Pink Bus: ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಬಿಗ್ ಅಪ್ಡೇಟ್, ಸರ್ಕಾರದ ಇನ್ನೊಂದು ನಿರ್ಧಾರ

ರಾಜ್ಯದ ಮಹಿಳೆಯರಿಗಾಗಿ ರಸ್ತೆಗಿಳಿಯಲಿದೆ ಪಿಂಕ್ ಬಸ್

Pink Buses For Women’s: ಸದ್ಯ ರಾಜ್ಯದಲ್ಲಿ ಶಕ್ತಿ ಯೋಜನೆಯದು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣವನ್ನು ಪಡೆಯುತ್ತಿದ್ದಾರೆ. ಒಂದು ರೂ. ಹಣವನ್ನು ಪಾವತಿಸದೇ ರಾಜ್ಯದಲ್ಲಿನ ಮೂಲೆ ಮೂಲೆಗೂ ಕೂಡ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ. ಸದ್ಯ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಮಹಿಳಾ ಪ್ರಯಾಣಿಕರಿಗಾಗಿ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.

Pink Buses For Women's
Image Credit: India

ರಾಜ್ಯದ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್
ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಯೋಜನೆಯಿಂದಾಗಿ ನಾಲ್ಕು ನಿಗಮಗಳ ಬಸ್‌ ಗಳಲ್ಲಿ ಒಟ್ಟು 259 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಸಾರಿಗೆ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಅದಕ್ಕಾಗಿಯೇ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಬಸ್ ಓಡಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ ನೀಡಿದೆ.

ರಾಜ್ಯದ ಮಹಿಳೆಯರಿಗಾಗಿ ರಸ್ತೆಗಿಳಿಯಲಿದೆ ಪಿಂಕ್ ಬಸ್
ಮಹಿಳಾ ಪ್ರಯಾಣಿಕರಿಗಾಗಿ ರಾಜ್ಯ ಸಾರಿಗೆ ಇಲಾಖೆ ಮತ್ತೊಂದು ಪ್ರಯೋಜನವನ್ನು ನೀಡಲು ಮುಂದಾಗಿದೆ. ರಾಜ್ಯದಲ್ಲಿ ಪ್ರತಿದಿನ 60 ರಿಂದ 63 ಲಕ್ಷ ಮಹಿಳೆಯರು ಉಚಿತ ಬಸ್ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಬಸ್‌ ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಬಸ್ಸುಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಅವರಿಗಾಗಿಯೇ ವಿಶೇಷವಾಗಿ ಪಿಂಕ್ ಬಸ್ ಗಳನ್ನು ರಸ್ತೆಗಿಳಿಸುವ ಯೋಜನೆ ಜಾರಿಯಲ್ಲಿದೆ. ಪ್ರಾಯೋಗಿಕವಾಗಿ ಈ ಬಸ್‌ ಗಳನ್ನು ಬಿಎಂಟಿಸಿಗೆ ಬಿಡಲು ಸಾರಿಗೆ ಇಲಾಖೆ ಮುಂದಾಗಿದೆ.

Pink Bus Service of Ladies
Image Credit: Whatshot

BMTC, KSRTC ಸೇರಿದಂತೆ ನಾಲ್ಕೂ ನಿಗಮಗಳ ಬಸ್‌ ಗಳಲ್ಲಿ ಮಹಿಳೆಯರಿಗೆ ಆಸನಗಳಿವೆ. ಆದರೆ ಬಿಎಂಟಿಸಿಯಲ್ಲಿ ಮಾತ್ರ ಈ ನಿಯಮ ಪಾಲಿಸಲಾಗುತ್ತಿದೆ. ಈ ಹಿಂದೆ ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬಸ್‌ ಗಳಿದ್ದವು. ಅದೇ ಮಾದರಿಯಲ್ಲಿ ಮತ್ತೆ ಪಿಂಕ್ ಬಸ್ (ಮಹಿಳಾ ಬಸ್) ಆರಂಭಿಸಲು ಸರ್ಕಾರ ಮುಂದಾಗಿದೆ. ಇನ್ನುಮುಂದೆ ಉಚಿತ ಪ್ರಯಾಣವನ್ನು ಮಾಡುವ ಮಹಿಳೆಯರು ಈ ಪ್ರತ್ಯೇಕ ಬಸ್ ನಲ್ಲಿ ಪ್ರಯಾಣವನ್ನು ಮಾಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group