PPF Rule: PPF ಖಾತೆ ಇದ್ದವರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್, PPF ಹಣ ತಗೆಯುವ ನಿಯಮ ಬದಲಾವಣೆ
PPF ಯೋಜನೆಯ ಹಣವನ್ನು ಹಿಂಪಡೆಯುವ ನಿಯಮವನ್ನು ಸರ್ಕಾರ ಬದಲಿಸಿದೆ
PPF Money Withdrawal Rule Change: ಸರ್ಕಾರ ಪರಿಚಯಿಸಿರುವ ವಿವಿಧ ಯೋಜನೆಗಳಲ್ಲಿ PPF ಖಾತೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ಅತ್ಯಂತ ಜನಪ್ರಿಯ ದೀರ್ಘಕಾಲೀನ ಉಳಿತಾಯ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ವಿವಿಧ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ Public Provident Fund ಯೋಜನೆಯು ವಿಶೇಷವಾಗಿದೆ. ದೇಶದಲ್ಲಿ ಲಕ್ಷಾಂತರ ಜನರು PPF ನಲ್ಲಿ ಹೂಡಿಕೆ ಆರಂಭಿಸಿದ್ದಾರೆ.
ಇನ್ನು PPF ನಲ್ಲಿ ಹೂಡಿಕೆ ಮಾಡುದರಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಮಾರುಕಟ್ಟೆಯ ಏರಿಳಿತದ ಪ್ರಭಾವಗಳಿಂದ ಈ ಯೋಜನೆ ಮುಕ್ತವಾಗಿದೆ. ಈ ಯೋಜನೆಯಲ್ಲಿ ನೀವು ನಿಗದಿತ ದರದಲ್ಲಿ ಬಡ್ಡಿಯನ್ನು ಪಡೆಯಬಹುದಾಗಿದೆ. ಸದ್ಯ ಸರ್ಕಾರ PPF ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ.
![PPF Money Withdrawal Rule Change](https://nadunudi.in/wp-content/uploads/2024/01/PPF-Money-Withdrawal-Rule-Change.png)
PPF ಹಣ ಹಿಂಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ
ಸದ್ಯ ಕೇಂದ್ರ ಸರ್ಕಾರ PPF ಖಾತೆಯನ್ನು ಅಕಾಲಿಕವಾಗಿ ಮುಚ್ಚುವ ನಿಯಮವನ್ನು ಬದಲಾಯಿಸಿದೆ. ಈ ಬದಲಾವಣೆಯನ್ನು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ 2023 ಎಂದು ಹೆಸರಿಡಲಾಗಿದೆ. ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಯೋಜನೆಯಿಂದ ಹಣವನ್ನು ಅಕಾಲಿಕವಾಗಿ ಹಿಂಪಡೆಯಲು ವಿಶೇಷ ಹೊಂದಾಣಿಕಾಯೆಯನ್ನು ಇದು ವಿವರಿಸುತ್ತದೆ.
ಹೊಸ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ
ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಸೇರಿದಂತೆ ಅನೇಕ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ, ಖಾತೆಯನ್ನು ತೆರೆದ ದಿನಾಂಕದಿಂದ ನಾಲ್ಕು ವರ್ಷಗಳ ನಂತರ ಐದು ವರ್ಷಗಳ ಖಾತೆಯಿಂದ ಹಣವನ್ನು ಹಿಂಪಡೆದರೆ ಮೂರು ವರ್ಷಗಳ ಟೈಮ್ ಡೆಪಾಸಿಟ್ ಖಾತೆಯ ಬಡ್ಡಿದರವು ಅದರ ಮೇಲೆ ಅನ್ವಯಿಸುತ್ತದೆ. ಸಣ್ಣ ಉಳಿತಾಯ ಖಾತೆಗಳನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ನಿರ್ವಹಿಸುತ್ತಿದೆ.