Polio Vaccine: ಪೋಷಕರೇ ಮಕ್ಕಳಿಗೆ ಈ ದಿನದಂದು ಪೋಲಿಯೊ ಹಾಕಿಸಿ, ಪೋಲಿಯೊ ಲಸಿಕೆ ಈ ದಿನದಂದು

ನಿಮ್ಮ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಮಾರ್ಚ್ 3 ರಂದು ಇಲ್ಲಿಗೆ ಹೋಗಿ ಪೋಲಿಯೊ ಹಾಕಿಸಿ.

Polio Vaccination For Children’s: ದೇಶದಲ್ಲಿ ಪೋಲಿಯೋ ಕಾರಣದಿಂದಾಗಿ ಸಾಕಷ್ಟು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಪೋಲಿಯೋದ ಕಾರಣ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಅಂಗವೈಫಲ್ಯತೆಯನ್ನು ಎದುರಿಸಬೇಕಾಗುತ್ತಿದೆ. ಇದನ್ನು ತಡೆಯಲು ಚಿಕ್ಕ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಸಣ್ಣ ಮಕ್ಕಳಿಗೆ ಪೋಲಿಯೋ ಲಸಿಕೆ ಹಕುವುದರಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎನ್ನಬಹುದು.

Polio Vaccination For Children
Image Credit: unicef

ಚಿಕ್ಕ ಮಕ್ಕಳ ಪೋಷಕರಿಗೆ ಸರ್ಕಾರದಿಂದ ಘೋಷಣೆ
ದೇಶದಲ್ಲಿ 2011 ರ ಬಳಿಕ ಪೋಲಿಯೋ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿಲ್ಲ. ಕಾರಣ ಪೋಷಕರು ತಮ್ಮ ಮಕ್ಕಲಿಗೆ ಕಾಲಕಾಲಕ್ಕೆ ಪೋಲಿಯೋ ಲಸಿಕೆ ಹಾಕಿಸುತ್ತಿರುವುದು. ಇದೀಗ ಪೋಷಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ನಿಮ್ಮ ಮಕ್ಕಳಿಗೆ ನೀವು ಆರೋಗ್ಯಕರ ಜೀವನವನ್ನು ನೀಡಲು ತಪ್ಪದೆ ಈ ದಿನದಂದು ಪೋಲಿಯೋ ಲಸಿಕೆ ಹಾಕಿಸಿಕೊಳ್ಳಿ.

ಮಾರ್ಚ್ 3 ರಂದು ಇಲ್ಲಿಗೆ ಹೋಗಿ ಪೋಲಿಯೊ ಹಾಕಿಸಿ
ಮಾ.3 ರಂದು ಲಿಯೋ ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ಮಗು ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಳಿನ್ ಅತುಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಎಲ್ಲ ಪೋಷಕರು ಮಾರ್ಚ್ 3 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಅಗತ್ಯವಾಗಿದೆ. ನಿಮ್ಮ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪೋಲಿಯೊ ಲಸಿಕೆ ಅಗತ್ಯವಾಗಿದೆ ಎನ್ನುವುದನ್ನು ಮರೆಯಬೇಡಿ.

Polio Vaccination Program In India
Image Credit: Weather

ಲಸಿಕಾ ದಿನದಂದು ಎಲ್ಲ ಅಂಗನವಾಡಿ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು. ತಾಯಂದಿರ ಸಭೆ, ಮಕ್ಕಳ ಅಭಿವೃದ್ಧಿ ಸಮಿತಿ ಸಭೆಗಳಲ್ಲಿ ಲಸಿಕೆ ದಿನಾಂಕ, ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದ ಮಹತ್ವವನ್ನು ತಿಳಿಸಬೇಕು. ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು, ಇಲಾಖೆ ಅಧಿಕಾರಿಗಳು ಲಸಿಕಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಅನಾಥಾಶ್ರಮದಲ್ಲಿರುವ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group