PM Kisan: ದೇಶದ ರೈತರಿಗೆ ಗುಡ್ ನ್ಯೂಸ್, ಇನ್ನುಮುಂದೆ ಖಾತೆಗೆ ಬರಲಿದೆ ಕಿಸಾನ್ 8000 ರೂ

ಇನ್ನುಮುಂದೆ ರೈತರ ಖಾತೆಗೆ ಬರಲಿದೆ ಕಿಸಾನ್ 8000 ರೂ

PM Kisan Samman Amount Hike: ಪ್ರಧಾನ ಮಂತ್ರಿ ಅವರ ಹಲವು ಯೋಜನೆಯಿಂದ ದೇಶದ ಜನಸಾಮಾನ್ಯರಿಗೆ ಹಾಗೂ ದೇಶದ ರೈತರಿಗೆ ಆರ್ಥಿಕವಾಗಿ ನೆರವು ಸಿಕ್ಕಂತೆ ಆಗುತ್ತಿದೆ. ದೇಶದ ರೈತರಿಗಾಗಿ ನರೇಂದ್ರ ಮೋದಿ (Narendra Modi) ಅವರು ಹಲವು ಯೋಜನೆಗಳನ್ನು ಕೈಗೊಂಡಿದ್ದಾರೆ.

ಸದ್ಯ ದೇಶದಲ್ಲಿ ಕೇಂದ್ರದ ಮೋದಿ ಸರ್ಕಾರ ರೈತರಿಗಾಗಿ PM Kisan ಯೋಜನೆಯನ್ನು ಆಯೋಜಿಸಿದೆ. ಈ ಯೋಜನೆಯಡಿಯಲ್ಲಿ ಸರಕಾರವು 17ನೇ ಕಂತಿನ ಹಣವನ್ನು ರೈತರ ಖಾತೆಗೆ ಶೀಘ್ರದಲ್ಲೇ ವರ್ಗಾಯಿಸಲಿದೆ. ಕೋಟ್ಯಾಂತರ ರೈತರು ಈ ಕಂತಿನ ಲಾಭ ಪಡೆಯಲಿದ್ದಾರೆ. ಇದರ ಜೊತೆಗೆ ಸರ್ಕಾರ ರೈತರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ.

Rajasthan CM Announces 2000 Hike In Kisan Samman Nidhi
Image Credit: The Hindu

ಇನ್ನುಮುಂದೆ ರೈತರ ಖಾತೆಗೆ ಬರಲಿದೆ ಕಿಸಾನ್ 8000 ರೂ
ಸದ್ಯ ರಾಜಸ್ಥಾನ ರೈತರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಹೌದು ಕೇಂದ್ರದ ಮೋದಿ ಸರ್ಕಾರ ರೈತರಿಗಾಗಿ ಪರಿಚಯಿಸಿರುವ PM Kisan ಯೋಜನೆಯ ಅಡಿಯಲ್ಲಿ ನೀಡುವ 6 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರವು 8000 ರೂ.ಗೆ ಏರಿಕೆ ಮಾಡಿದೆ. ಇನ್ನುಮುಂದೆ ರಾಜಸ್ತಾನದ ರೈತರು ವಾರ್ಷಿಕವಾಗಿ ಕಿಸಾನ್ ಯೋಜನೆಯಡಿ 8000 ರೂಪಾಯಿಯನ್ನ ಪಡೆದುಕೊಳ್ಳಬಹುದಾಗಿದೆ. ಈ ಕುರಿತು ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಘೋಷಣೆ ಮಾಡಿದ್ದಾರೆ.

ಈ ರೀತಿಯಾಗಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಕೊಳ್ಳಿ
ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ www.pmkisan.gov.in ಗೆ ಭೇಟಿ ನೀಡಿ, ನಂತರ ಅಲ್ಲಿ ಕಾಣಿಸುವ Beneficiary list ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ, ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ Get report ಅನ್ನು ಸೆಲೆಕ್ಟ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ಹೆಲ್ಪ್‌ ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಬಹುದು.

PM Kisan Samman Amount Hike
Image Credit: Hindustantimes

Join Nadunudi News WhatsApp Group

Join Nadunudi News WhatsApp Group