Pink WhatsApp: ಏನಿದು ಪಿಂಕ್ ವಾಟ್ಸಾಪ್, ವಾಟ್ಸಪ್ ಈ ಕಲರ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ.

ಪಿಂಕ್ ಕಲರ್ ವಾಟ್ಸಾಪ್ ಬಂದಿದ್ದು ಇದೊಂದು ಸ್ಕ್ಯಾಮ್ ಎಂದು ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ.

Pink WhatsApp Link Scam: ವಿಶ್ವದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ (WhatsApp) ಅನ್ನು ಭಾರತದಲ್ಲಿ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಈಗಂತೂ ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಫೀಚರ್ ಗಳು ಬಿಡುಗಡೆಗೊಳ್ಳುತ್ತಿದೆ. ಮೆಟಾ ಮಾಲೀಕತ್ವದ ವಾಟ್ಸಾಪ್ ಇದೀಗ ಹತ್ತು ಹಲವು ಹೊಸ ಹೊಸ ಫೀಚರ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ದಿನೇ ದಿನೇ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಬಿಡುಗಡೆಗೊಳ್ಳುತ್ತಿದೆ. ಇನ್ನು ವಾಟ್ಸಾಪ್ ನಲ್ಲಿ ಹೆಚ್ಚು ಹೆಚ್ಚು ಫೀಚರ್ ಬಿಡುಗಡೆಗೊಳ್ಳುದರ ಜೊತೆಗೆ ಕೆಲವು ವಂಚನೆಗಳು ನಡೆಯುತ್ತಿವೆ. ಇದೀಗ ವಾಟ್ಸಾಪ್ ನ ಮೂಲಕ ವಂಚನೆಗಳು ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Pink WhatsApp Link Scam
Image Credit: Techthirsty

ಹೆಚ್ಚುತ್ತಿದೆ ಪಿಂಕ್ ವಾಟ್ಸಾಪ್ ವಂಚನೆಗಳು
ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ಯಾವುದೇ ಸಣ್ಣ ವೈಯಕ್ತಿಕ ಮಾಹಿತಿ ಇದ್ದರು ಕೂಡ ಜನರನ್ನು ಸುಲಭವಾಗಿ ವಂಚಿಸಬಹುದಾಗಿದೆ. ಇನ್ನು ಜನರನ್ನು ಮೋಸಮಾಡುವ ದೃಷ್ಟಿಯಿಂದ ಆನ್ಲೈನ್ ನಲ್ಲಿ ವಂಚಕರು ಪಿಂಕ್ ವಾಟ್ಸಾಪ್ ಲಿಂಕ್ ಅನ್ನು ಬಳಸುತ್ತಿದ್ದಾರೆ. ಪಿಂಕ್ ವಾಟ್ಸಾಪ್ ಲಿಂಕ್ ಮೂಲಕ ಜನರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ.

ಪಿಂಕ್ ವಾಟ್ಸಾಪ್ ಲಿಂಕ್
ಇನ್ನು ವಾಟ್ಸಾಪ್ ನಲ್ಲಿ ಹೊಸ ಹೊಸ ಫೀಚರ್ ಬಿಡುಗಡೆಗೊಂಡಿರುವ ಕಾರಣ ಹೊಸ ಹೊಸ ಅಪ್ಡೇಟ್ ಪಡೆಯುವ ಸಲುವಾಗಿ ಗ್ರಾಹಕರು ಯಾವುದೇ ರೀತಿಯ ಲಿಂಕ್ ಇದ್ದರು ಕೂಡ ಅದನ್ನು ಆರಿಸುತ್ತಾರೆ.

ಇದೆ ಕಾರಣಕ್ಕೆ ವಂಚಕರು ಪಿಂಕ್ ವಾಟ್ಸಾಪ್ ಲಿಂಕ್ ಅನ್ನು ನೀಡುವ ಮೂಲಕ ಹೊಸ ಆವೃತ್ತಿಯ ವಾಟ್ಸಾಪ್ ಬಳಸಬಹುದು ಎನ್ನುವ ಆಮಿಷ ಒಡ್ಡುವ ಮೂಲಕ ಜನರನ್ನು ಮೋಸ ಮಾಡುತ್ತಿದ್ದಾರೆ. ಪಿಂಕ್ ವಾಟ್ಸಾಪ್ ಲಿಂಕ್ ಅನ್ನೂ ಬಳಸಿದರೆ ವಾಟ್ಸಾಪ್ ನಲ್ಲಿ ಹೆಚ್ಚಿನ ಫೀಚರ್ ಲಭಿಸುತ್ತದೆ ಎನ್ನುವ ಕಾರಣಕ್ಕೆ ಸಾಕಷ್ಟು ಜನ ಈ ಪಿಂಕ್ ವಾಟ್ಸಾಪ್ ಲಿಂಕ್ ಅನ್ನು ಬಳಸಿ ಮೋಸ ಹೋಗಿದ್ದಾರೆ.

Join Nadunudi News WhatsApp Group

Pink WhatsApp Link Scam
Image Credit: Gizchina

ಯಾವ ಲಿಂಕ್ ಬಳಕೆದಾರರಿಗೆ ಅಪಾಯವನ್ನು ತರುತ್ತದೆ
ನೀವು New Pink Look WhatsApp with extra features ಎನ್ನುವ ಈ ಲಿಂಕ್ ಅನ್ನು ಆಯ್ಕೆ ಮಾಡಿದರೆ ವಂಚನೆಗೆ ಒಳಗಾಗಬೇಕಾಗುತ್ತದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ವಂಚಕರು ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯಬಹುದು. ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ವಾಟ್ಸಾಪ್ ನ ಲೋಗೋ ಬದಲಾಗುತ್ತದೆ ಎಂದು ಯಾವುದೇ ಸಂದೇಶ ಬಂದರು ಕೂಡ ನೀವು ಅದನ್ನು ನಿರ್ಲಕ್ಷಿಸುವುದು ಉತ್ತಮ.

Join Nadunudi News WhatsApp Group