Post Office Scheme: ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಸ್ಕೀಮ್, 250 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 24 ಲಕ್ಷ.
ಪ್ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಸಿಗಲಿದೆ 24 ಲಕ್ಷ ರೂ
Post Office PPF Investment Scheme: ಭಾರತೀಯ ಅಂಚೆ ಇಲಾಖೆಯು (Indian Post Office) ಜನಸಾಮಾನ್ಯರಿಗಾಗಿ ವಿವಿಧ ಹೂಡಿಕೆಯ ಯೋಜನೆಗಳನ್ನು ನೀಡುತ್ತಿದೆ. ಪೋಸ್ಟ್ ಆಫೀಸ್ ದೀರ್ಘಾವಧಿಯ ಹೂಡಿಕೆದಾರರಿಗೆ ವಿಶೇಷ ಯೋಜನೆಯಾಗಿದೆ. ನೀವು ಪೋಸ್ಟ್ ಆಫೀಸ್ ನಲ್ಲಿ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರು ಕೂಡ ಅದರಿಂದ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.
PPF ಎಂಬುದು ಹೂಡಿಕೆಗೆ ಉತ್ತಮ ಯೋಜನೆಯಾಗಿದೆ. PPF ನಲ್ಲಿ ಶೇಕಡಾ 7.1 ರ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 1.5 ಲಕ್ಷ ಹೂಡಿಕೆ ಮಾಡಬಹುದು. ನೀವು ಬಯಸಿದರ ಈ ಯೋಜನೆಯ ಮೂಲಕ ನೀವು ಉತ್ತಮ ಮೊತ್ತದ ಹಣವನ್ನು ಠೇವಣಿ ಮಾಡಬಹುದು. ಇದರೊಂದಿಗೆ ಈ ಯೋಜನೆಗೆ ತೆರಿಗೆಯನ್ನೂ ತೆಗೆದುಕೊಳ್ಳಬಹುದು.
![best postal scheme 2024](https://nadunudi.in/wp-content/uploads/2024/05/best-postal-scheme.png)
250 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 24 ಲಕ್ಷ
ನೀವು ಪ್ರತಿ ನಿತ್ಯ ಅತಿ ಕಡಿಮೆ ಹೂಡಿಕೆಯಲ್ಲಿ ಹಣವನ್ನು ಉಳಿಸಬಹುದು. ನೀವು ಮಾಸಿಕ 7500 ರೂಪಾಯಿ ಹೂಡಿಕೆ ಮಾಡಿದರೆ, ಅಂದರೆ ನೀವು ಪ್ರತಿದಿನ 250 ರೂಪಾಯಿಗಳನ್ನು ಉಳಿಸಬೇಕಾಗುತ್ತದೆ. ಇದರ ಪ್ರಕಾರ ನೀವು ಪಿಪಿಎಫ್ ಯೋಜನೆಯಲ್ಲಿ ವಾರ್ಷಿಕವಾಗಿ ರೂ. 90 ಸಾವಿರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
ಪಿಪಿಎಫ್ 15 ವರ್ಷಗಳ ಯೋಜನೆಯಾಗಿದೆ. ಪಿಪಿಎಫ್ ಕ್ಯಾಲ್ಕುಲೇಟರ್ ಪ್ರಕಾರ ಲೆಕ್ಕ ಹಾಕಿದರೆ 90 ಸಾವಿರ ರೂ. ನಂತೆ 15 ವರ್ಷಗಳಲ್ಲಿ ಒಟ್ಟು 13 ಲಕ್ಷ 50 ಸಾವಿರ ರೂ. ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಶೇಕಡಾ 7.1 ರ ದರದಲ್ಲಿ 10,90,926 ರೂಪಾಯಿಗಳನ್ನು ಮತ್ತು 15 ವರ್ಷಗಳಲ್ಲಿ ನೀವು 24,40,926 ರೂಪಾಯಿಗಳನ್ನು ಪಡೆಯುತ್ತೀರಿ.
![PPF scheme in post office](https://nadunudi.in/wp-content/uploads/2024/05/postal-scheme.png)
ಪೋಸ್ಟ್ ಆಫೀಸ್ ನಲ್ಲಿ ತೆರಿಗೆ ಉಳಿತಾಯದ ಇನ್ನೊಂದು ಸ್ಕೀಮ್
ಪಿಪಿಎಫ್ ತೆರಿಗೆ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ, EEE ಪ್ರಕಾರ ತೆರಿಗೆ ಪ್ರಯೋಜನ ಲಭ್ಯವಿದೆ. ವಾರ್ಷಿಕವಾಗಿ ಠೇವಣಿ ಇಡುವ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಪ್ರತಿ ವರ್ಷ ಈ ಮೊತ್ತದ ಮೇಲೆ ಗಳಿಸುವ ಬಡ್ಡಿ ಮತ್ತು ಮುಕ್ತಾಯದ ಸಮಯದಲ್ಲಿ ಪಡೆದ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
ಪಿಪಿಎಫ್ ಖಾತೆದಾರರಿಗೆ ಇದರಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ನಿಮ್ಮ PPF ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ನೀವು ಸಾಲವನ್ನು ಪಡೆಯುತ್ತೀರಿ. ಅಸುರಕ್ಷಿತ ಸಾಲಕ್ಕೆ ಹೋಲಿಸಿದರೆ ಈ ಸಾಲ ಕಡಿಮೆ. ನಿಯಮಗಳ ಪ್ರಕಾರ, ಪಿಪಿಎಫ್ ಸಾಲದ ಬಡ್ಡಿ ದರವು ಪಿಪಿಎಫ್ ಖಾತೆಯ ಬಡ್ಡಿ ದರಕ್ಕಿಂತ ಕೇವಲ 1 ಪ್ರತಿಶತ ಹೆಚ್ಚು. ಅಂದರೆ ನೀವು PPF ಖಾತೆಯಲ್ಲಿ 7.1 ಶೇಕಡಾ ಬಡ್ಡಿಯನ್ನು ಪಡೆಯುತ್ತಿದ್ದರೆ ನೀವು ಸಾಲವನ್ನು ತೆಗೆದುಕೊಳ್ಳುವಲ್ಲಿ 8.1 ಶೇಕಡಾ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
![post office ppf scheme investment plan](https://nadunudi.in/wp-content/uploads/2024/05/PPF-in-post-office.png)