Vishwakarma 2024: ಸ್ವಂತ ಬಿಸಿನೆಸ್ ಮಾಡುವವರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್, ಯಾವುದೇ ಗ್ಯಾರೆಂಟಿ ಇಲ್ಲದೆ 2 ಲಕ್ಷ ಲೋನ್

ಸ್ವಂತ ಬಿಸಿನೆಸ್ ಮಾಡುವವರಿಗೆ ಕೇಂದ್ರದ ಈ ಯೋಜನೆಯಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ 2 ಲಕ್ಷ ರೂ ಸಾಲ ಸಿಗಲಿದೆ

PM Vishwakarma Loan Scheme: ಕೇಂದ್ರ ಸರಕಾರ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಭಾರತದ ಸಾಂಪ್ರದಾಯಿಕ ಕಲೆಗಳಿಗೆ ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗುತ್ತಿದೆ. ಈ ಯೋಜನೆಯು 18 ಕಲೆಗಳ ವ್ಯಾಪ್ತಿಗೆ ಸಂಬಂಧಿಸಿದ್ದಾಗಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಕಲೆಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗುವುದು ಎನ್ನಲಾಗಿದೆ.

ಕುಶಲಕರ್ಮಿಗಳ ಕಲಾತ್ಮಕ ಅನ್ವೇಷಣೆಗಳಿಗೆ ಹಣಕಾಸಿನ ತೊಡಕು ಉಂಟಾಗಬಾರದು ಅನ್ನೋ ಕಾರಣಕ್ಕೆ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ವಿಶ್ವಕರ್ಮ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಜಾರಿಗೆ ತರಲಾಗುತ್ತಿದೆ. ಆದರೆ ಯೋಜನೆಗೆ ಸಂಪೂರ್ಣ ಆರ್ಥಿಕ ನೆರವನ್ನು ಕೇಂದ್ರ ಸರಕಾರವೇ ನೀಡಲಿದೆ.

PM Vishwakarma Scheme
Image Credit: Livemint

ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಸಾಲಗಳನ್ನು ನೀಡಲಾಗುವುದು

ದೇಶದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ರೂ 2 ಲಕ್ಷದ ವರೆಗೆ ಸಬ್ಸಿಡಿ ಸಾಲಗಳನ್ನು ಒದಗಿಸಲಾಗುವುದು. ಈ ಯೋಜನೆಗಾಗಿ 13,000 ಕೋಟಿ ರೂಪಾಯಿ ಹಣವನ್ನು ಮೀಸಲಿರಿಸಲಾಗಿದೆ. ಸಬ್ಸಿಡಿ ಸಾಲ ಮಾತ್ರವಲ್ಲದೇ ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಕುಲಶಕರ್ಮಿಗಳಿಗೆ ಆರಂಭಿಕ ಹಂತದಲ್ಲಿ ಶೇ. 5ರ ಬಡ್ಡಿದರದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಈ ಯೋಜನೆಯ ಬಡ್ಡಿದರವು ಮಾರುಕಟ್ಟೆಯಲ್ಲಿ ಸಾಲದ ಮೇಲಿನ ಬಡ್ಡಿದರಕ್ಕಿಂತ ಕಡಿಮೆಯಾಗಿದೆ. ಯೋಜನೆಯ ಮೂಲಕ ಹಂತ ಹಂತವಾಗಿ ಯೋಜನೆಯ ಸಾಲದ ಮೊತ್ತವನ್ನು ಏರಿಕೆ ಮಾಡಲಾಗುತ್ತದೆ.

ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು

Join Nadunudi News WhatsApp Group

ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಸುಲಭವಾಗಿ ಸಾಲವನ್ನು ನೀಡಲಾಗುತ್ತದೆ. ಸುಧಾರಿತ ತಂತ್ರಗಳು ಮತ್ತು ಜ್ಞಾನದೊಂದಿಗೆ ಕುಶಲಕರ್ಮಿಗಳನ್ನು ಸಜ್ಜುಗೊಳಿಸಲಾಗುತ್ತದೆ. ಆಧುನಿಕ ಉಪಕರಣಗಳನ್ನು ಪಡೆಯಲು ಹಣಕಾಸಿನ ನೆರವು ನೀಡುವುದು. ಡಿಜಿಟಲ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕುಶಲಕರ್ಮಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಕುರಕುಶಲ ವಸ್ತುಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಸಹಾಯವನ್ನು ಒದಗಿಸಲಾಗುತ್ತದೆ. ಇನ್ನು ಪ್ರಧಾನಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಸುಮಾರು 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅಂದಾಜಿಸಿದ್ದಾರೆ.

PM Vishwakarma Loan Latest Update
Image Credit: News 24

ಪಿಎಂ ವಿಶ್ವಕರ್ಮ ಯೋಜನೆಗೆ ಹೀಗೆ ನೊಂದಾವಣೆ ಮಾಡಿಕೊಳ್ಳಿ

ಪ್ರತೀ ಗ್ರಾಮಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳನ್ನು ಯೋಜನೆಯ ನೋಂದಣಿ ಕೇಂದ್ರಗಳಾಗಿ ಗುರುತಿಸಲಾಗಿದೆ. ಈ ಕೇಂದ್ರಗಳ ಮೂಲಕ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡ ಬಹುದಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯ ಅರ್ಜಿದಾರರ ವಯಸ್ಸು 18 ವರ್ಷ ದಾಟಿರಬೇಕು.

ಇನ್ನು www.pmvishwakarma.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಹರು ವಿಶ್ವಕರ್ಮಯೋಜನೆಗೆ ನೋಂದಾಯಿಸಿಕೊಳ್ಳಬಹುದು. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ಬ್ಯಾಂಕ್ ಅಕೌಂಟ್ ಡಿಟೈಲ್ಸ್ ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group