PM Modi Car: ಪ್ರಧಾನಿ ಮೋದಿ ಬಳಸುವ ಬುಲೆಟ್ ಪ್ರೂಫ್ ಕಾರಿನ ಬೆಲೆ ಎಷ್ಟು ಗೊತ್ತಾ…? ದುಬಾರಿ ಕಾರ್

ಪ್ರಧಾನಿ ಮೋದಿ ಅವರು ಬಳಸುವ ಬುಲೆಟ್ ಪ್ರೂಫ್ ಕಾರಿನ ಬೆಲೆ ಎಷ್ಟು...?

PM Modi High Security Car Price: ದೇಶದಲ್ಲಿ ಪ್ರಮುಖ ವ್ಯಕ್ತಿಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗುತ್ತದೆ. ಅದ್ರಲ್ಲೂ ದೇಶದ ಉನ್ನತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರಿಗೆ ಸಾಕಷ್ಟು ಸುರಕ್ಷತಾ ಕ್ರಮವನ್ನು ವಹಿಸಬೇಕಾಗುತ್ತದೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಭಾರತದ ಪ್ರಧಾನ ಮಂತ್ರಿಗಳಿಗೆ ಗರಿಷ್ಠ ಭದ್ರತಾ ಕಾರುಗಳನ್ನು ಒದಗಿಸುವ ನೀತಿಯನ್ನು ತೆಗೆದುಕೊಂಡಿದ್ದು, ಇದು ಅನಿವಾರ್ಯವೂ ಆಗಿದೆ. ಸದ್ಯ ಪ್ರಧಾನಿ ಮೋದಿ ಅವರು ಬಳಸುವ ಬುಲೆಟ್ ಫ್ರೂಫ್ ಕಾರ್ ನ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಇದೀಗ ನಾವು ಪ್ರಧಾನಿ ಮೋದಿ ಅವರು ಬಳಸುವ ಬುಲೆಟ್ ಪ್ರೂಫ್ ಕಾರಿನ ಬೆಲೆ ಎಷ್ಟು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

PM Modi High Security Car
Image Credit: Carandbike

ಪ್ರಧಾನಿ ಮೋದಿ ಬಳಸುವ ಬುಲೆಟ್ ಪ್ರೂಫ್ ಕಾರಿನ ಬೆಲೆ ಎಷ್ಟು ಗೊತ್ತಾ…?
ಪ್ರಧಾನಿ ಮೋದಿಗೆ ಗರಿಷ್ಠ ಭದ್ರತೆಯೊಂದಿಗೆ ಬುಲೆಟ್ ಪ್ರೂಫ್ ಕಾರನ್ನು ನೀಡಲಾಗಿದೆ. ಗುಂಡಿನ ದಾಳಿ, ಬಾಂಬ್ ದಾಳಿ ಸೇರಿದಂತೆ ಹಲವು ದಾಳಿಗಳಿಂದ ಈ ಕಾರು ರಕ್ಷಣೆ ನೀಡುತ್ತದೆ. ಅಷ್ಟೇ ಅಲ್ಲ, ಪ್ರತಿ ದಾಳಿಯನ್ನು ನಡೆಸುವ ಸಾಮರ್ಥ್ಯವೂ ಇದಕ್ಕಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರಿಗೆ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಬುಲೆಟ್ ಪ್ರೂಫ್ ಕಾರನ್ನು ನೀಡಲಾಗಿತ್ತು. 12 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಈ ಕಾರನ್ನು ಪ್ರಧಾನಿಯವರ ಸಂಚಾರ ಮತ್ತು ಸುರಕ್ಷತೆ ಅಗತ್ಯಗಳಿಗಾಗಿ ಮಾರ್ಪಡಿಸಲಾಗಿದೆ.

ಕಪ್ಪು ಬಣ್ಣದ ರೇಂಜ್ ರೋವರ್ ಸೆಂಟಿನೆಲ್ ಕಾರಿನಲ್ಲಿ ಮೋದಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಈ ಕಾರಿನ ಬೆಲೆ ಸುಮಾರು 10 ಕೋಟಿ ರೂಪಾಯಿಗಳು ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಲೋಡ್ ಮಾಡಲಾಗಿದೆ. ಮುಖ್ಯವಾಗಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳಿಗೆ ನೀಡುವ ಕಾರುಗಳನ್ನು ವಿಶೇಷವಾಗಿ ಮಾರ್ಪಡಿಸಲಾಗಿದೆ. ಅದರ ಸುರಕ್ಷತಾ ವೈಶಿಷ್ಟ್ಯಗಳು, ಬೆಲೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ.

PM Modi High Security Car Price
Image Credit: gqindia

ಈ ಬುಲೆಟ್ ಪ್ರೂಫ್ ಕಾರಿನಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ
ಇನ್ನು 2019ರಲ್ಲಿ ಮೋದಿಯವರು ಹೆಚ್ಚಾಗಿ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನು ಬಳಸುತ್ತಿದ್ದರು. ಈ ಕಾರಿನ ಬೆಲೆ 2.5 ಕೋಟಿ ರೂಪಾಯಿ. ಆದರೆ ಭದ್ರತಾ ವೈಶಿಷ್ಟ್ಯಗಳ ನಂತರ ಕಾರಿನ ಮೌಲ್ಯದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮೋದಿ ಅವರು ಬಿಎಂಡಬ್ಲ್ಯು 7 ಸರಣಿಯ ಕಾರನ್ನು ಬಳಸಿದ್ದರು. ಜತೆಗೆ ಟೊಯೊಟಾ ಫಾರ್ಚುನರ್ ಕಾರಿನಲ್ಲಿ ಮೋದಿ ಪ್ರಯಾಣ ಮಾಡಿದ್ದರು. ಪ್ರಧಾನಿಗೆ ಒದಗಿಸಲಾದ ಎಲ್ಲಾ ಕಾರುಗಳು ಬುಲೆಟ್ ಪ್ರೂಫ್ ಆಗಿದ್ದು, ಗರಿಷ್ಠ ಭದ್ರತೆಯನ್ನು ಒದಗಿಸುತ್ತವೆ. ಅವರ ಸುರಕ್ಷತೆಗಾಗಿಯೇ ಹೆಚ್ಚಿನ ಸೇಫ್ಟಿ ಫೀಚರ್ ಗಳ ಮೂಲಕ ಕಾರನ್ನು ಮೋಡಿಫೈ ಮಾಡಲಾಗಿರುತ್ತದೆ.

Join Nadunudi News WhatsApp Group

Modi Bulletproof Car Features
Image Credit: Financialexpress

Join Nadunudi News WhatsApp Group