PMUY Subsidy: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಿಡುಗಡೆ ಮಾಡಿದ ಕೇಂದ್ರ, ನಿಮ್ಮ ಖಾತೆಗೆ ಬಂದಿದೆ ಎಂದು ಈ ರೀತಿ ಚೆಕ್ ಮಾಡಿ

PM ಉಜ್ವಲ ಯೋಜನೆಯ ಸಬ್ಸಿಡಿ ಹಣ ರಿಲೀಸ್, ಹಣ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ತಿಳಿಯಲು ಈ ರೀತಿ ಮಾಡಿ.

PMUY Subsidy Release 2024: ಕೇಂದ್ರ ಸರ್ಕಾರ ದೇಶದ ಜನತೆಗಾಗಿ Pradhan Mantri Ujjwala ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯಡಿ ಲಕ್ಷಾಂತರ ಜನರು ಲಾಭವನ್ನು ಪಡೆಯುತ್ತಿದ್ದಾರೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಇದರ ಜೊತೆಗೆ ಈ ಯೋಜನೆಯಡಿ ಕೇಂದ್ರವು ದೇಶದಲ್ಲಿ 75 ಲಕ್ಷ ಹೊಸ ಎಲ್ ಪಿಜಿ ಸಂಪರ್ಕವನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 75 ಲಕ್ಷ ಬಡ ಕುಟುಂಬಗಳಿಗೆ ಉಚಿತ LPG ಸಂಪರ್ಕ ನೀಡುವಂತೆ ಕೇಂದ್ರದ ಮೋದಿ ಸರ್ಕಾರ ನಿರ್ಧರಿಸಿದೆ.

gas cylinder subsidy release 2024
Image Credit: Original Source

PMU ಯೋಜನೆಯ ಸಬ್ಸಿಡಿ ಹಣ ರಿಲೀಸ್
ಇನ್ನು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಈ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ಸಿಗುತ್ತದೆ. ಸದ್ಯ ಮೋದಿ ಸರ್ಕಾರ PMU ಯೋಜನೆಯ Subsidy ಹಣವನ್ನು ಬಿಡುಗಡೆ ಮಾಡಿದೆ. ನೀವು ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸುವಾಗ ಸಂಪೂರ್ಣ ಹಣವನ್ನು ಪಾವತಿಸಬೇಕಾಗುತ್ತದೆ.

ನಂತರ ನಿಮ್ಮ ಖಾತೆಗೆ ಸರ್ಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡುತ್ತದೆ. ಯೋಜನೆಯ ಫಲಾನುಭವಿಗಳು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ..? ಅಥವಾ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು. ನೀವು ಆನ್ಲೈನ್ ನಲ್ಲಿ ಸುಲಭ ವಿಧಾನದ ಮೂಲಕ ಖಾತೆಯನ್ನು ಚೆಕ್ ಮಾಡಬಹುದು. ಖಾತೆಯ ಸ್ಟೇಟಸ್ ಚೆಕ್ ಮಾಡುವ ವಿಧಾನವನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಸಬ್ಸಿಡಿ ಹಣ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ತಿಳಿಯಲು ಈ ರೀತಿ ಮಾಡಿ
•ನೀವು PMU ಯೋಜನೆಯಡಿ ಗ್ಯಾಸ್ ಸಬ್ಸಿಡಿ ಹಣ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು ಮೊದಲು https://www.mylpg.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

•ಅಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಸಂಪರ್ಕವನ್ನು ಹೊಂದಿದ್ದಿರೋ ಅದನ್ನು ಕ್ಲಿಕ್ ಮಾಡಬೇಕು.

Join Nadunudi News WhatsApp Group

•ನಂತರ ನಿಮ್ಮ ಖಾತೆಯ ವಿವರವನ್ನು ಸಲ್ಲಿಸಬೇಕು.

•ಖಾತೆಯ ವಿವರವನ್ನು ನೀಡಿದ ನಂತರ ನಿಮ್ಮ ಖಾತೆಗೆ ಸಬ್ಸಿಡಿ ಹಣ ಜಮಾ ಆಗಿದೆಯಾ ಇಲ್ಲವೋ ಎನ್ನುವುದನ್ನು ತೋರಿಸಲಾಗುತ್ತದೆ.

lpg cylinder subsidy release
Image Credit: Original Source

PM Ujjwala ಯೋಜನೆಯ ಸಬ್ಸಿಡಿ ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ
*https://www.pmuy.gov.in/index.aspx ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

*ವೆಬ್ ಸೈಟ್ ಓಪನ್ ಆದ ತಕ್ಷಣ HP, Inden ಅಥವಾ Bharat Gas ನಂತಹ ಗ್ಯಾಸ್ ವಿತರಕರನ್ನು ಆಯ್ಕ ಮಾಡಬೇಕು. ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ನೀ ಅರ್ಜಿಯನ್ನು ಭರ್ತಿ ಮಾಡಬೇಕು.

*ದಾಖಲೆಗಳ ಸಾಫ್ಟ್ ಕಾಪಿಯನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕುತ್ತದೆ.

*ದಾಖಲೆಗಳನ್ನು ಪರಿಶೀಲಿಸಿದ ನಂತರ ಹೊಸ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ.

*ಅರ್ಜಿ ಸಲ್ಲಿಕೆಗೆ Aadhaar card , ಹೆಸರು, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಅನೇಕ ವೈಯಕ್ತಿಕ ದಾಖಲೆಗಳ ಮಾಹಿತಿ ಅಗತ್ಯವಿದೆ.

Join Nadunudi News WhatsApp Group