Pension Tax Rules: 60 ವರ್ಷದ ನಂತರ ನಿಮಗೆ ಬರುವ ಪಿಂಚಣಿ ಹಣಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ಇಲ್ಲಿದೆ ತೆರಿಗೆ ನಿಯಮ.

60 ವರ್ಷದ ನಂತರ ಪಡೆಯುವ ಪಿಂಚಣಿ ರೂಪದ ಹಣಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ಇಲ್ಲಿದೆ ರೂಲ್ಸ್

Post Office Senior Citizen Savings Scheme: ಇನ್ನು ನಿವೃತ್ತಿಯ ನಂತರ ಆರ್ಥಿಕ ಸಮಸ್ಯೆ ಇಲ್ಲದೆ ಜೀವನ ಸಾಗಿಸಲು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನಬಹುದು. ಪಿಂಚಣಿ ಯೋಜನೆಯಲ್ಲಿ ಹೂಡಿಕೆಯ ಮಾಡುವುದರ ಜೊತೆಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರು ಕೂಡ ನಿವೃತ್ತಿಯ ನಂತರ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಇನ್ನು ನಿವೃತ್ತಿಯ ನಂತರ ಆದಾಯವನ್ನು ಪಡೆಯಲು Post Office ನ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (Post Office Senior Citizen Savings Scheme) ಹೂಡಿಕೆಯನ್ನು ಮಾಡಬಹುದು. ಇದೀಗ ನಾವು ಉಳಿತಾಯ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿದರೆ ಎಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Post Office Senior Citizen Savings Scheme
Image Credit: Outlookindia

Post Office Senior Citizen Savings Scheme
ನೀವು 1000 ರೂಪಾಯಿಗಳೊಂದಿಗೆ Post Office Senior Citizen Savings ಸ್ಕೀಮ್ ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಈ ಯೋಜನೆಯನ್ನು ವಿಶೇಷವಾಗಿ ಹಿರಿಯ ನಾಗರಿಕರಿಗೆ ಮಾತ್ರ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಹಳ ಮುಖ್ಯವಾದ ಅರ್ಹತೆಯ ಮಾನದಂಡವೆಂದರೆ ಖಾತೆದಾರರ ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಆದಾಗ್ಯೂ, VRS ತೆಗೆದುಕೊಳ್ಳುವ ಜನರು 55 ವರ್ಷಗಳ ನಂತರವೂ ಹೂಡಿಕೆ ಮಾಡಬಹುದು.

ಇದಲ್ಲದೇ ಸೇನಾ ಸಿಬ್ಬಂದಿಗೆ ಇನ್ನೂ 5 ವರ್ಷಗಳ ಸಡಿಲಿಕೆ ಇದೆ. ಅಂದರೆ 50ನೇ ವಯಸ್ಸಿನಿಂದ ಹೂಡಿಕೆ ಆರಂಭಿಸಬಹುದು. ಇದು ಸರ್ಕಾರಿ ಯೋಜನೆಯಾಗಿದ್ದು, ಇದರ ಬಡ್ಡಿ ದರವನ್ನು ಸರ್ಕಾರ ನಿರ್ಧರಿಸುತ್ತದೆ. ಪ್ರಸ್ತುತ ಸರ್ಕಾರ ಶೇ 8.2ರಷ್ಟು ವಾರ್ಷಿಕ ಬಡ್ಡಿ ನೀಡುತ್ತಿದೆ. ಈ ಯೋಜನೆಯಲ್ಲಿ ಹೆಚ್ಚಿನ ಹೂಡಿಕೆ, ಹೆಚ್ಚಿನ ಲಾಭವನ್ನು ನೀಡುತ್ತದೆ. ಇದರಲ್ಲಿ ನೀವು ಗರಿಷ್ಠ 30 ಲಕ್ಷ ರೂ. ಹೂಡಿಕೆಯ್ನನು ಮಾಡಬಹುದು. ಈ ಯೋಜನೆಯಲ್ಲಿನ FD ಹೂಡಿಕೆಗಿಂತಲೂ ಹೆಚ್ಚಿನ ಲಾಭವನ್ನು ಪಡೆಯಬಹುದು.

Senior Citizen Savings Scheme Update
Image Credit: The Hindu Businessline

60 ವರ್ಷದ ನಂತರ ನಿಮಗೆ ಬರುವ ಪಿಂಚಣಿ ಹಣಕ್ಕೆ ಎಷ್ಟು ತೆರಿಗೆ ಕಟ್ಟಬೇಕು
ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಒಟ್ಟಾಗಿ 30 ಲಕ್ಷ ರೂ. ಹೂಡಿಕೆ ಮಾಡಿದರೆ ವಾರ್ಷಿಕ 2.46 ಲಕ್ಷ ರೂ. ಬಡ್ಡಿಯನ್ನು ಪಡೆಯಬಹುದು. ಇನ್ನು ಮಾಸಿಕ ಲೆಕ್ಕದಲ್ಲಿ ನೋಡಿದರೆ 20,000 ರೂ. ಬಡ್ಡಿಯನ್ನು ಪಡೆಯಬಹುದು. ನೀವು ಈ ಹಣವನ್ನು ತ್ರೈಮಾಸಿಕವಾಗಿ ತೆಗೆದುಕೊಳ್ಳಲು ಬಯಸಿದರೆ ನಿಮಗೆ 61,500 ರೂ. ಸಿಗುತ್ತದೆ.

Join Nadunudi News WhatsApp Group

ಒಬ್ಬ ವ್ಯಕ್ತಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತ್ರೈಮಾಸಿಕದಲ್ಲಿ 10,250 ರೂ. ಹಣವು ಪಡೆಯಬಹುದು. ತೆರಿಗೆಯನ್ನು ಪಾವತಿಸುವಾಗ ನೀವು ಈ ಯೋಜನೆಯ ಲಾಭವನ್ನು ಪಡೆಯುತ್ತೀರಿ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ನೀವು 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಅದರ ಬಡ್ಡಿಯನ್ನು ಪ್ರತಿ ವರ್ಷ ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿ ಮೊದಲ ವಾರದಲ್ಲಿ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ.

Join Nadunudi News WhatsApp Group