Poco F5 Pro 5G: ಭಾರತದಲ್ಲಿ F5 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ, ಇದರ ಬೆಲೆ ಎಷ್ಟು.

ಪೊಕೊ ಎಫ್ 5 ಪ್ರೊ 5 ಜಿ (Poco F5 Pro 5G) ಫೋನ್ ಅನ್ನು ಇಂದು ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಮಾಡುತ್ತಿದೆ. ಸ್ಮಾರ್ಟ್ ಫೋನ್ ಖರೀದಿಸಲು ಬಯಸುವವರು ಈ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

Poco F5 Pro 5G Smartphone: ಭಾರತದಲ್ಲಿ ಪೊಕೊ ಸಂಸ್ಥೆಯ ಸ್ಮಾರ್ಟ್ ಫೋನ್ ಅಪರೂಪಕ್ಕೆ ಬಿಡುಗಡೆ ಆಗುತ್ತಿದೆ. ಇದೀಗ ಕೆಲವು ತಿಂಗಳು ಕಾಲ ಕಾದು ಆಕರ್ಷಕವಾದ ಹೊಸ ಸ್ಮಾರ್ಟ್ ಫೋನ್ ಒಂದನ್ನು ಅನಾವರಣ ಮಾಡಲು ಕಂಪನಿ ಮುಂದಾಗಿದೆ. ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೊಕೊ ಎಫ್ 5 ಪ್ರೊ 5 ಜಿ (Poco F5 Pro 5G) ಫೋನ್ ಅನ್ನು ಇಂದು ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಮಾಡುತ್ತಿದೆ. ಸ್ಮಾರ್ಟ್ ಫೋನ್ ಖರೀದಿಸಲು ಬಯಸುವವರು ಈ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

Poco F5 Pro 5G Smartphone
Image Source: Automobile

ಪೋಕೋ F5 ಪ್ರೊ 5G ಸ್ಮಾರ್ಟ್‌ಫೋನ್‌
ಪೋಕೋ F5 ಪ್ರೊ 5G ಸ್ಮಾರ್ಟ್‌ಫೋನ್‌ 3200*1400 ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಅಮೂಲೋಡ್ ಡಿಸ್ ಪ್ಲಯನ್ನು ಹೊಂದಿರಲಿದೆಯಂತೆ. 120 hz ಆಡಾಪ್ಟಿವ್ ರಿಫ್ರೆಶ್ ರೇಟ್. hdr10 + ಬೆಂಬಲ ಪಡೆದುಕೊಂಡಿರುವ ಸಾಧ್ಯತೆ ಇದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಆಂಡ್ರಾಯ್ಡ್‌ 13ನಲ್ಲಿ ರನ್‌ ಆಗಲಿದೆ ಎಂದು ಹೇಳಲಾಗಿದೆ.

Poco F5 Pro 5G Smartphone
Image Source: Gadgets 360

ಪೋಕೋ F5 ಪ್ರೊ 5G ಸ್ಮಾರ್ಟ್‌ಫೋನ್‌ ನ ಬೆಲೆ ಮತ್ತು ವೈಶಿಷ್ಟ್ಯತೆ
ಪೋಕೋ F5 ಪ್ರೊ 5G ಸ್ಮಾರ್ಟ್‌ಫೋನ್‌ ನ ಬೆಲೆ 25000 ಆಗಿದೆ. ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಉತ್ತಮ ಫೀಚರ್ ಹೊಂದಿದೆ. ಈ ಸ್ಮಾರ್ಟ್ ಫೋನ್ ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರ ಮುಖ್ಯ ಕ್ಯಾಮೆರಾ 64 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಇದು ಅತ್ಯುತ್ತಮ ಫೋಟೋವನ್ನು ಸೆರೆಹಿಡುತ್ತಿದೆ. ಫೋಟೋಗ್ರಫಿಗೆ ಹೇಳಿ ಮಾಡಿಸಿದ್ದಾಗಿದೆ. ಹಾಗೆಯೆ ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿರಲಿದೆ. ಇದಲ್ಲದೆ ಮುಂಭಾಗ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Poco F5 Pro 5G Smartphone
Image Source: India Today

Join Nadunudi News WhatsApp Group

Join Nadunudi News WhatsApp Group