Bal Jeevan Bhima: ಮಗಳ ಹೆಸರಿನಲ್ಲಿ 18 ರೂ ಹೂಡಿಕೆ ಮಾಡಿದರೆ ಮಗಳ ಮದುವೆಗೆ ಸಿಗಲಿದೆ ಲಕ್ಷ ಲಕ್ಷ ಹಣ, ಇಂದೇ ಅರ್ಜಿ ಸಲ್ಲಿಸಿ.

ಮಗಳ ಹೆಸರಿನಲ್ಲಿ 18 ರೂಪಾಯಿ ಹೂಡಿಕೆ ಮಾಡುವ ಮೂಲಕ ಪಡೆಯಿರಿ ಲಕ್ಷ ಲಕ್ಷ ಲಾಭ.

Post Office Bal Jeevan Bhima Yojana: ಸದ್ಯ ದೇಶದಲ್ಲಿ LIC ಜನರಿಗೆ ಜೀವ ವಿಮ ಯೋಜನೆಯನ್ನು ನೀಡುತ್ತದೆ ಎನ್ನುವುದು ಎಲ್ಲರಿಗು ತಿಳಿದಿದೆ. ಸದ್ಯ Indian Post Office ಕೂಡ ಜೀವ ವಿಮ ಯೋಜನೆಯನ್ನು ನೀಡಲು ಮುಂದಾಗಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗಾಗಿ Post Office ಜೀವ ವಿಮಾ ಯೋಜನೆಯನ್ನು ಪರಿಚಯಿಸಿದೆ.

ಮಕ್ಕಳಿಗಾಗಿಯೇ FD, PPF, Sukanya Samruddhi ಯೋಜನೆಯ ಹೂಡಿಕೆಯ ಆಯ್ಕೆಗಳಿದ್ದು, ಇದೀಗ ಅಂಚೆ ಇಲಾಖೆಯ ಹೊಸ ಹೂಡಿಕೆಯ ಯೋಜನೆಯು ನಿಮ್ಮ ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಉಳಿತಾಯ ಮಾಡಲು ಸಹಕಾರಿಯಾಗಲಿದೆ.

Post Office Bal Jeevan Bima Yojana
Image Credit: Timesbull

Bal Jeevan Bhima Yojana
ಸದ್ಯ ಪೋಸ್ಟ್ ಆಫೀಸ್ ನಲ್ಲಿ ಮಕ್ಕಳಿಗಾಗಿ Bal Jeevan Bhima ಜೀವ ವಿಮಾ ಯೋಜನೆಯು ಪರಿಚಯವಾಗಿದೆ. ಅಂಚೆ ಇಲಾಖೆಯು ಈ ಯೋಜನೆಯನ್ನು ವಿಶೇಷವಾಗಿ ಮಕ್ಕಳಿಗಾಯಿಗೆ ರೂಪಿಸಿದೆ. ಈ ಯೋಜನೆಯು ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ನಡೆಸಲ್ಪಡುತ್ತದೆ. ಈ ಯೋಜನೆಯ ಅಡಿಯಲ್ಲಿ, ಮೆಚ್ಯೂರಿಟಿಯಲ್ಲಿ ಲಕ್ಷದ ವರೆಗಿನ ಮೊತ್ತದ ವಿಮಾ ಮೊತ್ತವನ್ನು ಪಡೆಯುವ ಅವಕಾಶವಿದೆ. ಇದೀಗ ನಾವು Bal Jeevan Bhima ಯೋಜನೆಯ ಹೂಡಿಕೆಯ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

ಮಗಳ ಹೆಸರಿನಲ್ಲಿ 18 ರೂ ಹೂಡಿಕೆ ಮಾಡಿದರೆ ಮಗಳ ಮದುವೆಗೆ ಸಿಗಲಿದೆ ಲಕ್ಷ ಲಕ್ಷ ಹಣ
Bal Jeevan Bhima ಯೋಜನೆಯನ್ನು 5 ವರ್ಷದಿಂದ 20 ವರ್ಷ ವಯಸ್ಸಿನ ಮಕ್ಕಳಿಗೆ ಖರೀದಿಸಬಹುದು. ತಮ್ಮ ಮಕ್ಕಳಿಗೆ ಈ ವಿಮಾ ಯೋಜನೆಯನ್ನು ಖರೀದಿಸಲು ಬಯಸುವ ಪೋಷಕರು, ಅವರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಪೋಸ್ಟ್ ಆಫೀಸ್ ಮಕ್ಕಳ ಜೀವ ವಿಮೆಯನ್ನು ಮಕ್ಕಳ ಪೋಷಕರು ಖರೀದಿಸಬಹುದು. ಈ ಯೋಜನೆಯ ಲಾಭವನ್ನು ಗರಿಷ್ಠ ಎರಡು ಮಕ್ಕಳಿಗೆ ನೀಡಬಹುದು.

Post Office Bal Jeevan Bima Yojana Profit
Image Credit: Online38media

ಮಕ್ಕಳ ಜೀವ ವಿಮಾ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ನೀವು ರೂ 6 ರಿಂದ ರೂ. 18 ರವರೆಗಿನ ದೈನಂದಿನ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. ಜನರು ಮಾಸಿಕ, ಮೂರು ತಿಂಗಳು, ಆರು ತಿಂಗಳು ಮತ್ತು ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು. ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ, ಮೆಚ್ಯೂರಿಟಿಯಲ್ಲಿ ರೂ 1 ಲಕ್ಷದ ಮೊತ್ತದ ವಿಮಾ ಪ್ರಯೋಜನವು ಲಭ್ಯವಿದೆ.

Join Nadunudi News WhatsApp Group

ಇಂದೇ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ
ನಿಮ್ಮ ಆಯ್ಕೆಯ ಪ್ರಕಾರ ಹೂಡಿಕೆಯ ಮೊತ್ತವನ್ನು ನೀವು ನಿರ್ಧರಿಸಬಹುದು. ಯೋಜನೆಗಾಗಿ ನೀವು ಪೋಷಕರ ಆಧಾರ್ ಕಾರ್ಡ್, ಮಗುವಿನ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಪಾಸ್‌ ಪೋರ್ಟ್ ಗಾತ್ರದ ಫೋಟೋ ಮುಂತಾದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಿಮ್ಮ ಹತ್ತಿರದ ಅಂಚೆ ಕಛೇರಿಗೆ ಹೋಗಿ ಸ್ಕೀಮ್ ಫಾರ್ಮ್ ಪಡೆಯುವ ಮೂಲಕ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು.

Join Nadunudi News WhatsApp Group