Kisan Samman: ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆಯುವ ಇಂತವರಿಗೆ ಜೈಲು ಶಿಕ್ಷೆ, ಕೇಂದ್ರದ ಆದೇಶ.

ಕಿಸಾನ್ ಸಮ್ಮಾನ್ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುವ ಜನರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

PM Kisan Scheme Rules: ಪ್ರಧಾನ್ ಮಂತ್ರಿ ಕಿಸಾನ್ ಯೋಜನೆ (PM Kisan Samman Yojana) ರೈತರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಜಾರಿಗೆ ತಂದ ಯೋಜನೆ ಆಗಿದೆ. ಈ ಯೋಜನೆಯಿಂದ ಹಲವು ಜನರು ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಗೆ ಸೇರಿದವರಿಗೆ ಉಚಿತವಾಗಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಾ ಇರುತ್ತದೆ.

Central government order to punish those who abuse the Kisan Samman scheme with imprisonment.
Image Credit: : PTI/ REPRESENTATIONAL

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನ್ನದಾತರಿಗೆ ಕೇಂದ್ರ ಸರ್ಕಾರ ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯಿಂದ ರೈತರು ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿ ಪಡೆಯುತ್ತಾರೆ .

ಅಂದರೆ ವರ್ಷಕ್ಕೆ ಮೂರೂ ಬಾರಿ ಈ ಹಣವನ್ನು ಪಡೆಯುತ್ತಾರೆ. ಇದರಿಂದ ಸಾಕಷ್ಟು ಅನ್ನದಾತರಿಗೆ ನೆಮ್ಮದಿ ಸಿಕ್ಕಿದೆ. ವರ್ಷಕ್ಕೆ ಅನ್ನದಾತರು 6000 ರೂಪಾಯಿ ಪಡೆಯುತ್ತಿದ್ದಾರೆ. ಇದೀಗ ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಂದ್ರ ಸರ್ಕಾರಕ್ಕೆ ಲಭಿಸಿದೆ. ಇದರಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

The central government has issued an order that many people are misusing the Kisan Samman scheme of the central government and such people will be sentenced to jail.
Image Credit: bhaskar

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದುರುಪಯೋಗ
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಅರ್ಹರಲ್ಲದವರು ಪಡೆಯುತ್ತಿದ್ದಾರೆ ಮತ್ತು ಅಂತವರಿಂದ ಕೇಂದ್ರ ಸರ್ಕಾರ ಹಣ ಹಿಂಪಡೆಯಲು ನಿರ್ಧಾರವನ್ನ ಮಾಡಿದೆ. ಒಂದು ವೇಳೆ ದುರುಪಯೋಗ ಮಾಡಿಕೊಂಡ ಈ ಹಣ ಹಿಂತಿರುಗಿಸದಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ.

ದೇಶಾದ್ಯಂತ ಅನೇಕ ರಾಜ್ಯದಲ್ಲಿ ನಕಲಿ ದಾಖಲೆಗಳ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅವರೆಲ್ಲರೂ ಪಡೆದುಕೊಂಡ ಹಣವನ್ನು ಹಿಂತಿರುಗಿಸಬೇಕು. ಇಲ್ಲದಿದ್ದರೆ ಜೈಲಿಗೆ ಹೋಗುವ ಸಂದರ್ಭ ಎದುರಾಗುತ್ತದೆ. ಈ ಕಾರಣದಿಂದ ಅರ್ಹತೆ ಇಲ್ಲದವರು ಈ ಯೋಜನೆಯಿಂದ ದೂರವಿರುವುದು ಉತ್ತಮ.

Join Nadunudi News WhatsApp Group

Join Nadunudi News WhatsApp Group