Modi Loan: ಸ್ವಂತ ಬಿಸಿನೆಸ್ ಮಾಡಲು ಸಾಲ ಬೇಕಾ…? ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ ತ್ವರಿತ 50 ಸಾವಿರ ಸಾಲ.

ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ

Pradhan Mantri Mudra Loan Details: ಕೇಂದ್ರ ಸರ್ಕಾರ ಜನಸಾಮಾನ್ಯರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. ದೇಶದ ಜನತೆ ಕೇಂದ್ರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಕೇಂದ್ರ ಸರ್ಕಾರ ಸ್ವಂತ ಬ್ಯುಸಿನೆಸ್ ಮಾಡುವವರಿಗಾಗಿ ಸಕಷ್ಟು ಯೋಜನೆಯನ್ನು ಪರಿಚಯಿಸಿದೆ.

ಕೇಂದ್ರದ ಯೋಜನೆಯಡಿ ಅರ್ಹರು ಸಾಲವನ್ನು ಪಡೆದು ಸ್ವಂತ ಉದ್ಯೋಗ ಕಂಡುಕೊಳ್ಳಬಹುದಾಗಿದೆ. ಸ್ವಂತ ಉದ್ಯೋಗ ಮಾಡುವವರಿಗಾಗಿ ಸರ್ಕಾರ ವಿಶೇಷವಾಗಿ ಈ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಯಾವುದೇ ಗ್ಯಾರಂಟಿ ನೀಡದೆ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಕೇಂದ್ರದ ಯಾವ ಯೋಜನೆಯಡಿ ಬಡ್ಡಿ ರಹಿತ ಸಾಲ ನೀಡಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Pradhan Mantri Mudra Loan Scheme
Image Credit: Good Returns

ಸ್ವಂತ ಬಿಸಿನೆಸ್ ಮಾಡಲು ಸಾಲ ಬೇಕಾ…?
ಸರ್ಕಾರ 2015 ರಲ್ಲಿ Pradhan Mantri Mudra ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಇದರ ಅಡಿಯಲ್ಲಿ ಅರ್ಹರು ಮುದ್ರಾ ಸಾಲವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಯೋಜನೆಯ ಅಡಿಯಲ್ಲಿ ಸಾಲವನ್ನು ತೆಗೆದುಕೊಂಡು ತಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಬಹುದು.

Pradhan Mantri Mudra ಯೋಜನೆಯ ಶಿಶು ಸಾಲದಡಿ 50 ಸಾವಿರ ರೂಪಾಯಿಗಳ ಖಾತರಿ ಸಾಲ ನೀಡಲಾಗುತ್ತಿದೆ. ಕಿಶೋರ್ ಸಾಲದ ಅಡಿಯಲ್ಲಿ 5 ಲಕ್ಷದ ವರೆಗೆ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ದೊಡ್ಡ ಕೆಲಸ ಮಾಡಬೇಕೆಂದರೆ ತರುಣ್ ಯೋಜನೆಯಡಿ 10 ಲಕ್ಷ ರೂಪಾಯಿಯ ವರೆಗೆ ಸಾಲವನ್ನು ನೀಡಲಾಗುತ್ತಿದೆ. ಮುದ್ರಾ ಸಾಲ ಯೋಜನೆಗೆ 24 ರಿಂದ 70 ವರ್ಷದ ಭಾರತೀಯರು ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವಿಳಾಸ ಪುರಾವೆ ನೀಡುವ ಮೂಲಕ ನೀವು PMMY ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು.

Pradhan Mantri Mudra Loan
Image Credit: Bankofbaroda

ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ
•ನೀವು ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಬಯಸಿದರೆ ಬ್ಯಾಂಕ್ ಅಧಿಕಾರಿಗಳಿಗೆ ವ್ಯವಹಾರದ ಮಾದರಿಯನ್ನು ತೋರಿಸಬೇಕಾಗುತ್ತದೆ.

Join Nadunudi News WhatsApp Group

•ವ್ಯವಹಾರದ ಮೂಲ ಮಾದರಿಯ ಆಧಾರದ ಮೇಲೆ ಬ್ಯಾಂಕ್ ನಿಮಗೆ 10 ಲಕ್ಷ ಸಾಲವನ್ನು ನೀಡುತ್ತದೆ.

•ನಿಮ್ಮ ವ್ಯವಹಾರಕ್ಕೆ ನೀವು ಕೇವಲ 25 % ಹಣವನ್ನು ಖರ್ಚು ಮಾಡಿದರೆ ಬ್ಯಾಂಕ್ ನಿಮಗೆ 75 % ಸಾಲವನ್ನು ನೀಡುತ್ತದೆ.

•ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಸಹಾಯವಾಗುತ್ತದೆ.

•ಇನ್ನು mudra.org.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾಲದ ಅರ್ಜಿಯನ್ನು ಭರ್ತಿಮಾಡಿ ಹತ್ತಿರದ ಬ್ಯಾಂಕ್ ಶಾಖೆಗೆ ಅರ್ಜಿಯನ್ನು ಸಲ್ಲಿಸಿದರೆ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ.

Mudra Loan Scheme 2024
Image Credit: Paytm

Join Nadunudi News WhatsApp Group