PM Kisan FPO: ದೇಶದ ಎಲ್ಲಾ ರೈತರಿಗೆ ಸಿಗಲಿದೆ 15 ಲಕ್ಷ ಸಾಲ, ಕೇಂದ್ರದ ಈ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿ

ರೈತರಿಗೆ ಕೇಂದ್ರದಿಂದ ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 15 ಲಕ್ಷ ಸಾಲ

PM Kisan FPO Yojana: ಕೇಂದ್ರ ಹಾಗು ರಾಜ್ಯ ಸರಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಈ ಯೋಜನೆಗಳು ರೈತರನ್ನು ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿದೆ.

ರೈತರ ಆದಾಯವನ್ನು ಹೆಚ್ಚಿಸಿ ಅವರ ಭವಿಷ್ಯವನ್ನು ಭದ್ರಪಡಿಸಲು ಕೇಂದ್ರ ಸರಕಾರ ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಹೆಸರು PM Kisan FPO ಯೋಜನೆ. ಈ ಯೋಜನೆಯಡಿ ರೈತರಿಗೆ ಕೃಷಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಆರ್ಥಿಕ ನೆರವನ್ನು ಸರಕಾರ ನೀಡುತ್ತದೆ. ಇದರಿಂದಾಗಿ ರೈತರು ಆರ್ಥಿಕವಾಗಿ ಕಷ್ಟ ಅನುಭವಿಸುವ ಅವಶ್ಯಕತೆ ಇರುವುದಿಲ್ಲ.

PM Kisan FPO Yojana 2023
Image Credit: News Nation

PM Kisan FPO ಯೋಜನೆಯ ಕುರಿತು ಮಾಹಿತಿ

ದೇಶದಲ್ಲಿ ಕೋಟ್ಯಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿ, ದೇಶದ ರೈತರು ಪ್ರತಿವರ್ಷ 6,000 ರೂ.ಗಳ ಸಹಾಯವನ್ನು ಪಡೆಯುತ್ತಾರೆ. ಹಾಗೆಯೆ ಈಗ PM Kisan FPO ಯೋಜನೆಯಡಿ ರೈತರು ಸ್ವಾವಲಂಭಿಯಾಗಿ ಆದಾಯವನ್ನು ವೃದ್ಧಿಪಡಿಸಿಕೊಳ್ಳಬಹುದಾಗಿದೆ. PM Kisan FPO ಯೋಜನೆಯಡಿ, ಕೃಷಿಗೆ ಸಂಬಂಧಿಸಿದ ವ್ಯವಹಾರವನ್ನು ಸ್ಥಾಪಿಸಲು 11 ರೈತರ ರೈತ ಉತ್ಪಾದಕ ಸಂಸ್ಥೆಗೆ ಸರ್ಕಾರ 15 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುತ್ತಿದೆ.

PM Kisan FPO Yojana
Image Credit: Naidunia

PM Kisan FPO ಯೋಜನೆಗೆ ಅರ್ಜಿ ಹಾಕುವ ವಿಧಾನ

Join Nadunudi News WhatsApp Group

ಈ ಯೋಜನೆಯ ಲಾಭ ಪಡೆಯಲು ನೀವು ರಾಷ್ಟ್ರೀಯ ಕೃಷಿ ಮಾರುಕಟ್ಟೆ https://www.enam.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.ಇದರ ನಂತರ, FPO ಪುಟವು ನಿಮ್ಮ ಪರದೆಯಲ್ಲಿ ತೆರೆಯುತ್ತದೆ. ಇಲ್ಲಿಂದ ನೀವು ಸುಲಭವಾಗಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ಪ್ರಕ್ರಿಯೆ ತುಂಬಾ ಸುಲಭ. ಇದರಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಈ ಯೋಜನೆಯ ಲಾಭ ಪಡೆಯಲು, ರೈತರು ಒಂದು ಗುಂಪನ್ನು (ರೈತ ಉತ್ಪಾದಕ ಸಂಸ್ಥೆ) ರಚಿಸಬೇಕಾಗುತ್ತದೆ. ನೀವು ರಚಿಸುವ ಸಂಸ್ಥೆ. ಇದು ಕನಿಷ್ಠ 11 ರೈತರನ್ನು ಹೊಂದಿರಬೇಕು. ರೈತರು ಈ ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಪ್ರಬಲರಾಗಬಹುದು.

Join Nadunudi News WhatsApp Group