Pan Card: ನಾಳೆಯಿಂದ ಇಂತಹ ಜನರ ಪಾನ್ ಕಾರ್ಡ್ ಬ್ಯಾನ್, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ.

ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ನಾಳೆಯಿಂದ ಅವರ ಪಾನ್ ಕಾರ್ಡ್ ನಿಷ್ಕ್ರಿಯ ಆಗಲಿದೆ.

Pan Card Link Last Date: ಸರ್ಕಾರ ಜನರಿಗೆ ಈಗಾಗಲೇ ಪಾನ್ ಹಾಗೂ ಆಧಾರ್ (Pan Aadhar Link) ಜೋಡಣೆ ಮಾಡುವಂತೆ ಆದೇಶ ನೀಡಿದೆ. ಈ ಹಿಂದೆ ಮಾರ್ಚ್ 31 2023 ಕೊನೆಯ ದಿನಾಂಕವನ್ನು ಸರ್ಕಾರ ಆಧಾರ್ ಪಾನ್ ಜೋಡಣೆಗೆ ನಿಗದಿಪಡಿಸಿತ್ತು. ಆದರೆ ಸಾಕಷ್ಟು ಜನರ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದ ಕಾರಣ ಗಡುವನ್ನು ವಿಸ್ತರಿಸಿತ್ತು. ಇದೀಗ ಕೇಂದ್ರ ಸರ್ಕಾರ ಪಾನ್ ಕಾರ್ಡ್ ಲಿಂಕ್ ಗೆ ಸಂಬಂಧಿಸಿದಂತೆ ಮಹತವಾದ ಆದೇಶ ಹೊರಡಿಸಿದೆ.

Tomorrow is the last date to link PAN and Aadhaar card.
Image Credit: livehindustan

ಪಾನ್ ಆಧಾರ್ ಲಿಂಕ್ ಗೆ ನಾಳೆ ಕೊನೆಯ ದಿನಾಂಕ
ಇನ್ನು ಪಾನ್ ಆಧಾರ್ ಲಿಂಕ್ ಗೆ ಮಾರ್ಚ್ 31 ರಿಂದ ಜೂನ್ 30 ರ ತನಕ ಗಡುವನ್ನು ವಿಸ್ತರಿಸಿದೆ. ಮಾರ್ಚ್ 31 ಮುಗಿದ ಬಳಿಕ ಜನಸಾಮಾನ್ಯರಿಗೆ ಸರ್ಕಾರ ಮತ್ತೆ ಮೂರು ತಿಂಗಳ ಸಮಯಾವಕಾಶವನ್ನು ನೀಡಿದೆ. ಮಾರ್ಚ್ ನಂತರ ಆಧಾರ್ ಪಾನ್ ಜೋಡಣೆ ಮಾಡಿದವರಿಗೆ ಸರ್ಕಾರ 1000 ದಂಡವನ್ನು ವಿಧಿಸಿದೆ.

ದಂಡದ ಮೊತ್ತ ಹೆಚ್ಚಿದ್ದ ಕಾರಣ ಜೂನ್ ತಿಂಗಳು ಮುಗಿದರು ಕೂಡ ಪಾನ್ ಆಧಾರ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಇನ್ನು ಪಾನ್ ಲಿಂಕ್ ಆಗದೆ ಇದ್ದವರಿಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಜುಲೈ 1 ರಿಂದ ಇಂತವರ ಪಾನ್ ಕಾರ್ಡ್ ನಿಷ್ಕ್ರಿಯ
ಇನ್ನು ಜೂನ್ 30 ಮುಗಿದರು ಕೂಡ ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ. ಬ್ಯಾಂಕ್ ಖಾತೆ, ನಿಗದಿತ ಠೇವಣಿಯ ಹೂಡಿಕೆ, ಡಿಮ್ಯಾಟ್ ಅಕೌಂಟ್ ಹಾಗೂ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಮುಖ್ಯವಾಗಿರುತ್ತದೆ.

If PAN card and Aadhaar card are not linked by tomorrow, fine should be paid
Image Credit: rajteachers

ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನೀವು ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಜೂನ್ 30 ರೊಳಗೆ ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಕೊಳ್ಳುವುದು ಉತ್ತಮ. ಸರ್ಕಾರ ಪಾನ್ ಆಧಾರ್ ಜೋಡಣೆಗೆ ಮತ್ತೆ ದಿನಾಂಕವನ್ನು ವಿಸ್ತರಿಸುವುದಿಲ್ಲ. ವಿಸ್ತರಿಸಿದರು ಕೂಡ ಮುಂದಿನ ದಿನಗಳಲ್ಲಿ 10 ಸಾವಿರ ದಂಡ ವಿಧಿಸಲಿದೆ ಎನ್ನುವ ಬಗ್ಗೆ ಸುದ್ದಿಯಾಗಿದೆ.

Join Nadunudi News WhatsApp Group

Join Nadunudi News WhatsApp Group