Poise Grace Ev: ದೇಶದಲ್ಲಿ ದಾಖಲೆ ಮಾರಾಟ ಕಾಣುತ್ತಿದೆ ಈ Ev ಸ್ಕೂಟರ್, ಕಡಿಮೆ ಬೆಲೆ ಮತ್ತು 100 Km ಮೈಲೇಜ್.

ಅಗ್ಗದ ಬೆಲೆಗೆ ದಾಖಲೆಯ ಮಾರಾಟ ಕಾಣುತ್ತಿದೆ ಈ ಎಲೆಕ್ಟ್ರಿಕ್ ಸ್ಕೂಟರ್

Poise Grace Electric Scooter: ಜನಸಮಾನ್ಯರಿಗೆ ಇದೀಗ EV ಖರೀದಿಸಲು ಹೊಸ ಆಯ್ಕೆ ಸೇರ್ಪಡೆಗೊಳಲಿದೆ. ಮಾರುಕಟ್ಟೆಯಲ್ಲಿ Electric Scooter ಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ವಿವಿಧ ಕಂಪನಿಗಳು ನೂತನವಾಗಿ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಪರಿಚಯಿಸುತ್ತಿವೆ.

ಇದೀಗ ಮಾರುಕಟ್ಟೆಯಲ್ಲಿ ನೂತನವಾಗಿ Poise Grace Electric Scooter ಪರಿಚಯವಾಗಲಿದೆ. ಕಂಪನಿಯು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು Poise Grace Electric Scooter ಅನ್ನು ತಯಾರಿಸಿದೆ. ಇದರಲ್ಲಿ ಕಂಪನಿಯು ಅತ್ತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಲಭ್ಯಗೊಳಿಸಿದೆ.

Poise Grace Electric Scooter
Image Credit: Poisescooters

 

ದೇಶದಲ್ಲಿ ದಾಖಲೆ ಮಾರಾಟ ಕಾಣುತ್ತಿದೆ ಈ Ev ಸ್ಕೂಟರ್
ನೀವು ಅತಿ ಅಗ್ಗದ ಬೆಲೆಗೆ ಈ EV ಯನ್ನು ನಿಮ್ಮದಾಗಿಸಿಕೊಳ್ಳಬಹುದು.  ಇನ್ನು ಉತ್ತಮ ಬ್ರೇಕಿಂಗ್ ನೀಡಲು ಕಂಪನಿಯು ಈ ಸ್ಕೂಟರ್ ನ ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂದಿನ ಚಕ್ರದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ನೀಡಿದೆ. ಹಾಗೆಯೆ ಆರಾಮದಾಯಕ ಸವಾರಿ ಅನುಭವಕ್ಕಾಗಿ ಕಂಪನಿಯು ಹಿಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆನ್ಕ್ಷನ್ ಸಿಸ್ಟಂ ಅನ್ನು ಸ್ಥಾಪಿಸಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಯೋಜನೆಯಲ್ಲಿದ್ದವರಿಗೆ ಈ EV ಬೆಸ್ಟ್ ಎನ್ನಬಹುದು.

ಕಡಿಮೆ ಬೆಲೆ ಮತ್ತು 100 Km ಮೈಲೇಜ್
Poise Grace Electric Scooter ನಲ್ಲಿ 60 V,42 AH ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಇದರೊಂದಿಗೆ ಕಂಪನಿಯು 800 w ಎಲೆಕ್ಟ್ರಿಕ್ ಹ್ಯಾಬ್ ಮೋಟಾರ್ ಅನ್ನು ನೀಡುತ್ತದೆ. ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಅತಿ ವೇಗದ ಚಾರ್ಜರ್ ಅನ್ನು ನೀಡಿದೆ.

Join Nadunudi News WhatsApp Group

Poise Grace Electric Scooter Price In India
Image Credit: Zigwheels

ಈ ಸ್ಕೂಟರ್ ನ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ಸಮಯದಲ್ಲಿ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ ಅನ್ನು 100 ಕಿಮೀ ವ್ಯಾಪ್ತಿಯವರೆಗೆ ಓಡಿಸಬಹುದು.  ಹಾಗೆಯೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Poise Grace ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆಯ ವಿವರ
ಈ ಸ್ಕೂಟರ್ ನಲ್ಲಿ Bluetooth connectivity, digital speedometer, digital trip meter, digital odometer, LED headlight, LED tail light, LED turn signal lamp and reverse mode ಸೇರಿದಂತೆ ಇನ್ನು ಹತ್ತು ಹಲವು ಫೀಚರ್ ಅನ್ನು ನೋಡಬಹುದು. ಮಾರುಕಟ್ಟೆಯಲ್ಲಿ Poise Grace Electric Scooter 97,174 ರಿಂದ 1.08 ಲಕ್ಷ ರೂ. ಎಕ್ಸ್ ಶೋರೂಮ್ ಬೆಲೆಯಲ್ಲಿ ಪರಿಚಯಿಸಲು ಕಂಪನಿಯು ನಿರ್ಧರಿಸಿದೆ.

Join Nadunudi News WhatsApp Group