Plastic Cover: ದಿನಪತ್ರಿಕೆ ಮತ್ತು ಪೇಪರ್ ನಲ್ಲಿ ಕಟ್ಟಿಕೊಡುವ ಆಹಾರ ತಿಂದರೆ ಕ್ಯಾನ್ಸರ್ ಬರುತ್ತಾ…? ವೈದ್ಯರು ಹೇಳುವುದೇನು

ಪೇಪರ್ ನಲ್ಲಿ ಕಟ್ಟಿದ ಆಹಾರ ತಿಂದರೆ ಕ್ಯಾನ್ಸರ್ ಬರುತ್ತಾ...? ವೈದ್ಯರ ಸಲಹೆ

Food Wrapped In Plastic Covers May Cause Cancer: ಪ್ಲಾಸ್ಟಿಕ್ ಕವರ್ (Plastic Cover) ಅನ್ನು ಬ್ಯಾನ್ ಮಾಡಿ ಹಲವು ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾನವನ ಜೀವಕ್ಕೆ ಹಾನಿಕಾರಕ ಎನ್ನುವ ವಿಚಾರ ನಿಮಗೆ ಈಗಾಗಲೇ ತಿಳಿದಿರಬಹುದು. ಪ್ಲಾಸ್ಟಿಕ್ ಬಳಕೆ ಎಷ್ಟು ಕಡಿಮೆ ಮಾಡುತ್ತೀವೋ ಅಷ್ಟು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

hotel food packed in plastic cover
Image Credit: Blogspot

ದಿನಪತ್ರಿಕೆ ಮತ್ತು ಪೇಪರ್ ನಲ್ಲಿ ಕಟ್ಟಿಕೊಡುವ ಆಹಾರ ತಿಂದರೆ ಕ್ಯಾನ್ಸರ್ ಬರುತ್ತಾ…?
ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಬ್ಯಾನ್ ಮಾಡಲಾಗಿದೆ. ಆದರೆ ಆ ನಿಯಮವನ್ನು ಆ ಕ್ಷಣಕಷ್ಟೇ ಪಾಲಿಸುವ ಹೊಟೇಲ್ ನವರು, ಹಣಕ್ಕಾಗಿ ಮತ್ತದೇ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಹೊಟೇಲ್ ನವರಿಗೆ ಉದ್ಯಮವಾದರೆ ಸಾಕು, ಅವರಿಗೆ ಜನರ ಆರೋಗ್ಯದ ಮೇಲೆ ಯಾವುದೇ ಕಾಳಜಿ ಇರುವುದಿಲ್ಲ. ಇನ್ನು ಬ್ಯಾಚುಲರ್ಸ್ ಗಳ ಪಾಡು ಕೇಳುದೇ ಬೇಡ, ಏಕೆಂದರೆ ಅವರಿಗೆ ಮನೆಯಲ್ಲಿ ಅಡುಗೆ ಮಾಡುದು ಕಷ್ಟ, ಹೊರಗೆ ತಿನ್ನುವುದು ಅನಿವಾರ್ಯ. ಹಣ ಕೊಟ್ಟು ಆಹಾರ ತಿನ್ನುವುದರ ಜೊತೆಗೆ ಕಾಯಿಲೆಯನ್ನು ಕೂಡ ಬರ ಮಾಡಿಕೊಳ್ಳುತ್ತಾರೆ.

ವೈದ್ಯರು ಹೇಳುವುದೇನು…?
ವೈದ್ಯರು ಹೇಳುವ ಪ್ರಕಾರ, ಪ್ಲಾಸ್ಟಿಕ್ ಕವರ್ ನಲ್ಲಿ ಆಹಾರ ತಿನ್ನುದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅನೇಕ ಜನರು ದಿನಪತ್ರಿಕೆಗಳಲ್ಲಿ ಆಹಾರವನ್ನು ತಿನ್ನುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಹೌದು ಬಿಸಿ ಆಹಾರವನ್ನು ಪತ್ರಿಕೆಗಳ ಮೇಲೆ ಇರಿಸಿದಾಗ, ಶಾಖದಿಂದಾಗಿ ಕಾಗದದ ಮೇಲಿನ ಶಾಯಿ ಕರಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ಪತ್ರಿಕೆಯ ಶಾಯಿಯು ಡೈಸೊಪ್ರೊಫಿಲ್ ಥಾಲೇಟ್, ಡೈನ್ ಐಸೊಪ್ರೊಪಿಲೇಟ್ ಇತ್ಯಾದಿ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ನಂತರ ತಿಂಡಿಯಲ್ಲಿ ಅಂಟಿಕೊಂಡು ನಮ್ಮ ಹೊಟ್ಟೆಯೊಳಗಡೆ ಸೇರಿಕೊಳ್ಳುತ್ತವೆ. ದಿನನಿತ್ಯ ಹೀಗೆ ತಿನ್ನೋದನ್ನು ಅಭ್ಯಾಸ ಮಾಡಿದ್ರೆ ನಮ್ಮ ಆರೋಗ್ಯ ಹಡಗೇಡೊದರಲ್ಲಿ ಯಾವುದೇ ಸಂದೇಹ ಇಲ್ಲ.

hotel food packed in news paper
Image Credit: Quora

Join Nadunudi News WhatsApp Group

Join Nadunudi News WhatsApp Group