Kisan Update: ಕಿಸಾನ್ ಸಮ್ಮಾನ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ, ಈ ರೈತರು ಪಡೆದ ಹಣ ವಾಪಸ್ ಕೊಡಬೇಕು

ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯುವ ರೈತರಿಗೆ ಹೊಸ ರೂಲ್ಸ್, ಹಣ ವಾಪಸ್ ಕೊಡಬೇಕು

PM Kisan Latest Update: ದೇಶದಲ್ಲಿ Pradhan Mantri Kisan ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ.

ಸಣ್ಣ ಮತ್ತು ಅತಿ ಸಣ್ಣ ರೈತರು PM Kisan ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ದೇಶದಲ್ಲಿ ಕೆಲವು ರೈತರಿಗೆ ಸರ್ಕಾರಕ್ಕೆ ಮೋಸಮಾಡಿ ಹಣವನ್ನ ಪಡೆಯುತ್ತಿದ್ದು ಅಂತವರಿಗೆ ಈಗ ಕೇಂದ್ರ ಸರ್ಕಾರ ಶಾಕ್ ನೀಡಿದೆ ಎಂದು ಹೇಳಬಹುದು. ಅಂತಹ ರೈತರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಹೌದು ದೇಶದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು ಸದ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

PM Kisan New Updates
Image Credit: Zeebiz

ಕಿಸಾನ್ ಸಮ್ಮಾನ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ
PM Kisan ಯೋಜನೆಯಡಿ ದೇಶದ ಅರ್ಹ ರೈತರ ಖಾತೆಗೆ ಈಗಾಗಲೇ 15 ಕಂತಿನ ಹಣ ಜಮಾ ಆಗಿದೆ. November 15 ರಂದು ಮೋದಿ ಸರ್ಕಾರ 15 ನೇ ಕಂತಿನ ಹಣ ಬಿಡುಗಡೆ ಮಾಡಿದೆ. ಈಗಾಗಲೇ ಎಲ್ಲ ಅರ್ಹ ರೈತರ ಖಾತೆಗೆ 15 ನೇ ಕಂತಿನ 2000 ರೂ ಹಣ ಜಮಾ ಆಗಿದ್ದು, ಕೇಂದ್ರ ಸರ್ಕಾರ 16 ನೇ ಕಂತಿನ ಹಣದ ಬಿಡುಗಡೆಯ ಬಗ್ಗೆ ಕೂಡ ವರದಿ ಮಾಡಿದೆ.

ಹೀಗಿರುವಾಗ Kisan ಯೋಜನೆಯ ಬಗ್ಗೆ ಸರಕಾರಕ್ಕೆ ಆಘಾತಕಾರಿ ಸುದ್ದಿಯೊಂದು ತಲುಪಿದೆ. ಕಿಸಾನ್ ಯೋಜನೆಯ ಲಾಭವನ್ನು ಅನರ್ಹರು ಪಡೆರುವ ಬಗ್ಗೆ ವರದಿಯಾಗಿದೆ.  ಅನರ್ಹ ಎಲ್ಲ ರೈತರು 1 ರಿಂದ 15 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕಿಸಾನ್ ಸಮ್ಮಾನ್ ನಿಯಮ ಬದಲಿಸಲು ನಿರ್ಧರಿಸಿದೆ.

PM Kisan Amount Latest Update
Image Credit: Krishi Jagran

ಈ ರೈತರು ಪಡೆದ ಹಣ ವಾಪಸ್ ಕೊಡಬೇಕು
ಆದಾಯ ತೆರಿಗೆ ಪಾವತಿಸುವ ರೈತರು ಹಾಗೂ ಸರ್ಕಾರೀ ಉದ್ಯೋಗ ಹೊಂದಿರುವ ರೈತರು ಸರ್ಕಾರದ PM Kisan ಯೋಜನೆಯಡಿ ಹಣ ಪಡೆಯಲು ಅನರ್ಹರಾಗಿರುತ್ತಾರೆ. ದೇಶದಲ್ಲಿ 245 ನಕಲಿ ರೈತರು ಯೋಜನೆಗೆ ಅನರ್ಹರಾಗಿದ್ದರು ಕೂಡ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

Join Nadunudi News WhatsApp Group

ನಕಲಿ ದಾಖಲೆಗಳನ್ನು ನೀಡಿ PM ಕಿಸಾನ್ ಸಮ್ಮಾನ್ ನಿಧಿ ಲಾಭ ಪಡೆದಿರುವ 245 ನಕಲಿ ರೈತರ ವಿರುದ್ದ ಕ್ರಮ ಕೈಗೊಳ್ಳಲ್ಲಾಗುತ್ತಿದೆ. ಹಣ ಮರುಪಾವತಿ ಮಾಡದವರಿಂದ ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಹಣವನ್ನು ಹಿಂತಿರುಗಿಸದಿದ್ದರೆ ಅಂತಹ ರೈತರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಎಚ್ಚರಿಸಿದೆ. ನೀವು ಕೂಡ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ಪಡೆಯುತ್ತಿದ್ದು ನಿಮ್ಮ ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.

Join Nadunudi News WhatsApp Group