Svanidhi Loan: ಕೇಂದ್ರದ ಇನ್ನೊಂದು ಬಹುದೊಡ್ಡ ಯೋಜನೆ, ಬಡವರಿಗೆ ಯಾವುದೇ ಗ್ಯಾರೆಂಟಿ ಇಲ್ಲಿದೆ 50000 ರೂ ಸಾಲ.

ಪ್ರಧಾನ ಮಂತ್ರಿ ಈ ಯೋಜನೆಯಡಿ ಯಾವುದೇ ಗ್ಯಾರೆಂಟಿ ಇಲ್ಲದೆ 50,000 ರೂ ಸಾಲ ಸೌಲಭ್ಯ

PM Svanidhi Loan Scheme Details: ಕೇಂದ್ರದ ಮೋದಿ ಸರ್ಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಸದ್ಯ ನಿರುದ್ಯೋಗಿಗಳಿಗೆ ಉದ್ಯೋಗ ಕಂಡುಕೊಳ್ಳಲು ಸಹಾಯವಾಗಲು ನೂತನ ಯೋಜನೆಯನ್ನು ಪರಿಚಯಿಸಿದೆ. ಸಣ್ಣ ಉದ್ಯಮ ಆರಂಭಿಸಲು ಬಯಸುವವರಿಗೆ ಸಾಲದ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ Pradhan Mantri Svanidhi Yojana ಜಾರಿಗೊಳಿಸಲು ನಿರ್ಧರಿಸಿದೆ.

ಸರ್ಕಾರದ ಈ ಯೋಜನೆಯಡಿ ಸಾಕಷ್ಟು ಜನರು ಈಗಾಗಲೇ ಸಾಲ ಸೌಲಭ್ಯವನ್ನು ಪಡೆದುಕೊಂಡು ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಹಾಗೂ ಬೀದಿ ಬದಿಯ ವ್ಯಾಪಾರಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆಯಡಿ ಸ್ವಂತ ಉದ್ಯೋಗ ಆರಂಭಿಸಲು ಎಷ್ಟು ಸಾಲ ಸೌಲಭ್ಯ ಸಿಗಲಿದೆ…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Pradhan Mantri Svanidhi Yojana
Image Credit: Yojanahakkachya

ಕೇಂದ್ರದ ಇನ್ನೊಂದು ಬಹುದೊಡ್ಡ ಯೋಜನೆ ಘೋಷಣೆ
Pradhan Mantri Svanidhi Yojana ಅಡಿಯಲ್ಲಿ, ಬೀದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ನಡೆಸಲು ಸರ್ಕಾರದಿಂದ ಸಾಲವನ್ನು ಪಡೆಯಬಹುದು. ತರಕಾರಿ ಮಾರಾಟಗಾರರು, ಹಣ್ಣು ಮತ್ತು ಹೂವು ಮಾರಾಟಗಾರರು, ಬೀದಿ ವ್ಯಾಪಾರಿಗಳು ಮತ್ತು ಸಣ್ಣ ಫಾಸ್ಟ್ ಫುಡ್ ಮಳಿಗೆಗಳನ್ನು ನಡೆಸುತ್ತಿರುವವರು ಈ ಸಾಲವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಬಡವರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ 50,000 ರೂ ಸಾಲ
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ, ಕೇಂದ್ರ ಸರ್ಕಾರವು 50,000 ವರೆಗೆ ಸಾಲವನ್ನು ನೀಡುತ್ತದೆ. ಆದರೆ, 50 ಸಾವಿರ ರೂಪಾಯಿ ಸಾಲ ಒಂದೇ ಬಾರಿಗೆ ಲಭಿಸುವಿದಿಲ್ಲ. ಬದಲಾಗಿ ಕಂತುಗಳ ರೂಪದಲ್ಲಿ ಸಾಲ ನಿಮಗೆ ಸಿಗುತ್ತದೆ. ಈ ಯೋಜನೆಯಡಿ ಆರಂಭಿಕ ಸಾಲ 10,000 ರೂ. ಆಗಿದೆ. ನಿಯಮಿತ ಅವಧಿಯೊಳಗೆ ಈ ಸಾಲವನ್ನು ಪಾವತಿಸಿದರೆ ಎರಡನೇ ಸಾಲವಾಗಿ 20,000 ರೂ. ನೀಡಲಾಗುತ್ತದೆ.

Pradhan Mantri Svanidhi Yojana Benefits
Image Credit: Yourstory

ಯಾವುದೇ ಗ್ಯಾರಂಟಿ ನೀಡದೆ ಸಾಲವನ್ನು ಪಡೆದುಕೊಳ್ಳಬಹುದು. ನೀವು ಹಣ ಪಡೆಯಲು ಅರ್ಹರಾಗಿದ್ದರೆ ಸಾಲದ ಮೊತ್ತ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ ಸಾಲ ಪಡೆಯಲು Aadhar Card ಇದ್ದಾರೆ ಸಾಕಾಗುತ್ತದೆ. ಇಲ್ಲಿ ಪಡೆದ ಸಾಲವನ್ನು ಒಂದು ವರ್ಷದೊಳಗೆ ಮರುಪಾವತಿ ಮಾಡಬಹುದು. ಇದನ್ನು ಮಾಸಿಕ ಕಂತುಗಳಲ್ಲಿಯೂ ಮರುಪಾವತಿ ಮಾಡಬಹುದು.

Join Nadunudi News WhatsApp Group

ಇಂತವರು ಮಾತ್ರ ಯೋಜನೆಯ ಲಾಭ ಪಡೆಯಲು ಸಾಧ್ಯ
•ಯಾವುದೇ ಬೀದಿ ಬದಿಯ ವ್ಯಾಪಾರಿಗಳು ಈ ಯೋಜನೆಯ ಲಾಭ ಪಡೆಯಬಹುದು.

•ಫಲಾನುಭವಿಯ ವಯಸ್ಸು 18 ರಿಂದ 60 ವರ್ಷಗಳ ನಡುವೆ ಇರಬೇಕು.

•ಫಲಾನುಭವಿ ಯಾವುದೇ ಸಾಲವನ್ನು ಹೊಂದಿರಬಾರದು.

•ಸರ್ಕಾರದ ಈ ಯೋಜನೆಯಡಿ, ಫಲಾನುಭವಿಯು ಯಾವುದೇ ಆಧಾರವಿಲ್ಲದೆ 50,000 ರೂ.ವರೆಗೆ ಸಾಲವನ್ನು ಪಡೆಯುತ್ತಾನೆ.

PM Svanidhi Loan Scheme Details
Image Credit: Godigit

Join Nadunudi News WhatsApp Group