Awas Yojana: ಯಾರು ಯಾರಿಗೆ ಕೇಂದ್ರದಿಂದ ಉಚಿತ ಮನೆ ಸಿಗಲಿದೆ, ಕೇಂದ್ರದ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಜನಸಮಾನ್ಯರ ಸ್ವಂತ ಮನೆ ನಿರ್ಮಾಣದ ಕನಸಿಗೆ ಆವಾಸ್ ಯೋಜನೆ.

Pradhan Mantri Awas Yojana Latest Update: ದೇಶದ ನಿರ್ಗತಿಕರಿಗಾಗಿ ಆರ್ಥಿಕವಾಗಿ ನೆರವಾಗಲು ಒಂದೊಂದೇ ಯೋಜನೆಯನ್ನು ಪರಿಚಯಿಸುತ್ತ ಬಡವರು ಆರ್ಥಿಕವಾಗಿ ಸ್ಥಿರತೆ ಕಾಣಲು ಕೇಂದ್ರ ಸರಕಾರ ಸಹಾಯ ಮಾಡುತ್ತಿದೆ.

ದೇಶದಲ್ಲಿ ಈಗಾಗಲೇ ಬಡ ಜನತೆಗಾಗಿ Pradhan Mantri Awas ಯೋಜನೆ ಚಾಲ್ತಿಯಲ್ಲಿದೆ. ದೇಶದ ಲಕ್ಷಾಂತರ ಜನರು PMAY ಅಡಿಯಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿಕೊಂಡಿದ್ದಾರೆ ಎನ್ನಬಹುದು. ಜನಸಮಾನ್ಯರ ಸ್ವಂತ ಮನೆ ನಿರ್ಮಾಣದ ಕನಸಿಗೆ ಆವಾಸ್ ಯೋಜನೆಯು ಹೆಚ್ಚು ಸಹಕಾರಿಯಾಗಿದೆ.

Pradhan Mantri Awas Yojana Latest Update
Image Credit: Original Source

ಯಾರು ಯಾರಿಗೆ ಕೇಂದ್ರದಿಂದ ಉಚಿತ ಮನೆ ಸಿಗಲಿದೆ
ಪ್ರದಾನ್ ಮಂತ್ರಿ ಆವಾಸ್ ಯೋಜನೆಯ ಕ್ರೆಡಿಟ್ ಲಿಂಕ್ ಸಬ್ಸಿಡಿ ಅಡಿಯಲ್ಲಿ ನೀವು ಬರೋಬ್ಬರಿ 2 .65 ಲಕ್ಷ ರೂ. ಗಳನ್ನೂ ಪಡೆಯಬಹುದು. ನೀವು ಯಾವ ಬ್ಯಾಂಕ್ ನಲ್ಲಿ ಹೋಮ್ ಲೋನ್ ಅನ್ನು ಪಡೆಯುತ್ತಿರೋ, ಸರ್ಕಾರ ಅದೇ ಬ್ಯಾಂಕ್ ಗೆ ಈ ಹಣವನ್ನು ಜಮಾ ಮಾಡುತ್ತದೆ. ಮುಖ್ಯವಾಗಿ ನೀವು ಪಿಎಂ ಆವಾಸ್ ಯೋಜನೆಯಡಿ ಸಬ್ಸಿಡಿ ಸಾಲವನ್ನು ಪಡೆಯಲು ಯಾವ ಸಮಯದಲ್ಲಿ ಗೃಹ ಸಾಲವನ್ನು ಪಡೆಯುತ್ತಿರೋ ಅದೇ ಸಮಯದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಹೋಮ್ ಲೋನ್ ಪಡೆದುಕೊಂಡ ವರ್ಷಗಳ ಬಳಿಕ ಸಬ್ಸಿಡಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸದ್ಯ ಕೇಂದ್ರ ಸರ್ಕಾರ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ತಿಳಿಯಲು ಈ ಲೇಖನವನ್ನು ಓದಿ. ನಾವೀಗ ಈ ಲೇಖನದಲ್ಲಿ ಆವಾಸ್ ಯೋಜನಯ ಅರ್ಹರ ಪಟ್ಟಿ ಪರಿಶೀಲಿಸುವ ಬಗ್ಗೆ ಹೇಳಿದ್ದೇವೆ.

Pradhan Mantri Awas Scheme
Image Credit: Agromarathi

ಕೇಂದ್ರದ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
•ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಪೋರ್ಟಲ್‌ pmaymis.gov.in ಗೆ ಭೇಟಿ ನೀಡಬೇಕು.

Join Nadunudi News WhatsApp Group

•ಇದರ ನಂತರ ನೀವು ಮುಖಪುಟದಲ್ಲಿ ಹುಡುಕಾಟ ಫಲಾನುಭವಿಯನ್ನು ಆಯ್ಕೆ ಮಾಡಬೇಕು.

•ಈಗ ನೀವು ಹೊಸ ಟ್ಯಾಬ್‌ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

•ಇದರ ನಂತರ ನೀವು Send OTP ಅನ್ನು ಕ್ಲಿಕ್ ಮಾಡಬೇಕು.

•ನೀವು ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕು.

•ಈಗ ನಿಮಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ತೋರಿಸಲಾಗುತ್ತದೆ.

•ನೀವು ಈ ಪಟ್ಟಿಯನ್ನು ಡೌನ್‌ ಲೋಡ್ ಮಾಡಿಕೊಂಡು ಸುಲಭವಾಗಿ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

Join Nadunudi News WhatsApp Group