Phone Hack: ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಇದ್ದರೆ ಈಗಲೇ ಆಫ್ ಮಾಡಿ, ಇಲ್ಲವಾದರೆ ಹ್ಯಾಕ್ ಆಗಲಿದೆ.

ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಇದ್ದರೆ ಈಗಲೇ ಆಫ್ ಮಾಡಿ

Phone Hack Alert: ಸದ್ಯ ದೇಶದಲ್ಲಿ ಸಾಕಷ್ಟು ವಿಧದಲ್ಲಿ ವಂಚನೆ ಮಾಡಲಾಗುತ್ತಿದೆ. ಜನರು ಎಷ್ಟೇ ಎಚ್ಚರಿಕೆ ವಹಿಸಿದರು ಕೂಡ ವಂಚಕರು ಯಾವುದರರು ರೂಪದಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಇನ್ನು ವಂಚನೆಯ ತಡೆಗಾಗಿ ಅದೆಷ್ಟೇ ಕ್ರಮ ಕೈಗೊಳ್ಳುತ್ತಿದ್ದರೂ ಕೂಡ ಸೈಬರ್ ಕ್ರೈಮ್ ಗೆ ಬ್ರೇಕ್ ಹಾಕಲು ಆಗುತ್ತಿಲ್ಲ.

ವಂಚಕರು ಜನಸಾಮಾನ್ಯರ ಖಾತೆಗೆ ಕನ್ನ ಹಾಕಲು ವಿವಿಧ ಮಾರ್ಗಗಳನ್ನು ಉಪಯೋಗಿಸುತ್ತಿದ್ದಾರೆ. ಕೆಲವು ಅಪ್ಲಿಕೇಶನ್‌ ಗಳ ಮೂಲಕ ಹೊಸ ಮಾಲ್‌ ವೇರ್ ನಿಮ್ಮ ಫೋನ್‌ ಗಳನ್ನು ಪ್ರವೇಶಿಸಿರುವ ಸಾಧ್ಯತೆಯಿದೆ. ಈ ಮೂಲಕ ಹ್ಯಾಕರ್‌ ಗಳು ನಿಮ್ಮ ಫೋನ್‌ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಸೈಬರ್ ಅಪರಾಧಿಗಳು ಸಾಮಾನ್ಯ ಜನರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಇನ್ನು ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಇದ್ದರೆ ನಿಮ್ಮ ಫೋನ್ ಹ್ಯಾಕ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Phone Hack Alert
Image Credit: Times Now News

ಮೊಬೈಲ್ ಬಳಕೆದಾರರಿಗೆ ಈ ಸೆಟ್ಟಿಂಗ್ ಗಳ ಬಗ್ಗೆ ಎಚ್ಚರವಿರಲಿ…!
ನಾವು ಸಾಮಾನ್ಯವಾಗಿ ಮೊಬೈಲ್ ಬಳಸುವಾಗ ಅಥವಾ ಹೊಸ ಸ್ಮಾರ್ಟ್‌ ಫೋನ್ ಖರೀದಿಸುವಾಗ ವೈಶಿಷ್ಟ್ಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಇದರ ಬಗ್ಗೆ ತಿಳಿದಿಲ್ಲದ ಕಾರಣ, ಅವರು ನಮಗೆ ತಿಳಿಯದೆ ಪ್ರಾರಂಭದಲ್ಲಿ ಅನೇಕ ವೈಶಿಷ್ಟ್ಯಗಳು ಮತ್ತು ಆಯ್ಕೆಗಳನ್ನು ಬಳಸಲು ಅನುಮತಿಸುತ್ತಾರೆ. ಸಮಯ ಕಳೆದಂತೆ ನೀವು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳು, ಬ್ಯಾಂಕಿಂಗ್ ಅಪ್ಲಿಕೇಶನ್, ಕರೆಗಳು, ಸಂದೇಶಗಳನ್ನು ಲೋಡ್ ಮಾಡಿ ಮತ್ತು ಯಾವುದೇ ವೈಶಿಷ್ಟ್ಯಗಳನ್ನು ನೀವು ಬಳಸುವುದಿಲ್ಲ. ಕೆಲವು ಸೆಟ್ಟಿಂಗ್‌ ಗಳಿಂದ ಫೋನ್ ಅನ್ನು ಹ್ಯಾಕ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಹೀಗಾಗಿ ಫೋನ್ ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಲು ನೀವು ಇಂದೇ ಈ ಸೆಟ್ಟಿಂಗ್ ಅನ್ನು ಆಫ್ ಮಾಡಿ.

ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಇದ್ದರೆ ಈಗಲೇ ಆಫ್ ಮಾಡಿ
ಮೊದಲು ನಿಮ್ಮ ಮೊಬೈಲ್‌ ನಲ್ಲಿ ಗೂಗಲ್ ಅನ್ನು ತೆರೆಯಿರಿ. ಅಲ್ಲಿ ಕಂಡುಬರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್‌ ಗಳಿಗೆ ಹೋಗಿ. ಇಲ್ಲಿ ನೀವು ಗೌಪ್ಯತೆ ಸೆಟ್ಟಿಂಗ್‌ ಗಳ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ, ಸೇಫ್ ಬ್ರೌಸಿಂಗ್ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ, ನೀವು ಮೂರು ಆಯ್ಕೆಗಳನ್ನು ಪಡೆಯುತ್ತೀರಿ. ನೀವು ಮೂರು ಆಯ್ಕೆಗಳನ್ನು ನೋಡುತ್ತೀರಿ Enhanced Protection, Standard Protection and No protection (Not Recommended).

Phone Hack Latest News
Image Credit: Theguardian

Standard Browsing or No Protection Browsing ಆಯ್ಕೆಯನ್ನು ಆನ್ ಮಾಡಿದ್ದರೆ, ನಿಮ್ಮ ಮೊಬೈಲ್ ಯಾವಾಗ ಬೇಕಾದರೂ ಹ್ಯಾಕರ್‌ ಗಳ ಗುರಿಯಾಗಬಹುದು. ಫೋನ್ ಕೂಡ ಹ್ಯಾಕ್ ಆಗಬಹುದು. ತಕ್ಷಣವೇ ಅದನ್ನು Enhanced Protection ಆಯ್ಕೆಗೆ ಬದಲಿಸಿ. ಇದರಿಂದ ನಿಮ್ಮ ಫೋನ್ ಹ್ಯಾಕ್ ಆಗುವುದನ್ನು ತಪ್ಪಿಸಿಕೊಳ್ಳಬಹುದು. ನೀವು Enhanced Protection ಆಯ್ಕೆಯನ್ನು ಆನ್ ಮಾಡುವುದರಿಂದ ಹೆಚ್ಚಿನ ಸಮಸ್ಯೆಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು. ನಿಮ್ಮ ಫೋನ್ ಹ್ಯಾಕ್ ಆದರೆ ನಿಮ್ಮ ವೈಯಕ್ತಿಕ ಡೇಟಾ ಸೋರಿಲೆಯಾಗುವುದರ ಜೊತೆಗೆ ನೀವು ಹಣಕಾಸಿನ ವಿಚ್ಛ್ರಾವಾಗಿಯೂ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದು ನಿಮಗೆ ಅರಿವಿರಲಿ.

Join Nadunudi News WhatsApp Group

Phone Hack Alert News
Image Credit: Techradar

Join Nadunudi News WhatsApp Group