PNB Update: ಬ್ಯಾಂಕ್ ಸಾಲ ಮಾಡುವವರಿಗೆ ಬೇಸರದ ಸುದ್ದಿ, ಇನ್ಮುಂದೆ ಕಟ್ಟಬೇಕು ದುಬಾರಿ ಶುಲ್ಕ.

ಈ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಬೇಸರದ ಸುದ್ದಿ

PNB Bank MCLR Hike: ಜನಸಾಮಾನ್ಯರು ತಮ್ಮ ಆರ್ಥಿಕ ಸಮಸ್ಯೆಯ ನಿವಾರಣೆಗಾಗಿ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಲು ಮುಂದಾಗುತ್ತಾರೆ. ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದದ ನಂತರ ಪ್ರತಿ ತಿಂಗಳು ಸಾಲವನ್ನು ತೀರಿಸಬೇಕಾಗುತ್ತದೆ. ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆಯುವವರಿಗೆ ಬ್ಯಾಂಕ್ ಗಳು ಗ್ರಾಹಕರಿಗೆ ಸಾಲದ ಬಡ್ಡಿದರದ ಬಗ್ಗೆ ಮಾಹಿತಿ ನೀಡಿರುತ್ತದೆ.

ಸಧ್ಯ ದೇಶದ ಕೆಲವು ಬ್ಯಾಂಕ್ ಗಳು ಆಗಾಗ ಸಾಲದ ಬಡ್ಡಿದರವನ್ನು ಬದಲಿಸುತ್ತಾ ಇರುತ್ತವೆ. ಸಾಲದ ಬಡ್ಡಿದರ ಹೆಚ್ಚಾದರೆ ಸಾಲಗಾರರ ಹೊರೆ ಇನ್ನಷ್ಟು ಹೆಚ್ಚಾಗುತ್ತದೆ. ಸದ್ಯ ಈ ತಿಂಗಳಿನಲ್ಲಿ ದೇಶದ ಜನಪ್ರಿಯ ಬ್ಯಾಂಕ್ ಗಳು ತನ್ನ ಸಾಲದ ಬಡ್ಡಿದರವನ್ನು ಪರಿಷ್ಕರಿಸಿವೆ. ಇದೀಗ ನಾವು ಈ ಲೇಖನದಲ್ಲಿ ಯಾವ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

PNB Bank MCLR Hike
Image Credit: Live Mint

ಬ್ಯಾಂಕ್ ಸಾಲ ಮಾಡುವವರಿಗೆ ಬೇಸರದ ಸುದ್ದಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಶುಕ್ರವಾರ, ಮೇ 31 ರಂದು ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರಗಳನ್ನು (MCLR) 5 ಬೇಸಿಸ್ ಪಾಯಿಂಟ್‌ ಗಳವರೆಗೆ ಹೆಚ್ಚಿಸಿದೆ. ಈ ಹೆಚ್ಚಳವು ವಿಭಿನ್ನ ಅವಧಿಗಳಿಗೆ ವಿಭಿನ್ನವಾಗಿರುತ್ತದೆ. ಬ್ಯಾಂಕ್ MCLR ದರಗಳನ್ನು 3 ತಿಂಗಳಿಂದ 3 ವರ್ಷಗಳ ಅವಧಿಗೆ ಬದಲಾಯಿಸಿದೆ. ಹೊಸ ದರಗಳು ಜೂನ್ 1, 2024 ರಿಂದ ಜಾರಿಗೆ ಬಂದಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಿನಂತೆ ಕೆಲವು ಅವಧಿಗಳಿಗೆ ದರಗಳನ್ನು ಇಟ್ಟುಕೊಂಡಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಉದಾಹರಣೆಗೆ, ರಾತ್ರಿಯ MCLR ನಲ್ಲಿ ಯಾವುದೇ ಬದಲಾವಣೆಯಿಲ್ಲ ಮತ್ತು ಇದು ಹಿಂದಿನ ದರದಂತೆ 8.25 ಪ್ರತಿಶತದಷ್ಟಿದೆ.

Panjab National Bank
Image Credit: Informal Newz

ಇನ್ಮುಂದೆ ಕಟ್ಟಬೇಕು ದುಬಾರಿ ಶುಲ್ಕ
ಬ್ಯಾಂಕ್ ಸಹ 1 ತಿಂಗಳ ಅವಧಿಗೆ MCLR ದರವನ್ನು ಶೇಕಡಾ 8.30 ಕ್ಕೆ ಸ್ಥಿರವಾಗಿ ಇರಿಸಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದಾಗ್ಯೂ, 1 ತಿಂಗಳಿಗಿಂತ ಹೆಚ್ಚಿನ ಅವಧಿಗೆ MCLR ದರಗಳಲ್ಲಿ ಸ್ವಲ್ಪ ಹೆಚ್ಚಳವಾಗಿದೆ. MCLR ಅನ್ನು 3 ತಿಂಗಳ ಅವಧಿಗೆ 8.50 ಪರ್ಸೆಂಟ್‌ಗೆ ಪರಿಷ್ಕರಿಸಲಾಗಿದೆ. ಈ ಮೊದಲು ಈ ದರವು 8.45% ಆಗಿತ್ತು.

Join Nadunudi News WhatsApp Group

ಅದೇ ರೀತಿ, 6 ತಿಂಗಳ ಎಂಸಿಎಲ್‌ಆರ್ ದರವನ್ನು ಸಹ 8.65% ರಿಂದ 8.70% ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ, 1 ವರ್ಷದ ದರವನ್ನು 8.80% ರಿಂದ 8.85% ಕ್ಕೆ ಹೆಚ್ಚಿಸಲಾಗಿದೆ. ಆದರೆ 3 ವರ್ಷದ MCLR ದರವನ್ನು 9.10% ರಿಂದ 9.15% ಕ್ಕೆ ಹೆಚ್ಚಿಸಲಾಗಿದೆ. ಈ ಅವಧಿಗಳ ದರಗಳ ಹೆಚ್ಚಳದಿಂದಾಗಿ, ಈಗ ನೀವು ಈ ಅವಧಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ನಿಂದ ಸಾಲವನ್ನು ತೆಗೆದುಕೊಂಡರೆ, ಅದು ನಿಮಗೆ ಮೊದಲಿಗಿಂತ ಸ್ವಲ್ಪ ಹೆಚ್ಚು ವೆಚ್ಚವಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

PNB Bank Latest News
Image Credit: The Hindu Businessline

Join Nadunudi News WhatsApp Group