಳು ಕೂಡ ಗಗನಕ್ಕೆ ಏರಿದೆ. ಶ್ರೀಲಂಕಾದಲ್ಲಿ ಪೆಟ್ರೋಲ್ ಅಭಾವ ತುಂಬಾ ಆಗಿದ್ದು ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಇಲ್ಲದೆ ಅದೆಷ್ಟೋ ಜನರು ತಮ್ಮ ವಾಹನವನ್ನ ತಳ್ಳಿಕೊಂಡು ಹೋಗುತ್ತಿದ್ದಾರೆ.

Petrol rate in srilanka

ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಪ್ರಸ್ತುತ ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಬರೋಬ್ಬರಿ 423 ರೂಪಾಯಿ ಆಗಿದೆ ಮತ್ತು ಡಿಸೇಲ್ ಬೆಲೆ 400 ರೂಪಾಯಿಯ ಸಮೀಪದಲ್ಲಿ ಇದೆ. ಶ್ರೀಲಂಕಾ ಈಗಿನ ಪರಿಸ್ಥಿತಿ ಕಂಡರೆ ಅಲ್ಲಿನ ಜನರು ಊಟಕ್ಕೆ ಆಹಾರವಿಲ್ಲದೆ, ಕುಡಿಯಲು ಸರಿಯಾಗಿ ನೀರು ಇಲ್ಲದೆ ಪರದಾಡುವ ಪರಿಸ್ಥಿತಿ ಈಗ ಉಂಟಾಗಿದೆ. ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಇಲ್ಲದೆ ಪೆಟ್ರೋಲ್ ಬಂಕ್ ಗಳನ್ನ ಮುಚ್ಚಲಾಗಿದೆ.

ಇನ್ನು ಅಲ್ಲಿನ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆ ಆಗತ್ತಾ ಇದ್ದು ಮುಂದಿನ ವಾರ ಪೆಟ್ರೋಲ್ ಬೆಲೆ 500 ರೂಪಾಯಿ ಗಡಿ ದಾಟುವ ಎಲ್ಲಾ ಲಕ್ಷಣ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ನಿನ್ನೆ ಮಾಜಿ ಕ್ರಿಕೆಟ್ ಆಟಗಾರರೊಬ್ಬರು ಆಹಾರ ನೀರು ಇಲ್ಲದೆ ಪರದಾಡುತ್ತಿರುವ ಜನರಿಗೆ ಟೀ ಮತ್ತು ಬ್ರೆಡ್ ನೀಡಿ ಸಹಾಯವನ್ನ ಮಾಡಿದರು. ಸದ್ಯ ಶ್ರೀಲಂಕಾ ಸರ್ಕಾರ ಅಲ್ಲಿನ ಹಣದುಬ್ಬರದ ಸಮಸ್ಯೆಯನ್ನ ಹತೋಟಿಗೆ ತರುವಲ್ಲಿ ವಿಫಲವಾಗಿದೆ. ಸ್ನೇಹಿತರೆ ಶ್ರೀಲಂಕಾದ ಈಗಿನ ಪರಿಸ್ಥಿತಿ ನೋಡಿದರೆ ನಿಮಗೆ ಏನನಿಸುತ್ತದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Petrol rate in srilanka

Join Nadunudi News WhatsApp Group