Awas Yojana 2024: ಹೊಸ ಮನೆ ಕಟ್ಟುವ ಬಡವರಿಗೆ ಕೇಂದ್ರದಿಂದ ಸಿಗಲಿದೆ, ಕೇಂದ್ರದಿದ ಸಿಗಲಿದೆ 30 ಲಕ್ಷ ರೂ

ಆವಾಸ್ ಯೋಜನೆಯ ಸೌಲಭ್ಯವನ್ನು ಇನ್ನಷ್ಟು ವಿಸ್ತರಣೆ ಮಾಡಲು ಮುಂದಾದ ಮೋದಿ ಸರ್ಕಾರ.

PM Awas Yojana Latest Update: ಪ್ರಸ್ತುತ ದೇಶದಲ್ಲಿ 2024 ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಬಾರಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವುದು ಶೀಘ್ರದಲ್ಲೇ ತಿಳಿಯಲಿದೆ. ಇನ್ನು ಕೇಂದ್ರದ ಮೋದಿ ಸರ್ಕಾರ ಲೋಕಸಭಾ ಚುನಾವಣೆಯ ಕಾರಣ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆಯಲ್ಲಿ ಮತದಾರರ ಓಲೈಕೆಗಾಗಿ ಮೋದಿ ಸರ್ಕಾರ ಈಗಾಗಲೇ ಸಾಕಷ್ಟು ಘೋಷಣೆ ಹೊರಡಿಸಿದೆ.

ಕಾಂಗ್ರೆಸ್ ಸರ್ಕಾರದಂತೆ ವಿವಿಧ ಗ್ಯಾರಂಟಿ ಘೋಷಣೆಯನ್ನು ಮಾಡಿದೆ. ಕಾಂಗ್ರೆಸ್ ಸರ್ಕಾರ ಹೊಸ ಹೊಸ ಖಾತರಿ ಯೋಜನೆಗಳನ್ನು ಘೋಷಿಸಿದರೆ ಬಿಜೆಪಿ ಸರ್ಕಾರ ಈಗಿರುವ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಿದೆ. ಸದ್ಯ ಮೋದಿ ಸರ್ಕಾರ PM Awas ಯೋಜನೆಯ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿದೆ.

PM Awas Yojana Latest Update
Image Credit: Patrika

ಪಿಎಂ ಆವಾಸ್ ಯೋಜನೆ ಇನ್ನಷ್ಟು ವಿಸ್ತರಣೆ
ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ನಗರ ಪ್ರದೇಶದ ಬಡವರಿಗೆ ವಸತಿ ಸಬ್ಸಿಡಿಯ ವ್ಯಾಪ್ತಿ ಮತ್ತು ಗಾತ್ರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಪರಿಗಣಿಸುತ್ತಿದೆ. ಈ ಸಂಬಂಧ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ಈ ಮಾಹಿತಿ ನೀಡಿದೆ. ವಸತಿ ಯೋಜನೆ ವಿಸ್ತರಣೆಯಾದರೆ ಸ್ವಯಂ ಉದ್ಯೋಗಿಗಳು, ಅಂಗಡಿಕಾರರು, ಸಣ್ಣ ವ್ಯಾಪಾರಸ್ಥರು ವ್ಯಾಪ್ತಿಗೆ ಒಳಪಡಲಿದ್ದು, ಸ್ವಂತ ಮನೆ ನಿರ್ಮಿಸಿಕೊಳ್ಳಲು ಸರಕಾರದಿಂದ ನೆರವು ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯಡಿ ನೀಡಲಾಗುವ ಸಬ್ಸಿಡಿ ಸಾಲವನ್ನು ಮನೆಯ ಬೆಲೆ ಮತ್ತು ಗಾತ್ರಕ್ಕೆ ಅನುಗುಣವಾಗಿ ನಿರ್ಧರಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಖರೀದಿದಾರರಿಗೆ 35 ಲಕ್ಷ ರೂಪಾಯಿ ವೆಚ್ಚದ ಮನೆಗೆ, ಸಬ್ಸಿಡಿ ಸಾಲವನ್ನು 30 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

Home Loan Subsidy
Image Credit: Constructionworld

ಗೃಹ ಸಾಲಕ್ಕೆ ಸಿಗಲಿದೆ 30 ಲಕ್ಷವರೆಗೆ ಸಬ್ಸಿಡಿ
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಮನೆ ಖರೀದಿದಾರರು 20 ವರ್ಷಗಳ ಅವಧಿಯಲ್ಲಿ ಗರಿಷ್ಠ 2.67 ಲಕ್ಷ ರೂಪಾಯಿಗಳನ್ನು ಬಡ್ಡಿ ವೆಚ್ಚದಲ್ಲಿ ಉಳಿಸಬಹುದು. 20 ವರ್ಷಗಳ ಯೋಜನೆಯು ಗೃಹ ಸಾಲಗಳಿಗೆ ದೀರ್ಘಾವಧಿಯ ಅವಧಿಯನ್ನು ಹೊಂದಿದೆ. ಈ ಕೈಗೆಟುಕುವ ಮನೆಗಳ ಗರಿಷ್ಠ ಗಾತ್ರ 200 ಚದರ ಮೀಟರ್.

Join Nadunudi News WhatsApp Group

ಮೆಟ್ರೋ ಮತ್ತು ನಾನ್ ಮೆಟ್ರೋ ನಗರಗಳಲ್ಲಿ 35 ಲಕ್ಷ ರೂ.ವರೆಗಿನ ಮನೆ ಖರೀದಿದಾರರು 30 ಲಕ್ಷ ರೂ.ವರೆಗಿನ ಗೃಹ ಸಾಲದ ಮೇಲೆ ಸಬ್ಸಿಡಿ ಪಡೆಯಬಹುದು ಎಂದು ಪ್ರಸ್ತಾಪಿಸಲಾಗಿದೆ. ಅಸ್ತಿತ್ವದಲ್ಲಿರುವ ನಿಬಂಧನೆಗಳ ಅಡಿಯಲ್ಲಿ, ಜನರು ತಮ್ಮ ವಾರ್ಷಿಕ ಆದಾಯವು 18 ಲಕ್ಷ ರೂಪಾಯಿಗಳನ್ನು ಮೀರದಿದ್ದಲ್ಲಿ ಗರಿಷ್ಠ 12 ಲಕ್ಷ ರೂಪಾಯಿಗಳನ್ನು ಗೃಹ ಸಾಲವಾಗಿ ಪಡೆಯಬಹುದು.

PM Awas Yojana 2024
Image Credit: Zeebiz

Join Nadunudi News WhatsApp Group