PPF For Children’s: ಮಕ್ಕಳ ಭವಿಷ್ಯಕ್ಕಾಗಿ PPF ಖಾತೆ ತೆರೆಯುವುದು ಹೇಗೆ, ವಯಸ್ಸಿನ ಮಿತಿ ಎಷ್ಟು ಗೊತ್ತಾ…?
ಮಕ್ಕಳ PPF ಖಾತೆ ತೆರೆಯಲು ವಯಸ್ಸಿನ ಮಿತಿ ಎಷ್ಟು...?
PPF Account Open Age Limit For Children’s: ಸರ್ಕಾರ ಪರಿಚಯಿಸಿರುವ ವಿವಿಧ ಯೋಜನೆಗಳಲ್ಲಿ PPF ಖಾತೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ಅತ್ಯಂತ ಜನಪ್ರಿಯ ದೀರ್ಘಕಾಲೀನ ಉಳಿತಾಯ ಹೂಡಿಕೆ ಎನ್ನಬಹುದು. ವಿವಿಧ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ Public Provident Fund ಯೋಜನೆಯು ವಿಶೇಷವಾಗಿದೆ ಮತ್ತು ಹೆಚ್ಚಿನ ಲಾಭವನ್ನು ಕೂಡ ನೀಡುತ್ತದೆ.
![PPF Account Open Age Limit For Children's](https://nadunudi.in/wp-content/uploads/2024/02/PPF-Account-Open-Age-Limit-For-Childrens.png)
ಮಕ್ಕಳ ಭವಿಷ್ಯಕ್ಕಾಗಿ PPF ಖಾತೆ ತೆರೆಯುವ ಯೋಜನೆಯಲ್ಲಿದ್ದೀರಾ..?
ಹೂಡಿಕೆದಾದರೂ PPF ನಲ್ಲಿ ಹೂಡಿಕೆ ಮಾಡುದರಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು ಮಕ್ಕಳ ಭಾವಹೀಷ್ಯಕ್ಕಾಗಿ PPF ನಲ್ಲಿ ಖಾತೆ ತೆರೆಯುವುದು ಉತ್ತಮ. ಇನ್ನು ಮಕ್ಕಳ ಹೆಸರಿನಲ್ಲಿ PPF ಖಾತೆ ತೆರೆಯಲು ನಿಮ್ಮ ಮಗುವಿಗೆ ಎಷ್ಟು ವರ್ಷ ವಯಸ್ಸಾಗಿರಬೇಕು ಎನ್ನುವ ಬಗ್ಗೆ ನಿಮ್ಮಲ್ಲಿ ಪ್ರಶ್ನೆ ಹುಟ್ಟಿರಬಹುದು. ಮಕ್ಕಳ ಭವಿಷ್ಯಕ್ಕಾಗಿ PPF ಖಾತೆ ತೆರೆಯಲು ವಯಸ್ಸಿನ ಮಿತಿ ಎಷ್ಟು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಮಕ್ಕಳ PPF ಖಾತೆ ತೆರೆಯಲು ವಯಸ್ಸಿನ ಮಿತಿ ಎಷ್ಟು ಗೊತ್ತಾ…?
PPF ನಲ್ಲಿನ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಮಾರುಕಟ್ಟೆಯ ಏರಿಳಿತದ ಪ್ರಭಾವಗಳಿಂದ ಈ ಯೋಜನೆ ಮುಕ್ತವಾಗಿದೆ. ಈ ಯೋಜನೆಯಲ್ಲಿ ನೀವು ನಿಗದಿತ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಗರಿಷ್ಠ 1.50 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು.
![PPF Investment Profit](https://nadunudi.in/wp-content/uploads/2024/02/PPF-Investment-Profit.png)
ಮಕ್ಕಳಿಗಾಗಿ ಪಿಪಿಎಫ್ ಖಾತೆಯನ್ನು ತೆರೆಯಲು ಕನಿಷ್ಠ ವಯಸ್ಸು ಇಲ್ಲ, ಅವರು ಹುಟ್ಟಿದಾಗಿನಿಂದ ಯಾವುದೇ ಸಮಯದಲ್ಲಿ ಖಾತೆಯನ್ನು ತೆರೆಯಬಹುದು. ಮಕ್ಕಳ ಪಿಪಿಎಫ್ ಖಾತೆಯನ್ನು ಅವರ ಪೋಷಕರೇ ತೆರೆಯುತ್ತಾರೆ. ಪೋಷಕರೂ ಇದರಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ 18 ವರ್ಷ ಪೂರ್ಣಗೊಂಡ ನಂತರ ಮಗು ತನ್ನ ಖಾತೆಯನ್ನು ಸ್ವತಃ ನಿಭಾಯಿಸಬಹುದು ಮತ್ತು ಅದರಲ್ಲಿ ಸ್ವತಃ ಹೂಡಿಕೆ ಮಾಡಬಹುದು.
ಈ ಹೂಡಿಕೆಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ನಲ್ಲಿ ತೆರಿಗೆ ವಿನಾಯಿತಿಗೆ ಅವಕಾಶವಿದೆ. ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ PPF ಖಾತೆಯನ್ನು ತೆರೆದು ಅದರಲ್ಲಿ ಹಣವನ್ನು ಠೇವಣಿ ಮಾಡಿದರೆ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ನಿಯಮಗಳ ಪ್ರಕಾರ, ಮಕ್ಕಳ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಅವರ ಪೋಷಕರು ಗಳಿಸಿದರೆ, ಅವರು ಅದರ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.