Grama Suraksha: 50 ರೂ ಹೂಡಿಕೆ ಮಾಡುವ ಮೂಲಕ ಗಳಿಸಿ 35 ಲಕ್ಷ ರೂ. ಲಾಭ, ಪೋಸ್ಟ್ ಆಫೀಸ್ ಯೋಜನೆ.

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವ ಈ ಪೋಸ್ಟ್ ಆಫೀಸ್ ನ ಹೊಸ ಯೋಜನೆ ಬಗ್ಗೆ ಮಾಹಿತಿ ತಿಳಿಯಿರಿ.

Post Office grama suraksha yojana investment plans: ಪೋಸ್ಟ್ ಆಫೀಸ್ ಜನಸಾಮಾನ್ಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇದರಿಂದ ಅನೇಕ ಜನರು ಲಾಭವನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಗ್ರಾಮ ಸುರಕ್ಷಾ ಯೋಜನೆ ಸಹ ಒಂದಾಗಿದೆ. ಜನರು ಈ ಯೋಜನೆಗೆ ಸೇರುವ ಮೂಲಕ ದಿನಕ್ಕೆ 50 ರೂಪಾಯಿ ಉಳಿಸಿ ಅಧಿಕ ಲಾಭ ಪಡೆಯಬಹುದು.

ಪೋಸ್ಟ್ ಆಫೀಸ್
ಪೋಸ್ಟ್ ಆಫೀಸ್ (Post Office) ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಸಣ್ಣ ಹೂಡಿಕೆಯ ಸಾಕಷ್ಟು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿವೆ. ಜನಸಾಮಾನ್ಯರು ಅಂಚೆ ಇಲಾಖೆಯ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

Village Security Scheme
Image Credit: The financepoint

ಅಂಚೆ ಕಚೇರಿಯಲ್ಲಿ ಜನರಿಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ. ಇದೀಗ ಅಂಚೆ ಇಲಾಖೆಯು ಹೊಸ ಠೇವಣಿ ಯೋಜನೆಯನ್ನು ಜಾರಿಗೊಳಿಸಿದೆ. ಅಂಚೆ ಇಲಾಖೆಯ ಠೇವಣಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ.

ಪೋಸ್ಟ್ ಆಫೀಸ್ ಹೊಸ ಯೋಜನೆ
ದೇಶದಲ್ಲಿ ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ವಾಸಿಸುವ ಜನರ ಅಗತ್ಯಗಳನ್ನು ಪೂರೈಸಲು, ಇಂಡಿಯಾ ಪೋಸ್ಟ್ ಉತ್ತಮ ಆದಾಯವನ್ನು ನೀಡುವ ಹಲವಾರು ಅಪಾಯ ಮುಕ್ತ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಗ್ರಾಮ ಸುರಕ್ಷಾ ಯೋಜನೆ ಕೂಡ ಒಂದು. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

ಗ್ರಾಮ ಸುರಕ್ಷಾ ಯೋಜನೆಗೆ ಸೇರಲು ಪಾಲಿಸಿದಾರರ ವಯಸ್ಸು 19 ವರ್ಷವಾಗಿರಬೇಕು. ಗರಿಷ್ಠ ಪ್ರವೇಶ ವಯಸ್ಸು 55 ವರ್ಷಗಳನ್ನು ಮೀರಬಾರದು. ಕನಿಷ್ಠ ವಿಮಾ ಮೊತ್ತ ರೂಪಾಯಿ 10,000 ಮತ್ತು ಗರಿಷ್ಠ ವಿಮಾ ಮೊತ್ತ ರೂಪಾಯಿ 10 ಲಕ್ಷದ,ವರೆಗೂ ಠೇವಣಿ ಮಾಡಬಹುದು.

Join Nadunudi News WhatsApp Group

Village Security Scheme
Image Credit: News18

ಗ್ರಾಮ ಸುರಕ್ಷಾ ಯೋಜನೆ
ಗ್ರಾಮ ಸುರಕ್ಷಾ ಯೋಜನೆಯಡಿ ಪಾಲಿಸಿದಾರರಿಗೆ ಕೇವಲ 50 ರೂಪಾಯಿ ಪಾವತಿಸಿ ರೂಪಾಯಿ 35 ಲಕ್ಷದ ವರೆಗೆ ಗಳಿಸಬಹುದು. ಪ್ರತಿ ತಿಂಗಳು 1,515 ರೂಪಾಯಿಯನ್ನು ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ಪಾಲಿಸಿದಾರನು ದುಪ್ಪಟ್ಟಾದ ನಂತರ ರೂಪಾಯಿ 34.60 ಲಕ್ಷದ ಲಾಭವನ್ನು ಪಡೆಯಬಹುದು.

Join Nadunudi News WhatsApp Group