PM Awas: PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ…? ಬೇಕಾದ ದಾಖಲೆಗಳು ಏನು…? ಎಷ್ಟು ಹಣ ಸಿಗುತ್ತೆ…?

PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಏನು...?

PM Awas Yojana Latest Update: ಬಡ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ PM Awas ಯೋಜನೆಯು ಸಹಕಾರಿಯಾಗಿದೆ. ಸ್ವಂತ ಮನೆಯನ್ನು ನಿರ್ಮಿಸಿಕೊಡುವ ಸಲುವಾಗಿ 2015 ರಲ್ಲಿ PM Awas ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ಜನರು PM ಆವಾಸ್ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಈ ಯೋಜನೆಯಡಿ ಈಗಾಗಲೇ ಫಲಾನುಭವಿಗಳು ತಮಗಾಗಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚಿಗೆ ಕೇಂದ್ರ ಸರ್ಕಾರ Awas ಯೋಜನೆಯ ಅರ್ಹತೆಗಳನ್ನು ಬದಲಿಸಿದೆ. ನೀವು Awas ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದ್ದರೆ, ಅರ್ಜಿ ಸಲ್ಲಿಸುವುದು ಹೇಗೆ…? ಬೇಕಾದ ದಾಖಲೆಗಳು ಏನು…? ಎಷ್ಟು ಹಣ ಸಿಗುತ್ತೆ…? ಅನ್ನುವ ಮಾಹಿತಿ ಇಲ್ಲಿದೆ.

PM Awas Yojana Latest Update
Image Credit: Protechgroup

PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ…?
ಮೋದಿ ಸರ್ಕಾರವು ಆವಾಸ್ ಯೋಜನೆಯಡಿ ಸ್ವಂತ ಮನೆ ನಿರ್ಮಾಣದ ಕನಸು ಕಂಡವರಿಗೆ ಸಹಾಯಧನವನ್ನು ನೀಡುತ್ತಿದೆ. ಮುಖ್ಯವಾಗಿ PM ಆವಾಸ್ ಯೋಜನೆಯು ನಗರ ಮತ್ತು ಗ್ರಾಮೀಣ 2 ವಿಭಾಗಗಳನ್ನು ಹೊಂದಿದೆ. PMAY ಅಡಿಯಲ್ಲಿ ಸರ್ಕಾರವು ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.

ಈ ಯೋಜನೆಯಡಿಯಲ್ಲಿ, ಭಾರತ ಸರ್ಕಾರವು ಕೊಳೆಗೇರಿಗಳಲ್ಲಿ ಮನೆಗಳನ್ನು ನಿರ್ಮಿಸಲು ಪ್ರತಿ ಮನೆಗೆ ರೂ.1 ಲಕ್ಷ ಸಹಾಯಧನವನ್ನು ನೀಡುತ್ತದೆ. ಹಾಗೆಯೆ ಇದರ ಮೇಲೆ 6.5% ವರೆಗೆ ಬಡ್ಡಿ ಸಹಾಯಧನವನ್ನು ಪಡೆಯಬಹುದು. ಸಾಲವನ್ನು 20 ವರ್ಷಗಳಲ್ಲಿ ಮರುಪಾವತಿ ಮಾಡಬಹುದು. ಪಿಎಂ ಆವಾಸ್ ಯೋಜನೆಯ ಲಾಭವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Pradhan Mantri Awas Yojana
Image Credit: Original Source

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಏನು…?
•ಆಧಾರ್ ಕಾರ್ಡ್

Join Nadunudi News WhatsApp Group

•ಬ್ಯಾಂಕ್ ಖಾತೆ

•ವಿಳಾಸ ಪುರಾವೆ

•ಗುರುತಿನ ಚೀಟಿ

•ಮೊಬೈಲ್ ನಂಬರ

•ಬಿಪಿಎಲ್ ಕಾರ್ಡ್

•ಪಾಸ್ಪೋರ್ಟ್ ಗಾತ್ರದ ಫೋಟೋ

•ಆದಾಯ ಪ್ರಮಾಣಪತ್ರ

Pradhan Mantri Awas Yojana Details
Image Credit: Zee News

PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು….?
•PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತೀಯರಾಗಿರಬೇಕು.

•ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಯ ಪ್ರಯೋಜನವನ್ನು ಪಡೆದಿರಬಾರದು.

•ಈ ಯೋಜನೆಯ ಫಲಾನುಭವಿಗಳು ಈಗಾಗಲೇ ಸ್ವಂತ ಮನೆ ಹೊಂದಿರಬಾರದು.

•EWS ಅಡಿಯಲ್ಲಿ ಫಲಾನುಭವಿಯ ವಾರ್ಷಿಕ ಆದಾಯವು ರೂ. 6 ಲಕ್ಷ ಮೀರಬಾರದು.

•LIG ಅಡಿಯಲ್ಲಿ ಫಲಾನುಭವಿಯ ವಾರ್ಷಿಕ ಆದಾಯವು ರೂ.6 ಲಕ್ಷಕ್ಕಿಂತ ಹೆಚ್ಚು ಮತ್ತು ರೂ.12 ಲಕ್ಷಕ್ಕಿಂತ ಕಡಿಮೆಯಿರಬೇಕು.

•MIG-I ಫಲಾನುಭವಿಯ ವಾರ್ಷಿಕ ಆದಾಯವು ರೂ.12 ಲಕ್ಷ ಅಥವಾ ರೂ.18 ಲಕ್ಷಕ್ಕಿಂತ ಕಡಿಮೆಯಿರಬೇಕು.

•MIG-II ಗೆ ಫಲಾನುಭವಿಯ ವಾರ್ಷಿಕ ಆದಾಯ ರೂ. 18 ಲಕ್ಷ ಮೀರಬಾರದು.

•ಇನ್ನು ಅರ್ಹರು https://pmaymis.gov.in/ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

PM Awas Yojana 2024
Image Credit: PM Modi Yojana

Join Nadunudi News WhatsApp Group