Gram Suraksha: ಕೇವಲ 50 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 35 ಲಕ್ಷ, ಪೋಸ್ಟ್ ಆಫೀಸ್ ಸ್ಕೀಮ್

ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 35 ಲಕ್ಷ ಲಾಭ

Post Office Gram Suraksha Scheme 2024: ಜನಸಾಮನ್ಯರಿಗೆ ಉಳಿತಾಯ ಯೋಜನೆಗಳ ಹೂಡಿಕೆಗೆ ಸಾಕಷ್ಟು ಆಯ್ಕೆಗಳಿವೆ. ನಿಮ್ಮ ಹೂಡಿಕೆಯ ಯೋಜನೆಗೆ ಪೋಸ್ಟ್ ಆಫೀಸ್ ಬೆಸ್ಟ್ ಎನ್ನಬಹುದು. ನೀವು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದರೆ ಇದೀಗ Post Office Gram Suraksha ಯೋಜನೆಯನ್ನು ಜಾರಿಗೊಳಿಸಿದೆ.

ಈ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಉತ್ತಮ ಆಯ್ಕೆಯಾಗಿದೆ. ಮಧ್ಯಮ ವರ್ಗದವರಿಗೆ ಇದೊಂದು ಬೆಸ್ಟ್ ಹೂಡಿಕೆಯ ವಿಧಾನ ಎನ್ನಬಹುದು. ಪೋಸ್ಟ್ ಆಫೀಸ್ ನಲಿ ಈಗಾಗಲೇ ಸಾಕಷ್ಟು ಯೋಜನೆಗಳಿದ್ದು ಅತಿ ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಾಭ ಗಳಿಸುವ ಯೋಜನೆಯೆಂದರೆ ಅದು ಗ್ರಾಮ ಸುರಕ್ಷಾ ಯೋಜನೆ ಎನ್ನಬಹುದು.

Post Office Gram Suraksha Scheme
Image Credit: Zee News

ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು ..?
ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರು ಮಾಸಿಕ ಹೂಡಿಕೆಯನ್ನು ಮಾಡಲು ಬಯಸುತ್ತಾರೆ. ಪೋಸ್ಟ್ ಆಫೀಸ್ ನ ಈ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಹೌದು ನೀವು ಈ ಯೋಜನೆಯಲ್ಲಿ 50 ರೂಪಾಯಿಯನ್ನು ಹೂಡಿಕೆ ಮಾಡುವ ಮೂಲಕ 35 ಲಕ್ಷ ಲಾಭ ಗಳಿಸಬಹುದಾಗಿದೆ.  ಇದೀಗ ನಾವು ಈ ಲೇಖನದಲ್ಲಿ ಗ್ರಾಮ ಸುರಕ್ಷಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಕೇವಲ 50 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 35 ಲಕ್ಷ ಲಾಭ
ಪೋಸ್ಟ್ ಆಫೀಸ್ ನ ಈ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡುವವರು 19 ರಿಂದ 55 ವರ್ಷದೊಳಗಿನವರಾಗಿರಬೇಕು. ನೀವು 19 ವರ್ಷದವರಾಗಿದ್ದರೆ ಈ ಯೋಜನೆ ನಿಮಗೆ ಉತ್ತಮ ಲಾಭವನ್ನು ತಂದುಕೊಡಲಿದೆ. ಈ ಹೂಡಿಕೆ ಯೋಜನೆಯ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದಾಗಿದೆ.

Post Office Gram Suraksha Scheme Investment Profit
Image Credit: Knowledge4utech

ಗ್ರಾಮ ಸುರಕ್ಷಾ ಯೋಜನೆಯ ದಿನಕ್ಕೆ 50 ರೂಪಾಯಿಯಂತೆ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂಪಾಯಿ ಆಗಿದೆ, 58 ವರ್ಷಗಳಿಗೆ 1463 ರೂಪಾಯಿ ಆಗಿದೆ, ಹಾಗೆ 60 ವರ್ಷಗಳಿಗೆ 1411 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಹೀಗಿರುವಾಗ 55 ವರ್ಷಗಳ ನಂತರ ಹೂಡಿಕೆದಾರನು 31.60 ಲಕ್ಷ ರೂಪಾಯಿ ಮೆಚುರಿಟಿ ಲಾಭವನ್ನು ಪಡೆದುಕೊಂಡರೆ, 58 ವರ್ಷಗಳ ನಂತರ ಹೂಡಿಕೆದಾರ 33.40 ಲಕ್ಷ ಮೆಚುರಿಟಿ ಲಾಭವನ್ನು ಪಡೆದುಕೊಳ್ಳುತ್ತಾನೆ. ಹಾಗೆ 60 ವರ್ಷಗಳ ನಂತರ ಹೂಡಿಕೆದಾರ 34.60 ಲಕ್ಷ ಮೆಚುರಿಟಿ ಲಾಭವನ್ನು ಪಡೆದುಕೊಳ್ಳುತ್ತಾನೆ.

Join Nadunudi News WhatsApp Group

Join Nadunudi News WhatsApp Group