PM Kisan: ಈ ದಿನದಂದು ಖಾತೆಗೆ ಬರಲಿದೆ ಕಿಸಾನ್ ಸಮ್ಮಾನ್ ಇನ್ನೊಂದು ಕಂತಿನ ಹಣ, ಬೇಗ ಖಾತೆ ಚೆಕ್ ಮಾಡಿ.

ಈ ರೀತಿಯಾಗಿ ನಿಮ್ಮ ಖಾತೆಗೆ ಹಣ ಬಂದಿದೆಯಾ..? ಎಂದು ಚೆಕ್ ಮಾಡಿಕೊಳ್ಳಿ

PM Kisan 17 Installment Amount: ದೇಶದ ರೈತರು ಇದೀಗ PM Kisan ಯೋಜನೆಯ ಮುಂದಿನ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. PM Kisan ಯೋಜನೆಯಡಿ ನಾಲ್ಕು ತಿಂಗಳಿಗೊಮ್ಮೆ ಅರ್ಹ ರೈತರು 2000 ರೂ. ಗಳನ್ನೂ ಪಡೆಯುತ್ತಾರೆ.

ಸದ್ಯ ಕಿಸಾನ್ ಯೋಜನೆಯಡಿ ರೈತರು 16 ಕಂತುಗಳ ಹಣವನ್ನು ಪಡೆದಿದ್ದರೆ. ಇದೀಗ 17 ನೇ ಕಂತಿನ ಹಣವನ್ನು ಪಡೆಯುವ ಸಮಯ ಬಂದಿದೆ. ಕೇಂದ್ರ ಸರ್ಕಾರ PM ಕಿಸಾನ್ ಯೋಜನೆಯ 17 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಈ ದಿನದಂದು ಕೇಂದ್ರ ಸರ್ಕಾರ ನಿಮ್ಮ ಖಾತೆಗೆ 17 ನೇ ಕಂತಿನ ಹಣವನ್ನು ಜಮಾ ಮಾಡಲಿದೆ.

PM Kisan 17 Installment Amount
Image Credit: Zeebiz

ಈ ದಿನದಂದು ಖಾತೆಗೆ ಬರಲಿದೆ ಕಿಸಾನ್ ಸಮ್ಮಾನ್ ಇನ್ನೊಂದು ಕಂತಿನ ಹಣ
ಕೇಂದ್ರದ ಮೋದಿ ಸರ್ಕಾರವು ಮುಂದಿನ ಅಂದರೆ 17 ನೇ ಕಂತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವರ್ಗಾವಣೆಯನ್ನು ಶೀಘ್ರದಲ್ಲೇ ಮಾಡಲಿದೆ. ಸರಕಾರ ರೂಪಿಸಿರುವ ನಿಯಮಗಳನ್ನು ಪಾಲಿಸದೇ ಇದ್ದರೆ ಕಂತಿನ ಹಣ ಜಮಾ ಆಗದೆ ಇರಬಹುದು. ಪಿಎಂ ಕಿಸಾನ್ ಯೋಜನೆಯ ಕಂತಿನ ಮೊತ್ತವನ್ನು ಕಳುಹಿಸುವ ದಿನಾಂಕವನ್ನು ಸರ್ಕಾರ ಅಧಿಕೃತವಾಗಿ ಘೋಷಿಸದಿದ್ದರೂ, ಮೇ 15 ರೊಳಗೆ ದಿನಾಂಕದ ಅಧಿಕೃತ ಘೋಷಣೆ ಹೊರಬೀಳಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಲಾಭವನ್ನು ಪಡೆಯಲು ನೀವು ಬಯಸಿದರೆ, ನೀವು ಪ್ರಮುಖ ವಿಷಯಗಳನ್ನು ಗಮಿಸಬೇಕು. ಕಂತಿನ ಲಾಭವನ್ನು ಪಡೆಯಲು, ರೈತರು ಮೊದಲು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇದಲ್ಲದೇ ಭೂ ಪರಿಶೀಲನೆ ನಡೆಸಬೇಕಾಗುತ್ತದೆ. ನೀವು ಈ ಎರಡೂ ಕೆಲಸಗಳನ್ನು ಮಾಡದಿದ್ದರೆ ಅದನ್ನು ತ್ವರಿತವಾಗಿ ಮಾಡಿ. ಇದನ್ನು ಮಾಡದಿದ್ದರೆ 17ನೇ ಕಂತಿನ 2 ಸಾವಿರ ರೂ. ಹಣವನ್ನು ಸರಕಾರ ತಡೆ ಹಿಡಿಯುತ್ತದೆ. ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.

PM Kisan 17 Installment
Image Credit: Indianexpress

ಈ ರೀತಿಯಾಗಿ ನಿಮ್ಮ ಖಾತೆಗೆ ಹಣ ಬಂದಿದೆಯಾ..? ಎಂದು ಚೆಕ್ ಮಾಡಿಕೊಳ್ಳಿ
•ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತುಗಳ ಹಣವನ್ನು ಪರಿಶೀಲಿಸಲು ನೀವು ಮೊದಲು ಅಧಿಕೃತ ಪೋರ್ಟಲ್ pmkisan.gov.in ಗೆ ಭೇಟಿ ನೀಡಿ.

Join Nadunudi News WhatsApp Group

•ಇದರ ನಂತರ, ನೀವು ಕಿಸಾನ್ ಪೋರ್ಟಲ್‌ ಗೆ ಹೋದಾಗ, ನೀವು ಇಲ್ಲಿ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

•ನಂತರ ರೈತರು ಪರದೆಯ ಮೇಲೆ ನೀಡಲಾದ ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.

•ನಂತರ ಮಾಹಿತಿಯನ್ನು ಪಟ್ಟಿ ಮಾಡಿ ಮತ್ತು ನಂತರ ನೀವು “ವಿವರಗಳನ್ನು ಪಡೆಯಿರಿ” ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

•ಇದರ ನಂತರ ನಿಮ್ಮ ಸ್ಥಿತಿಯು ನಿಮ್ಮ ಮುಂದೆ ತೆರೆಯುತ್ತದೆ.

PM Kisan 17 Installment Credit
Image Credit: Timesnownews

Join Nadunudi News WhatsApp Group