Kisan e KYC: ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆಯುತ್ತಿರುವವರು ಜೂನ್ 30 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ ಹಣ ಬಂದ್.

ರೈತರ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಮಾಹಿತಿ.

PM Kisan Samman Nidhi Yojana: ಕೇಂದ್ರ ಸರ್ಕಾರ ಈಗಾಗಲೇ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ರೈತರು ಮೋದಿ ಸರ್ಕಾರದ ಯೋಜಾನೆಗಳ ಲಾಭವನ್ನು ಪಡೆಯುತ್ತಿದ್ದಾರೆ.

ಇನ್ನು ಈಗಾಗಲೇ ರೈತರಿಗಾಗಿ ಪಿಎಂ ಕಿಸಾನ್ ಯೋಜನೆ (Kisan Samman Yojana) ರೂಪುಗೊಂಡಿದ್ದು ಈ ಯೋಜನೆಯಡಿ ಸಾಕಷ್ಟು ರೈತರು ಸಹಾಯ ಪಡೆಯುತ್ತಿದ್ದಾರೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

E-KYC is required for PM Kisan scheme
Image Credit: Zee News

ಪಿಎಂ ಕಿಸಾನ್ ಯೋಜನೆಗೆ ಇ-ಕೆವೈಸಿ ಅಗತ್ಯ
ರೈತರಿಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಇ-ಕೆವೈಸಿ (PM Kisan eKYC) ಮಾಡಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿದ್ದು,ರೈತರು ಕೂಡಲೇ ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಪಿಎಂ ಕಿಸಾನ್ ಇ-ಕೆವೈಸಿ ಅಪ್ಡೇಟ್ ಗೆ ಜೂನ್ 30 ಕೊನೆಯ ದಿನಾಂಕ
ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Samman Nidhi Yojana) 2023 ರ ಏಪ್ರಿಲ್ 1 ರಿಂದ ಬಾಕಿ ಉಳಿಸಿಕೊಂಡಿರುವ 14 ನೇ ಕಂತಿನ ಸಹಾಯಧನ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರಣದಿಂದ ಇನ್ನು ಕೂಡ ಪಿಎಂ ಕಿಸಾನ್ ಯೋಜನೆಗೆ ಇ-ಕೆವೈಸಿ ಅಪ್ಡೇಟ್ ಮಾಡಿಸದೇ ಇರುವ ರೈತರು ಜೂನ್ 30 ರೊಳಗೆ ಇ-ಕೆವೈಸಿ ಅಪ್ಡೇಟ್ ಅಪ್ಡೇಟ್ ಮಾಡಲು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.

E-KYC is required for PM Kisan scheme
Image Credit: Lokmat

ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಮೋದಿ ಸರ್ಕಾರ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಆದರೆ ಈ ಹಣ ಒಂದೇ ಬಾರಿ ಬರುವುದಿಲ್ಲ. ಕಂತುಗಳಲ್ಲಿ ಬರುತ್ತದೆ.

Join Nadunudi News WhatsApp Group

ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ. ಇನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಇ -ಕೆವೈಸಿ ಅಪ್ಡೇಟ್ ಮಾಡಬಹುದು.

Join Nadunudi News WhatsApp Group