PM Awas 2024: ಸ್ವಂತ ಮನೆ ಕಟ್ಟಬೇಕಾ…? ಹಾಗಾದರೆ Pm ಆವಾಸ್ ಯೋಜನೆಗೆ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ.

PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆಯುವುದು ಹೇಗೆ...?

PM Awas Yojana Latest Update: ಬಡ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ PM Awas ಯೋಜನೆಯು ಸಹಕಾರಿಯಾಗಿದೆ. ಸ್ವಂತ ಮನೆಯನ್ನು ನಿರ್ಮಿಸಿಕೊಡುವ ಸಲುವಾಗಿ 2015 ರಲ್ಲಿ PM Awas ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ಜನರು PM ಆವಾಸ್ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಈ ಯೋಜನೆಯಡಿ ಈಗಾಗಲೇ ಫಲಾನುಭವಿಗಳು ತಮಗಾಗಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ನೀವು Awas ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದ್ದರೆ, ಅರ್ಜಿ ಸಲ್ಲಿಸುವುದು ಹೇಗೆ…? ಬೇಕಾದ ದಾಖಲೆಗಳು ಏನು…? ಎಷ್ಟು ಹಣ ಸಿಗುತ್ತೆ…? ಅನ್ನುವ ಮಾಹಿತಿ ಇಲ್ಲಿದೆ.

PM Awas Yojana 2024
Image Credit: Zeebiz

ಸ್ವಂತ ಮನೆ ಕಟ್ಟಬೇಕಾ…?
ಮೋದಿ ಸರ್ಕಾರವು ಆವಾಸ್ ಯೋಜನೆಯಡಿ ಸ್ವಂತ ಮನೆ ನಿರ್ಮಾಣದ ಕನಸು ಕಂಡವರಿಗೆ ಸಹಾಯಧನವನ್ನು ನೀಡುತ್ತಿದೆ. ಮುಖ್ಯವಾಗಿ PM ಆವಾಸ್ ಯೋಜನೆಯು ನಗರ ಮತ್ತು ಗ್ರಾಮೀಣ 2 ವಿಭಾಗಗಳನ್ನು ಹೊಂದಿದೆ. PMAY ಅಡಿಯಲ್ಲಿ ಸರ್ಕಾರವು ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಈ ಯೋಜನೆಯಡಿಯಲ್ಲಿ, ಭಾರತ ಸರ್ಕಾರವು ಕೊಳೆಗೇರಿಗಳಲ್ಲಿ ಮನೆಗಳನ್ನು ನಿರ್ಮಿಸಲು ಪ್ರತಿ ಮನೆಗೆ ರೂ.1 ಲಕ್ಷ ಸಹಾಯಧನವನ್ನು ನೀಡುತ್ತದೆ. ಹಾಗೆಯೆ ಇದರ ಮೇಲೆ 6.5% ವರೆಗೆ ಬಡ್ಡಿ ಸಹಾಯಧನವನ್ನು ಪಡೆಯಬಹುದು. ಸಾಲವನ್ನು 20 ವರ್ಷಗಳಲ್ಲಿ ಮರುಪಾವತಿ ಮಾಡಬಹುದು.

PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆಯುವುದು ಹೇಗೆ…?
• ಅರ್ಜಿ ಸಲ್ಲಿಕೆಗಾಗಿ ಮೊದಲು ಪ್ರಧಾನಮಂತ್ರಿ ಆವಾಸ್ ಯೋಜನೆ pmaymis.gov.in ಗೆ ಹೋಗಿ.

• ಸಿಟಿಜನ್ ಅಸೆಸ್‌ಮೆಂಟ್ ಡ್ರಾಪ್‌ ಡೌನ್ ಅಡಿಯಲ್ಲಿ 3 ಘಟಕಗಳ ಅಡಿಯಲ್ಲಿ ಪ್ರಯೋಜನವನ್ನು ಕ್ಲಿಕ್ ಮಾಡಿ.

Join Nadunudi News WhatsApp Group

• ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿ ಮತ್ತು ಸಲ್ಲಿಸಿ.

• ಸಂಖ್ಯೆ ಸರಿಯಾಗಿದ್ದರೆ ಅದು ಇನ್ನೊಂದು ಪುಟಕ್ಕೆ ಹೋಗುತ್ತದೆ. ಅಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ.

•ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮುಂದಿನ ಪುಟಕ್ಕೆ ಹೋಗಿ.

• ಅರ್ಜಿದಾರರು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಅವರು ಯಾವ ರಾಜ್ಯಕ್ಕೆ ಸೇರಿದವರು ಎಂಬುದನ್ನು ನಮೂದಿಸಬೇಕು. ಕುಟುಂಬದ ಮುಖ್ಯಸ್ಥ, ಅವರ ಪ್ರಸ್ತುತ ವಸತಿ ವಿಳಾಸ ಮತ್ತು ಇತರ ಪ್ರಮುಖ ವಿವರಗಳನ್ನು ಒದಗಿಸಬೇಕು.

• ನಿಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದರೆ, ನಿಮ್ಮ ಆಧಾರ್ ಸಂಖ್ಯೆ ಮತ್ತು ಅಪ್ಲಿಕೇಶನ್ ಸಂಖ್ಯೆಯ ಸಹಾಯದಿಂದ ತಿದ್ದುಪಡಿಗಳನ್ನು ಮಾಡಲು ಸಾಧ್ಯವಿದೆ.

PM Awas Yojana Benefit
Image Credit: Zeebiz

PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು….?
•PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತೀಯರಾಗಿರಬೇಕು.

•ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಯ ಪ್ರಯೋಜನವನ್ನು ಪಡೆದಿರಬಾರದು.

•ಈ ಯೋಜನೆಯ ಫಲಾನುಭವಿಗಳು ಈಗಾಗಲೇ ಸ್ವಂತ ಮನೆ ಹೊಂದಿರಬಾರದು.

•EWS ಅಡಿಯಲ್ಲಿ ಫಲಾನುಭವಿಯ ವಾರ್ಷಿಕ ಆದಾಯವು ರೂ. 6 ಲಕ್ಷ ಮೀರಬಾರದು.

•LIG ಅಡಿಯಲ್ಲಿ ಫಲಾನುಭವಿಯ ವಾರ್ಷಿಕ ಆದಾಯವು ರೂ.6 ಲಕ್ಷಕ್ಕಿಂತ ಹೆಚ್ಚು ಮತ್ತು ರೂ.12 ಲಕ್ಷಕ್ಕಿಂತ ಕಡಿಮೆ ಇರಬೇಕು.

•MIG-I ಫಲಾನುಭವಿಯ ವಾರ್ಷಿಕ ಆದಾಯವು ರೂ.12 ಲಕ್ಷ ಅಥವಾ ರೂ.18 ಲಕ್ಷಕ್ಕಿಂತ ಕಡಿಮೆಯಿರಬೇಕು.

•MIG-II ಗೆ ಫಲಾನುಭವಿಯ ವಾರ್ಷಿಕ ಆದಾಯ ರೂ. 18 ಲಕ್ಷ ಮೀರಬಾರದು.

PM Awas Yojana Latest Updates
Image Credit: Magicbricks

Join Nadunudi News WhatsApp Group