PMMVY: ಕೇಂದ್ರ ಸರ್ಕಾರದ ಇನ್ನೊಂದು ಘೋಷಣೆ, ಪ್ರತಿ ಮಹಿಳೆಗೂ ಸಿಗಲಿದೆ ಕೇಂದ್ರದಿಂದ 5000 ರೂ.

ಕೇಂದ್ರದಿಂದ ಪ್ರತಿ ಮಹಿಳೆಗೆ 5000 ರೂ ಘೋಷಣೆ.

Pradhan Mantri Matru Vandana Yojana: ದೇಶದಲ್ಲಿ ಕೇಂದ್ರ ಸರ್ಕಾರ (Central Govt) ಜನಸಾಮಾನ್ಯರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಭಾರತ ಸರ್ಕಾರ ದೇಶದ ಬಡ ಮಹಿಳೆಯರಿಗೆ ನೆರವಾಗಲು ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ.

ಮಹಿಳೆಯರ ಸಬಲೀಕರಣದ ಜೊತೆಗೆ ಗರ್ಭಿಣಿ ಮಹಿಳೆಯರಿಗೂ ಕೂಡ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗರ್ಭಿಣಿ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಅವರಿಗೆ ಆರ್ಥಿಕ ನೆರವಾಗಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ.

Pradhan Mantri Matru Vandana Latest Update
Image Credit: Softfeed

Pradhan Mantri Matru Vandana
ಇನ್ನು ಗರ್ಭಿಣಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಅವರು Matru Vandana ಯೋಜನೆಯನ್ನು ರೂಪಿಸಿರುವ ಬಗ್ಗೆ ಈಗಾಗಲೇ ಎಲ್ಲರಿಗು ತಿಳಿದೇ ಇದೆ. PMMVY ಅಡಿಯಲ್ಲಿ ದೇಶದ ಕೋಟ್ಯಂತರ ಗರ್ಭಿಣಿ ಮಹಿಳೆಯರು ಆರ್ಥಿಕ ಬೆಂಬಲ ಪಡೆಯುತ್ತಿದ್ದಾರೆ ಎನ್ನಬಹುದು. ಗರ್ಭಿಣಿ ಮಹಿಳೆಯರ ಆರೋಗ್ಯಕ್ಕಾಗಿ ಹಾಗೂ ಮಗು ಜನಸಿದ ನಂತರ ಮಗುವಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಸಲುವಾಗಿ ಸರ್ಕಾರ ಆರ್ಥಿಕವಾಗಿ ನೆರವಾಗಲು ಮುಂದಾಗಿದೆ.

ಗರ್ಭಿಣಿ ಮಹಿಳೆಯರಿಗಾಗಿ ವಿಶೇಷ ಯೋಜನೆ
ದೇಶದ ಪ್ರತಿ ಗರ್ಭಿಣಿ ಮಹಿಳೆಯು ಕೂಡ ಕೇಂದ್ರ ಸರ್ಕಾರದ PMMVY ಅಡಿಯಲ್ಲಿ ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದಾಗಿದೆ. ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು. ಮಕ್ಕಳಲ್ಲಿ ಹೆಚ್ಚುತ್ತಿರುವ ರಕ್ತಹೀನತೆ, ಅಪೌಷ್ಟಿಕತೆ ಇವಲ್ಲೆವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮೋದಿ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ದೇಶದ ಗರ್ಭಿಣಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎನ್ನುವುದು ಸರ್ಕಾರ ಉದ್ದೇಶವಾಗಿದೆ.

pradhan mantri matru vandana yojana
Image Credit: Gnttv

ಕೇಂದ್ರದಿಂದ ಗರ್ಭಿಣಿಯರಿಗೆ ಸಿಗಲಿದೆ 5 ಸಾವಿರ
ಕೆಂದ್ರ ಸರ್ಕಾರ ಇದೀಗ ಗರ್ಭಿಣಿಯರಿಗೆ PMMVY ಅಡಿಯಲ್ಲಿ ಸಿಹಿ ಸುದ್ದಿ ನೀಡಿದೆ. ಮಾತ್ರ ವಂದನಾ ಯೋಜನೆಯಡಿಯಲ್ಲಿ ಸರ್ಕಾರ ಗರ್ಭಿಣಿ ಮಹಿಳೆಯರಿಗೆ 5 ಸಾವಿರ ಹಣ ನೀಡಲಿದೆ. ಫಲಾನುಭವಿ ಮಹಿಳೆಯರಿಗೆ ಸರ್ಕಾರ 5000 ರೂ ಗಳನ್ನೂ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ.

Join Nadunudi News WhatsApp Group

PMMVY ಯೋಜನೆಯಡಿಯಲ್ಲಿ, ಗರ್ಭಧಾರಣೆಯ ನೋಂದಣಿ ಸಮಯದಲ್ಲಿ ಮೊದಲು 1,000 ಹಾಗೂ ಆರು ತಿಂಗಳ ನಂತರ 2,000 ಸಾವಿರ ಹಾಗು ಮಗುವಿನ ಜನನದ ನೋಂದಣಿಯ ನಂತರ ಮೂರನೇ ಕಂತಿನಲ್ಲಿ 2,000 ರೂ ಗಳನ್ನೂ ನೀಡಲಾಗುತ್ತದೆ.

PMMAY ಯೋಜನೆಗೆ ಯಾರು ಅರ್ಹರು..?
ಇನ್ನು https://wcd.nic.in/schemes/pradhan-mantri-matru-vandana-yojana ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮೂರು ಕಂತುಗಳಲ್ಲಿ ಗರ್ಭಿಣಿ ಮಹಳೆಯರಿಗೆ ಖಾತೆಗೆ ಹಣ ಜಮಾ ಆಗಲಿದೆ. ಇನ್ನು 19 ವರ್ಷ ಮೇಲ್ಪಟ್ಟವರು ಮಾತ್ರ ಈ ಪ್ರದಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಅರ್ಹರಾಗಿರುತ್ತಾರೆ. ಇನ್ನು ಎರಡನೇ ಹೆರಿಗೆಯಲ್ಲಿ ಮಗು ಜನಿಸಿದರೆ ಈ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಹಣ ನೀಡಲು ನಿರ್ಧರಿಸಿದೆ.

Join Nadunudi News WhatsApp Group