PM Kisan: ದೇಶದ ಪ್ರತಿ ರೈತನ ಖಾತೆಗೆ 8000 ರೂ ಜಮಾ, ಹೊಸ ವರ್ಷದ ಮೊದಲ ವಾರವೇ ರೈತರಿಗೆ ಗುಡ್ ನ್ಯೂಸ್.

ಇನ್ನುಮುಂದೆ ದೇಶದ ಪ್ರತಿ ರೈತನ ಖಾತೆಗೆ 8000 ರೂಪಾಯಿ ಜಮಾ.

Pradhan Mantri Kisan Amount Hike: ದೇಶದ ಜನತೆಗಾಗಿ ಕೇಂದ್ರದ ಮೋದಿ ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ದೇಶದ ಬೆನ್ನೆಲುಬಾಗಿರುವ ರೈತನಿಗಾಗಿ ಸರ್ಕಾರ ಒಂದಿಷ್ಟು ಯೋಜನೆಯನ್ನು ಪರಿಚಯಿಸಿದೆ. ರೈತರಿಗಾಗಿ ಮೋದಿ ಸರ್ಕಾರ ಪರಿಚಯಿಸಿರುವ Pradhan Mantri Kisan ಯೋಜನೆಯ ಬಗ್ಗೆ ಜನರಿಗೆ ಮಾಹಿತಿ ತಿಳಿದಿರಬಹುದು.

PM Kisan ಯೋಜನೆಯು ಇನ್ನಿತರ ಯೋಜನೆಗಳಿನಿಂತ ವಿಶೇಷವಾಗಿದೆ. ಪ್ರಸ್ತುತ ದೇಶದಲ್ಲಿ ಲಕ್ಷಾಂತರ ರೈತರು 1 ರಿಂದ 15 ಕಂತುಗಳ ಹಣವನ್ನು PM Kisan ಯೋಜನೆಯಡಿಯಲ್ಲಿ ಪಡೆದಿದ್ದಾರೆ. ಇದೀಗ PM Kisan ಫಲಾನುಭವಿಗಳಿಗೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಹೊಸ ವರ್ಷಕ್ಕೆ PM Kisan ಫಲಾನುಭವಿಗಳಿಗೆ ಬಂಪರ್ ಉಡುಗೊರೆ ನೀಡಲಾಗಿದೆ.

Pradhan Mantri Kisan Amount Hike
Image Credit: Scroll

ಹೊಸ ವರ್ಷದ ಮೊದಲ ವಾರವೇ ರೈತರಿಗೆ ಗುಡ್ ನ್ಯೂಸ್
Pradhan Mantri Kisan ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಆದರೆ ಈ ಹಣ ಒಂದೇ ಬಾರಿ ಬರುವುದಿಲ್ಲ ಬದಲಾಗಿ ಕಂತುಗಳಲ್ಲಿ ಬರುತ್ತದೆ. ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ. ಇದೀಗ Lokasabha Election 2024  ಮುನ್ನ ಕೇಂದ್ರ ಸರ್ಕಾರ PM Kisan ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಕಿಸಾನ್ ಯೋಜನೆಯ ಹಣ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ.

ದೇಶದ ಪ್ರತಿ ರೈತನ ಖಾತೆಗೆ 8000 ರೂ ಜಮಾ
Kisan ಯೋಜನೆಯಡಿ ರೈತರ ಖಾತೆಗೆ ಈವರೆಗೆ 6000 ಹಣ ಜಮಾ ಆಗುತ್ತಿತ್ತು. ಆದರೆ ಸರ್ಕಾರ ಇದೀಗ ಹಣವನ್ನು ಹೆಚ್ಚಿಸಲು ನಿರ್ಧರಿಸಿದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ PM Kisan ಯೋಜನೆಯ ಅಡಿಯಲ್ಲಿ ವರ್ಷಕ್ಕೆ 6000 ರೂಪಾಯಿ ಬದಲಾಗಿ ಇನ್ನುಮುಂದೆ 8000 ರೂಪಾಯಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Kisan Amount Hike Latest Update
Image Credit: India Tv

ಇದಕ್ಕಾಗಿ 2024 ರ ಹಣಕಾಸು ವರ್ಷದಲ್ಲಿ ಮಂಡನೆ ಆಗುವ ಕೇಂದ್ರವು ಬಜೆಟ್ ನಲ್ಲಿ 60,000 ಕೋಟಿ ಹಣವನ್ನು ನಿಗದಿಪಡಿಸಿದೆ. ಇನ್ನು PM Kisan ಯೋಜನೆಯ ವಾರ್ಷಿಕ ಮೊತ್ತ ಏರಿಕೆಯಾದರೆ, ಕೇಂದ್ರ ಸರ್ಕಾರಕ್ಕೆ ಮತ್ತೆ 20,000 ಕೋಟಿ ರೂ. ಹೊರೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ವಾರ್ಷಿಕವಾಗಿ ಬರೋಬ್ಬರಿ 80,000 ಕೋಟಿ ರೂ. ದೇಶದ ರೈತರ ಖಾತೆಗೆ ಜಮಾ ಆಗಲಿದೆ.

Join Nadunudi News WhatsApp Group

Join Nadunudi News WhatsApp Group