Pig Farming: 30 ಸಾವಿರ ಹೂಡಿಕೆಯಲ್ಲಿ ಹಂದಿ ಫಾರ್ಮ್ ಆರಂಭಿಸಿದರೆ ವರ್ಷಕ್ಕೆ 16 ಲಕ್ಷ ಆದಾಯ, ಇಂದೇ ಆರಂಭಿಸಿ ಬಿಸಿನೆಸ್

ಕಡಿಮೆ ಹೂಡಿಕೆಯ ಮೂಲಕ ಹಂದಿ ಸಾಕಾಣಿಕೆ ಆರಂಭ ಮಾಡಿದರೆ ದೊಡ್ಡ ಮಟ್ಟದ ಲಾಭ ಗಳಿಸಬಹುದು

Pig Farming Business Plan: ಹಲವು ವ್ಯವಹಾರಗಳು ಉತ್ತಮ ಲಾಭ ನೀಡುವುದು ಎಂದು ನಮಗೆ ತಿಳಿದಿದೆ. ಅದರಲ್ಲಿ ಹಂದಿ ಸಾಕಾಣಿಕೆ ಕೂಡ ಒಂದಾಗಿದೆ. ಹಲವರಿಗೆ ಈ ವಿಚಾರ ತಿಳಿದಿಲ್ಲ. ಹೌದು ಹಂದಿ ಸಾಕಾಣಿಕೆ ಮಾಡುವುದರಿಂದ ಉತ್ತಮ ಆದಾಯ ಗಳಿಸಬಹುದಾಗಿದೆ. ಉತ್ತಮ ಉದ್ಯೋಗ ಆಯ್ಕೆಯಲ್ಲಿ ಈಗ ಹಂದಿ ಸಾಕಣಿ ಕೂಡ ಒಂದು.

ಈ ಕೆಲಸದ ಮೂಲಕ ಜನರು ಈಗ ಉತ್ತಮ ಹಣವನ್ನು ಗಳಿಸುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಉತ್ತರ ಪ್ರದೇಶದ ಅಲಹಾಬಾದ್‌ನ ನಾಗೇಂದ್ರ ಪ್ರತಾಪ್ ಸಿಂಗ್. ಕೃಷಿ ತಂತ್ರಜ್ಞಾನದಲ್ಲಿ ಪದವಿ ಪಡೆದ ನಂತರ, ನಾಗೇಂದ್ರ ಅವರು ತರಬೇತಿಯನ್ನು ಪಡೆದು ಹಂದಿ ಸಾಕಾಣಿಕೆಯನ್ನು ಪ್ರಾರಂಭ ಮಾಡಿದರು.

Pig Farming Business Plan
Image Credit: Farmingfarmersfarms

ಹಂದಿ ಸಾಕಾಣಿಕೆಯಿಂದ ಉತ್ತಮ ಆದಾಯ ಗಳಿಸುವುದಲ್ಲದೆ, ಇತರರಿಗೂ ತರಬೇತಿ ನೀಡುತ್ತಿದ್ದಾರೆ

ನಾಗೇಂದ್ರ ಅವರು ಕೃಷಿ ತಂತ್ರಜ್ಞಾನದಲ್ಲಿ ಪದವಿ ಮುಗಿಸಿದ ನಂತರ ಕೃಷಿ ವಿಜ್ಞಾನ ಕೇಂದ್ರ, ಕೌಶಂಬಿ, ಉತ್ತರ ಪ್ರದೇಶದ ಕೃಷಿ ಕ್ಲಿನಿಕ್ ಮತ್ತು ಅಗ್ರಿ-ಬಿಸಿನೆಸ್ ಸೆಂಟರ್ ಯೋಜನೆಯಡಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡರು. ಅದಾದ ನಂತರ ಆರಂಭಿಸಿದ ವ್ಯವಹಾರವೇ ಹಂದಿ ಸಾಕಾಣಿಕೆ. ಈ 6 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಹಂದಿ ಸಾಕಣೆ ಕುರಿತು ತರಬೇತಿ ಪಡೆದರು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ಹಂದಿಗಳನ್ನು ಸಾಕಲು ಪ್ರಾರಂಭಿಸಿದರು.

ಸಣ್ಣ ಬಂಡವಾಳದಿಂದ ಪ್ರಾರಂಭಿಸಿದ ವ್ಯವಹಾರ

Join Nadunudi News WhatsApp Group

ನಾಗೇಂದ್ರ ತಮ್ಮ ಉಳಿತಾಯದ ಹಣ 30,000 ಬಂಡವಾಳದಲ್ಲಿ ಹಂದಿ ಸಾಕಾಣಿಕೆ ಆರಂಭಿಸಿದರು. ಯಾರ್ಕ್‌ಷೈರ್ ತಳಿಯ 10 ಸಣ್ಣ ಹಂದಿಗಳನ್ನು ಖರೀದಿಸಿದರು. 2 ಗಂಡು ಮತ್ತು 8 ಹೆಣ್ಣು. ಇದಾದ ನಂತರ ತನ್ನ ಮನೆಯ ಹಿಂದೆ 700 ಚದರ ಅಡಿ ಪೂರ್ವಜರ ಜಮೀನಿನಲ್ಲಿ ಒಂದು ವರ್ಷ ಹಂದಿಗಳನ್ನು ಸಾಕಿದರು. ಈ ಕೆಲಸದಲ್ಲಿ ಹಂದಿಗಳಿಗೆ ಆಹಾರದ ಸಮಸ್ಯೆಯಾದರಿಂದ ನಗರದ ಸಣ್ಣ ಮತ್ತು ದೊಡ್ಡ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸಿ ಅಲ್ಲಿ ಹಾಳಾದ ಮತ್ತು ಉಳಿದ ಆಹಾರವನ್ನು ತನಗೆ ನೀಡುವಂತೆ ವಿನಂತಿಸಿದೇನು ಎಂದು ನಾಗೇಂದ್ರ ಅವರು ಹೇಳಿಕೊಂಡರು.

Pig Farming Profit
Image Credit: Pigprogress

ಹಂದಿ ಸಾಕಾಣಿಕೆಯಲ್ಲಿ 16 ಲಕ್ಷಕ್ಕೂ ಹೆಚ್ಚು ವ್ಯಾಪಾರ ವಹಿವಾಟು

ನಾಗೇಂದ್ರ ಅವರು ಒಂದು ವರ್ಷದ ನಂತರ ಅವರು ಸಾಕಿದ ಹಂದಿಗಳನ್ನು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದರು. ಹೀಗೆ ಹಂದಿಗಳನ್ನು ಮಾರಾಟ ಮಾಡಿ ಉತ್ತಮ ಲಾಭ ಪಡೆದಿದ್ದು ಅಚ್ಚರಿ ಮೂಡಿಸಿದೆ. ನಂತರ ಅವನು ತನ್ನ ಲಾಭದಿಂದ ಹೆಚ್ಚು ಹಂದಿಗಳನ್ನು ಖರೀದಿಸಿದರು. ಸದ್ಯ 60 ಹಂದಿಮರಿಗಳೊಂದಿಗೆ ಹಂದಿ ಫಾರಂ ನಡೆಸುತ್ತಿದ್ದಾರೆ ಎನ್ನಲಾಗಿದೆ.

Join Nadunudi News WhatsApp Group