Gram Suraksha: ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ 1500 ರೂ ಹೂಡಿಕೆ ಮಾಡಿದರೆ ಸಿಗಲಿದೆ 35 ಲಕ್ಷ, ಲಾಭದಾಯಕ ಸ್ಕೀಮ್

ಕೇವಲ 1500 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 35 ಲಕ್ಷ ಲಾಭ.

Post Office Gram Suraksha Yojana Investment Details: Indian Post Office ಜನಸಾಮಾನ್ಯರಿಗೆ ಹಲವಾರು ಸುರಕ್ಷಿತ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಭಾರತೀಯ ಅಂಚೆ ಇಲಾಖೆ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಈ ಯೋಜನೆ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ನೀವು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದರೆ ಇದೀಗ Post Office Grama Suraksha ಯೋಜನೆಯನ್ನು ಜಾರಿಗೊಳಿಸಿದೆ.

ಈ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಉತ್ತಮ ಆಯ್ಕೆಯಾಗಿದೆ. ಮಧ್ಯಮ ವರ್ಗದವರಿಗೆ ಇದೊಂದು ಬೆಸ್ಟ್ ಹೂಡಿಕೆಯ ವಿಧಾನ ಎನ್ನಬಹುದು. ಪೋಸ್ಟ್ ಆಫೀಸ್ ನಲಿ ಈಗಾಗಲೇ ಸಾಕಷ್ಟು ಯೋಜನೆಗಳಿದ್ದು ಅತಿ ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಾಭ ಗಳಿಸುವ ಯೋಜನೆಯೆಂದರೆ ಅದು ಗ್ರಾಮ ಸುರಕ್ಷಾ ಯೋಜನೆ ಎನ್ನಬಹುದು. 

Post Office Gram Suraksha Yojana 2023
Image Credit: News 18

ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ
ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರು ಮಾಸಿಕ ಹೂಡಿಕೆಯನ್ನು ಮಾಡಲು ಬಯಸುತ್ತಾರೆ. ಪೋಸ್ಟ್ ಆಫೀಸ್ ನ ಈ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಹೌದು ನೀವು ಈ ಯೋಜನೆಯಲ್ಲಿ 1500 ರೂಪಾಯಿಯನ್ನು ಹೂಡಿಕೆ ಮಾಡುವ ಮೂಲಕ 35 ಲಕ್ಷ ಲಾಭ ಗಳಿಸಬಹುದಾಗಿದೆ.

ಅರ್ಹತೆ…?
ಪೋಸ್ಟ್ ಆಫೀಸ್ ನ ಈ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡುವವರು 19 ರಿಂದ 55 ವರ್ಷದೊಳಗಿನವರಾಗಿರಬೇಕು. ನೀವು 19 ವರ್ಷದವರಾಗಿದ್ದರೆ ಈ ಯೋಜನೆ ನಿಮಗೆ ಉತ್ತಮ ಲಾಭವನ್ನು ತಂದುಕೊಡಲಿದೆ. ಈ ಹೂಡಿಕೆ ಯೋಜನೆಯ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದಾಗಿದೆ.

Post Office Gram Suraksha Yojana Details
Image Credit: Maharashtranama

ಕೇವಲ 1500 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 35 ಲಕ್ಷ ಲಾಭ
ಗ್ರಾಮ ಸುರಕ್ಷಾ ಯೋಜನೆಯ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂಪಾಯಿ ಆಗಿದೆ, 58 ವರ್ಷಗಳಿಗೆ 1463 ರೂಪಾಯಿ ಆಗಿದೆ, ಹಾಗೆ 60 ವರ್ಷಗಳಿಗೆ 1411 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಹೀಗಿರುವಾಗ 55 ವರ್ಷಗಳ ನಂತರ ಹೂಡಿಕೆದಾರನು 31.60 ಲಕ್ಷ ರೂಪಾಯಿ ಮೆಚುರಿಟಿ ಲಾಭವನ್ನು ಪಡೆದುಕೊಂಡರೆ, 58 ವರ್ಷಗಳ ನಂತರ ಹೂಡಿಕೆದಾರ 33.40 ಲಕ್ಷ ಮೆಚುರಿಟಿ ಲಾಭವನ್ನು ಪಡೆದುಕೊಳ್ಳುತ್ತಾನೆ.

Join Nadunudi News WhatsApp Group

ಹಾಗೆ 60 ವರ್ಷಗಳ ನಂತರ ಹೂಡಿಕೆದಾರ 34.60 ಲಕ್ಷ ಮೆಚುರಿಟಿ ಲಾಭವನ್ನು ಪಡೆದುಕೊಳ್ಳುತ್ತಾನೆ. ಈ ಯೋಜನೆಯ ಕನಿಷ್ಠ ಪ್ರಯೋಜನ 10 ಸಾವಿರದಿಂದ 10 ಲಕ್ಷಗಳ ನಡುವೆ ಇದೆ. ಒಂದು ವೇಳೆ ಪಾಲಿಸಿದರೆ ಮರಣ ಹೊಂದಿದರೆ ವಿಮಾ ಮೊತ್ತ ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿಗೆ ಸಲ್ಲುತ್ತದೆ.

Join Nadunudi News WhatsApp Group