PM Kisan: ಕೇಂದ್ರದಿಂದ ರೈತರಿಗೆ ಇನ್ನೊಂದು ಆದೇಶ, ಈ ತಪ್ಪು ಸರಿಪಡಿಸದಿದ್ದರೆ ಕಿಸಾನ್ ಹಣ ರದ್ದು.

ಕಿಸಾನ್ ಯೋಜನೆಯ ಫಲಾನುಭವಿಗಳು ಈ ತಪ್ಪು ಸರಿಪಡಿಸದಿದ್ದರೆ ಕಿಸಾನ್ ಹಣ ರದ್ದು

PM Kisan Latest Update: Pradhan Mantri  Kisan Samman Nidhi ಯೋಜನೆಯಡಿ ಈಗಾಗಲೇ ಸರ್ಕಾರ 15 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಸದ್ಯ ಕೇಂದ್ರದಿಂದ 16 ನೇ ಕಂತಿನ ಹಣ ಬಿಡುಗಡೆ ಭಾಕಿ ಇದೆ.

ಫೆಬ್ರವರಿ ಮಾರ್ಚ್ ನಲ್ಲಿ ಕಿಸಾನ್ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಸರ್ಕಾರ 16 ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ವೇಳೆಯಲ್ಲಿ ಅಚ್ಚರಿಯ ಸುದ್ದಿಯೊಂದು ಸರ್ಕಾರದ ಗಮನಕ್ಕೆ ಬಂದಿದೆ. ಕಿಸಾನ್ ಯೋಜನೆಯ ಲಾಭವನ್ನು ಅನರ್ಹರು ಪಡೆರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

PM Kisan Latest Updates
Image Credit: Telugujobsnews

ಕೇಂದ್ರದಿಂದ ರೈತರಿಗೆ ಇನ್ನೊಂದು ಆದೇಶ
ಇನ್ನು Pradhan Mantri Kisan ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರು PM Kisan ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಆದರೆ ಸದ್ಯ ದೇಶದಲ್ಲಿ ನಕಲಿ ದಾಖಲೆಗಳನ್ನು ನೀಡಿ ಕಿಸಾನ್ ಸಮ್ಮಾನ ನಿಧಿಯ ಹಣವನ್ನು ಅನರ್ಹರು ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಅಂತಹ ರೈತರಿಗೆ ನೋಟಿಸ್ ಕಳುಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ತಪ್ಪು ಸರಿಪಡಿಸದಿದ್ದರೆ ಕಿಸಾನ್ ಹಣ ರದ್ದು
ಆದಾಯ ತೆರಿಗೆ ಪಾವತಿಸುವ ರೈತರು ಹಾಗೂ ಸರ್ಕಾರೀ ಉದ್ಯೋಗ ಹೊಂದಿರುವ ರೈತರು ಸರ್ಕಾರದ PM Kisan ಯೋಜನೆಯಡಿ ಹಣ ಪಡೆಯಲು ಅನರ್ಹರಾಗಿರುತ್ತಾರೆ. ದೇಶದಲ್ಲಿ 245 ನಕಲಿ ರೈತರು ಯೋಜನೆಗೆ ಅನರ್ಹರಾಗಿದ್ದರು ಕೂಡ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಈ ಕುರಿತು BEO ಕಠಿಣ ಕ್ರಮ ಕೈಗೊಂಡಿದ್ದು, ತಡಮಾಡದೆ ಹಣ ವಾಪಾಸ್ ನೀಡಲು ಆದೇಶಿಸಿದ್ದಾರೆ. ಹಣ ಮರುಪಾವತಿ ಮಾಡದವರಿಂದ ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಹಣವನ್ನು ಹಿಂತಿರುಗಿಸದಿದ್ದರೆ ಅಂತಹ ರೈತರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಎಚ್ಚರಿಸಿದೆ.

Join Nadunudi News WhatsApp Group

PM Kisan Latest Update 2024
Image Credit: Hindustantimes

ಈ ಕೆಲಸ ಮಾಡದಿದ್ದರೆ ಕಿಸಾನ್ ಹಣ ರದ್ದು
•PM Kisan ಯೋಜನೆಯಡಿ 16 ನೇ ಕಂತಿನ ಹಣ ಪಡೆಯಲು ನೀವು ಮುಖ್ಯವಾಗಿ Bank Details ಅನ್ನು ನೀಡಬೇಕಿದೆ. ನೀವು ಅರ್ಜಿ ನಮೂನೆಯಲ್ಲಿ ಬ್ಯಾಂಕ್ ನ ವಿವರವನ್ನು ತಪ್ಪಾಗಿ ನೀಡಿದರೆ ನಿಮ್ಮ ಖಾತೆಗೆ 16 ನೇ ಕಂತಿನ ಹಣ ಜಮಾ ಆಗುವುದಿಲ್ಲ.

•ರೈತರು ಇ -ಕೆವೈಸಿ ಜೊತೆಗೆ ಭೂ ದಾಖಲೆಗಳನ್ನು ನವೀಕರಣ ಮಾಡುವುದು ಕಡ್ಡಾಯವಾಗಿದೆ. ಭೂ ದಾಖಲೆ ನವೀಕರಣ ಆಗದ ಕಾರಣ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಆಗುತ್ತಿಲ್ಲ.

•ಹಾಗೆಯೆ ಆಧಾರ್ ಕಾರ್ಡ್ ಅನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. NPCI ನಿಂದ ಅನುಮನೊಡನೆ ಪಡೆಯುವವರೆಗೆ ಕಿಸಾನ್ ಯೋಜನೆಯ ಹಣ ಜಮಾ ಆಗಲು ಸಾಧ್ಯವಿಲ್ಲ.

Join Nadunudi News WhatsApp Group