PM -KMY: ಇಂತವರ ಖಾತೆಗೆ ಕೇಂದ್ರದಿಂದ ನೇರವಾಗಿ ಬರಲಿದೆ 3000 ರೂ, ಇಂದೇ ಅರ್ಜಿ ಸಲ್ಲಿಸಿ

ವೃದ್ದಾಪ್ಯದಲ್ಲಿ ರೈತರ ಜೀವನ ನಿರ್ವಹಣೆಗಾಗಿ ಸರ್ಕಾರದ ಭರ್ಜರಿ ಪ್ಲಾನ್, ರೈತರ ಖಾತೆಗೆ ಪ್ರತಿ ತಿಂಗಳು ಸೇರಲಿದೆ 3000 ರೂ.

Pradhan Mantri Kisan Maandhan Yojana Latest Update: ಸದ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಏಳಿಗೆಗಾಗಿ ಶ್ರಮನಿಸುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ದೇಶದಲ್ಲಿ ರೈತರಿಗಾಗಿಯೇ ವಿಶೇಷ ಯೋಜನೆಗಳು ತಲೆ ಎತ್ತಿಕೊಂಡಿವೆ. ರೈತರಿಗಾಗಿ ಪರಿಚಯಿಸಿರುವ ಯೋಜನೆಗಳಲ್ಲಿ Pradhan Mantri Kisan Maandhan Yojana (PM -KMY ) ಕೂಡ ಒಂದಾಗಿದೆ.

ಈ ಯೋಜನೆಯ ಅಡಿಯಲ್ಲಿ ರೈತರು ನಿಗದಿತ ಪಿಂಚಣಿಯ ಮೊತ್ತವನ್ನು ಪಡೆಯಬಹುದು. ಮಾಸಿಕ ಕಡಿಮೆ ಹೂಡಿಕೆಯೊಂದಿಗೆ ರೈತರು ತಮ್ಮ ವೃದ್ದಾಪ್ಯವನ್ನು ಯಾವುದೇ ಚಿಂತೆ ಇಲ್ಲದೆ ಕಳೆಯಬಹುದು. ನಾವೀಗ ಈ ಯೋಜನೆಯಲ್ಲಿ ರೈತರಿಗಾಗಿ ಪರಿಚಯಿಸಿರುವ ಪಿಂಚಣಿ ಯೋಜನೆ (Pension Scheme ) ಬಗ್ಗೆ ಹೇಳಲಿದ್ದೇವೆ.

Pradhan Mantri Kisan Maandhan Yojana Latest Update
Image Credit: Indiatv

ವೃದ್ದಾಪ್ಯದಲ್ಲಿ ರೈತರ ಜೀವನ ನಿರ್ವಹಣೆಗಾಗಿ ಸರ್ಕಾರದ ಭರ್ಜರಿ ಪ್ಲಾನ್
ಕೇಂದ್ರ ಸರಕಾರ ಪರಿಚಯಿಸಿರುವ Pradhan Mantri Kisan Maandhan ಯೋಜನೆಯ ಅಡಿಯಲ್ಲಿ ರೈತರು ಹೂಡಿಕೆಯನ್ನು ಆರಂಭಿಸಿದರೆ ತಮ್ಮ ವೃದ್ದಾಪ್ಯದಲ್ಲಿ ಅವರು ತಮ್ಮ ಖರ್ಚಿಗೆ ಹಣವನ್ನು ಪಡೆದುಕೊಳ್ಳಬಹುದು. ನೀವು ಈ ಯೋಜನೆಯ ಲಾಭ ಪಡೆಯಲು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರುವುದು ಅಗತ್ಯವಾಗಿದೆ. ಈ ಯೋಜನೆಯಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಅನ್ವಯಾಗುತ್ತದೆ.

ಇನ್ನು 18 ರಿಂದ 40 ವರ್ಷದವರು ಮಾತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿದೆ ತಿಂಗಳಿಗೆ 55 ರೂ., 30 ವರ್ಷದಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 110 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 40 ವಯಸ್ಸಿನಲ್ಲಿ ಯೋಜನೆಗೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 220 ರೂ. ಹೂಡಿಕೆ ಮಾಡಬೇಕು. ನಿಮ್ಮ ವಯಸ್ಸು 60 ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ಪಿಂಚಣಿಯ ಲಾಭ ಪಡೆಯಬಹುದು.

Pradhan Mantri Kisan Maandhan Yojana
Image Credit: Vakilsearch

ರೈತರ ಖಾತೆಗೆ ಪ್ರತಿ ತಿಂಗಳು ಸೇರಲಿದೆ 3000 ರೂ.
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿಯಲ್ಲಿ ರೈತರಿಗೆ ಮಾಸಿಕ 3,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ ರೂ. 36,000 ಮೊತ್ತವನ್ನು ಪಡೆಯುತ್ತಾರೆ. ಇನ್ನು ಮನ್ ಧನ್ ಯೋಜನೆಯ ಮಾಸಿಕ ಕೊಡುಗೆಯು ರೂ. 55 ರಿಂದ ರೂ. 200 ರ ವರೆಗೆ ಇರುತ್ತದೆ.

Join Nadunudi News WhatsApp Group

ಅಂದರೆ ವರ್ಷಕ್ಕೆ ಕನಿಷ್ಠ 660 ಮತ್ತು ಗರಿಷ್ಠ 24,00 ರೂ. ಆಗಿದೆ. ಈ ಹಣವನ್ನು ಕಡಿತಗೊಳಿಸಿದ ನಂತರ PM Kisan ಹಣ ನಿಮ್ಮ ಖಾತೆಗೆ ಬರುತ್ತದೆ. 60 ವರ್ಷಗಳ ನಂತರ PM Kisan ನ ಕಂತಿನಲ್ಲಿ ಯಾವುದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.

Pradhan Mantri Kisan Maandhan Yojana Money
Image Credit: Moneycontrol

Join Nadunudi News WhatsApp Group