Saving Schemes: ಮಗಳ ವಿದ್ಯಾಭ್ಯಾಸ ಮತ್ತು ಮದುವೆಗೆ ಹಣ ಬೇಕಾ…? ಹಾಗಾದರೆ ಇಂದೇ ಈ ಕೇಂದ್ರದ ಯೋಜನೆಯಲ್ಲಿ ಸೇರಿಕೊಳ್ಳಿ.

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಗಳ ಮದುವೆಯ ಚಿಂತೆ ಇಲ್ಲ

Post Office Saving Schemes: ಪೋಷಕರಿಗೆ ಹೆಣ್ಣು ಮಕ್ಕಳು ಜನಿಸಿದರೆ ಜವಾಬ್ದಾರಿಯು ಹೆಚ್ಚಾಗುತ್ತದೆ. ಹೆಣ್ಣು ಮಗಳ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಆರಂಭವಾಗುತ್ತದೆ. ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವ ಜವಬ್ದಾರಿ ಪೋಷಕರ ಹೊಣೆಯಾಗಿರುತ್ತದೆ. ಹೆಣ್ಣುಮಗಳ ಮದುವೆ, ವಿದ್ಯಾಭ್ಯಾಸ ಎಲ್ಲದಕ್ಕೂ ಕೂಡ ಹಣದ ಅವಶ್ಯಕತೆ ಇರುತ್ತದೆ. ಸದ್ಯ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಲಾಗಿದೆ.

Post Office Savings Account
Image Credit: Jagran

ನಿಮ್ಮ ಮನೆಯಲ್ಲಿ ಹೆಣ್ಣುಮಗಳಿದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ

ಮಕ್ಕಳ ಭವಿಷ್ಯಕ್ಕೆ ಉಳಿತಾಯ ಯೋಜನೆಯಲ್ಲಿನ ಹೂಡಿಕೆಗೆ ಹೆಚ್ಚಿನ ಜವಾಬ್ದಾರಿಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮನೆಯಲ್ಲಿ ಹೆಣ್ಣುಮಗಳಿದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಮಗಳ ಭವಿಷ್ಯಕ್ಕಾಗಿ ನೀವು ಹೂಡಿಕೆಯನ್ನು ಆರಂಭಿಸಬಹುದು. ಇದಕ್ಕಾಗಿ ಸಾಕಷ್ಟು ಹೂಡಿಕೆ ಆಯ್ಕೆಗಳಿವೆ. ಇದೀಗ ನಾವು ಈ ಲೇಖನದಲ್ಲಿ ಹೆಣ್ಣು ಮಕ್ಕಳಿಗಾಗಿ ಪರಿಚಯಿಸಲಾದ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಮಗಳ ವಿದ್ಯಾಭ್ಯಾಸ ಮತ್ತು ಮದುವೆಗೆ ಹಣ ಬೇಕಾ…? ಈ ಕೇಂದ್ರದ ಯೋಜನೆಯಲ್ಲಿ ಸೇರಿಕೊಳ್ಳಿ
Post Office Savings Account
ಪೋಸ್ಟ್ ಆಫೀಸ್ ಉಳಿತಾಯ ಖಾತೆಯು ಶೇಕಡಾ 4 ರ ದರದಲ್ಲಿ ಬಡ್ಡಿಯನ್ನು ನೀಡುತ್ತದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಗಳ ಹೆಸರಿನಲ್ಲಿ ಈ ಉಳಿತಾಯ ಖಾತೆಯನ್ನು ತೆರೆಯಬಹುದು. ಇಲ್ಲಿ ಕನಿಷ್ಠ 500 ರೂ. ಹಾಗೂ ಗರಿಷ್ಠ ಹೂಡಿಕೆ ಮಿತಿ ಇಲ್ಲ. ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವಿದೆ. ಈ ಖಾತೆಯಿಂದ ಯಾವುದೇ ಸಮಯದಲ್ಲಿ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

Public Provident Fund
Image Credit: Housing

•Public Provident Fund
ನಿಮ್ಮ ಮಗಳಿಗಾಗಿ ನೀವು ಹಣವನ್ನು ಉಳಿಸಲು ಬಯಸಿದರೆ PPF ತುಂಬಾ ಒಳ್ಳೆಯ ಯೋಜನೆಯಾಗಿದೆ. ಇದರಲ್ಲಿ 15 ವರ್ಷಗಳವರೆಗೆ ಸ್ಥಿರ ಹೂಡಿಕೆಯ ಮೇಲೆ ಶೇಕಡಾ 7.1 ಬಡ್ಡಿಯನ್ನು ಪಡೆಯಲಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 500 ರೂಪಾಯಿ ಹೂಡಿಕೆಯ ಅಗತ್ಯವಿದೆ.

Join Nadunudi News WhatsApp Group

Recurring Deposit (RD)
Image Credit: Smallcase

•Recurring Deposit (RD)
RD ಯಲ್ಲಿ ನೀವು  ಪ್ರತಿ ತಿಂಗಳು ಕಡಿಮೆ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ 5 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಯೋಜನೆಯು ವಾರ್ಷಿಕ ಶೇಕಡಾ 5.8 ರ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 100 ರೂಪಾಯಿ ಹೂಡಿಕೆಯ ಅಗತ್ಯವಿದೆ. ಯೋಜನೆಯ ಅವಧಿಯ ಮುಕ್ತಾಯದ ನಂತರ ಮಾತ್ರ ಹಿಂಪಡೆಯುವಿಕೆಯನ್ನು ಮಾಡಬಹುದು.

Sukanya Samriddhi Yojana Investment
Image Credit: etmoney

•Sukanya Samriddhi Yojana
ಹೆಣ್ಣುಮಕ್ಕಳಿಗೆ SSY ಯೋಜನೆಯು ಬೆಸ್ಟ್ ಆಯ್ಕೆ ಎನ್ನಬಹುದು. ಈ ಯೋಜನೆಯು ಶೇಕಡಾ 7.6 ರ ದರದಲ್ಲಿ ಬಡ್ಡಿಯನ್ನು ಗಳಿಸುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ರೂ. 1000 ಮತ್ತು ಗರಿಷ್ಠ ಹೂಡಿಕೆ ರೂ. 1.5 ಲಕ್ಷ ಆಗಿದೆ.  ಹೆಣ್ಣುಮಗಳಿಗೆ  ಮಗುವಿಗೆ 21 ವರ್ಷ ವಯಸ್ಸಾದಾಗ ಯೋಜನೆಯ ಲಾಭ ಲಭ್ಯವಾಗುತ್ತದೆ.

National Savings Certificate (NSC)
Image Credit: India TV News

•National Savings Certificate (NSC)
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ವಾರ್ಷಿಕ 6.8 ಶೇಕಡಾ ದರದಲ್ಲಿ ಬಡ್ಡಿಯನ್ನು ಗಳಿಸುತ್ತದೆ. ಈ ಯೋಜನೆಯಲ್ಲಿ ಒಬ್ಬರು ಐದು ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ಕನಿಷ್ಠ 100 ರೂಪಾಯಿ ಹೂಡಿಕೆಯ ಅಗತ್ಯವಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಗರಿಷ್ಠ 1.5 ಲಕ್ಷ ತೆರಿಗೆ ವಿನಾಯಿತಿ ಪಡೆಯಬಹುದು.

Post Office Monthly Income Scheme 2024
Image Credit: Informal News

•Post Office Monthly Income Scheme
ಈ ಯೋಜನೆಯು ವಾರ್ಷಿಕ 6.6% ದರದಲ್ಲಿ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯ ಅವಧಿ 5 ವರ್ಷಗಳು. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ರೂ. 1000 ಮತ್ತು ಗರಿಷ್ಠ ಹೂಡಿಕೆ ರೂ. 4.5 ಲಕ್ಷ ಆಗಿರುತ್ತದೆ. ಹೂಡಿಕೆದಾರರು 1 ವರ್ಷದ ನಂತರ ಯೋಜನೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

Join Nadunudi News WhatsApp Group