Mudra Loan‌ Process: ಮುದ್ರಾ ಯೋಜನೆಯಲ್ಲಿ ಸಾಲ ಪಡೆಯುವುದು ಹೇಗೆ…? ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು ಏನು…?

ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಪಡೆಯಲು ಈ ದಾಖಲೆಗಳು ಅತೀ ಅಗತ್ಯ

Pradhan Mantri Mudra Yojana Loan Application: ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಥವಾ ಮುದ್ರಾ ಸಾಲ (Mudra Loan‌) ಎನ್ನುವುದು ಕೂಡ ಒಂದಾಗಿದೆ . ಮುದ್ರಾ ಎಂದರೆ ಮೈಕ್ರೊ ಯುನಿಟ್ಸ್‌ ಡೆವಲಪ್‌ಮೆಂಟ್‌ & ರಿಫೈನಾನ್ಸ್‌ ಏಜೆನ್ಸಿ ಲಿಮಿಟೆಡ್‌ ಎಂದರ್ಥ.

2023-24ರ ಮೊದಲಾರ್ಧದಲ್ಲಿ ಮುದ್ರಾ ಸಾಲದ ವಿತರಣೆಯಲ್ಲಿ 38% ಹೆಚ್ಚಳ ದಾಖಲಾಗಿದೆ. ಒಟ್ಟು 1,91,863 ಕೋಟಿ ರೂ. ಮುದ್ರಾ ಸಾಲವನ್ನು ಈ ಅವಧಿಯಲ್ಲಿ ವಿತರಿಸಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಸಣ್ಣ ಉದ್ದಿಮೆ-ವ್ಯಾಪಾರಗಳ ಅಭಿವೃದ್ಧಿಗೆ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.

Mudra Loan‌ Latest Update
Image Credit: India Today

ಮುದ್ರಾ ಸಾಲ ಪಡೆಯಲು ಯಾವುದೇ ಅಡಮಾನ ಇಡುವ ಅಗತ್ಯ ಇಲ್ಲ

2015 ರ ಏಪ್ರಿಲ್‌ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಣ್ಣ ವ್ಯಾಪಾರ, ಉದ್ದಿಮೆಗಳಿಗೆ 10 ಲಕ್ಷ ರೂ. ತನಕ ಸಾಲವನ್ನು ನೀಡಲಾಗುತ್ತದೆ. ಈ ಸಾಲ ಪಡೆಯಲು ಯಾವುದೇ ಅಡಮಾನ ಇಡಬೇಕಾಗಿರುವುದಿಲ್ಲ. ಇದುವರೆಗೆ 3 ಲಕ್ಷದ 76 ಸಾವಿರ ಕೋಟಿ ರೂ.ಗಳನ್ನು ಮುದ್ರಾ ಅಡಿಯಲ್ಲಿ ಮಂಜೂರು ಮಾಡಲಾಗಿದೆ. ಅದರಲ್ಲಿ 2 ಲಕ್ಷದ 92 ಸಾವಿರ ಕೋಟಿ ರೂ.ಗಳನ್ನು ವಿತರಿಸಲಾಗಿದೆ.

ಮುದ್ರಾ ಸಾಲವನ್ನು ಪಡೆಯುವ ವಿಧಾನ

Join Nadunudi News WhatsApp Group

ಸಾಲಗಾರರಿಗೆ ನೇರವಾಗಿ ಮುದ್ರಾ ಸಾಲ ವಿತರಣೆಯ ವ್ಯವಸ್ಥೆ ಇಲ್ಲ. ಆದರೆ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು ಅಥವಾ ಎನ್‌ಬಿಎಫ್‌ಸಿಗಳು ಮತ್ತು ಮೈಕ್ರೊ ಫೈನಾನ್ಸ್‌ ಇನ್ಸ್‌ ಟಿಟ್ಯೂಷನ್ಸ್‌ಗಳು ಮುದ್ರಾ ಸಾಲವನ್ನು ವಿತರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿವೆ. ಸಾಲ ಪಡೆಯಲು ಬಯಸುವವರು www.udyamimitra.in ವೆಬ್‌ ಪೋರ್ಟಲ್‌ ಮೂಲಕ ಆನ್‌ಲೈನ್‌ ಮೂಲಕ ಅರ್ಜಿಸಲ್ಲಿಸಬಹುದು.

Pradhan Mantri Mudra Yojana
Image Credit: Thestatesman

ಮುದ್ರಾ ಸಾಲ ಯೋಜನೆ ಪಡೆಯಲು ಬೇಕಾಗಿರುವ ಅರ್ಹತೆ ಹಾಗು ಯಾರ್ಯಾರು ಈ ಸಾಲ ಪಡೆಯಬಹುದು?

*ಮುದ್ರಾ ಸಾಲ ಯೋಜನೆ ಪಡೆಯಲು ಮೊದಲನೇದಾಗಿ ಭಾರತದ ನಾಗರಿಕನಾಗಿರಬೇಕು ಹಾಗು 28ರಿಂದ 70 ವರ್ಷ ವಯೊಮಿತಿಯೊಳಗಿರಬೇಕು.

*ಕೃಷಿಯೇತರ ಆದಾಯ ಸೃಷ್ಟಿಸುವ ಒಂದು ಬಿಸಿನೆಸ್‌ ಪ್ಲಾನ್‌ ಹೊಂದಿರುವವರು ಮುದ್ರಾ ಸಾಲ ಪಡೆಯಬಹುದು. ಹಾಗೂ ಉತ್ಪಾದನೆ, ಸಂಸ್ಕರಣೆ, ವ್ಯಾಪಾರ ಅಥವಾ ಸೇವಾ ಕ್ಷೇತ್ರದ ವಹಿವಾಟು ನಡೆಸುವವರು ಇದಕ್ಕೆ ಅರ್ಹತೆ ಪಡೆಯುತ್ತಾರೆ.

*ಸಣ್ಣ ಪುಟ್ಟ ವ್ಯಾಪಾರ ಮಾಡುವವರು, ಸೇವಾ ಕ್ಷೇತ್ರದ ವ್ಯಾಪಾರ ಮಾಡುತ್ತಿರುವವರು, ಹಣ್ಣು-ತರಕಾರಿ, ಜವಳಿ ಅಂಗಡಿ, ರಿಪೇರಿ ಶಾಪ್‌, ಮೆಶೀನ್‌ ಆಪರೇಟ್‌ ಮಾಡುವವರು, ಆಹಾರ ಸಂಸ್ಕರಣೆ ಮಾಡುವವರು ಮತ್ತು ಇತರರು ಮುದ್ರಾ ಸಾಲ ಪಡೆಯಬಹುದು. ಆದರೆ ಕ್ರೆಡಿಟ್‌ ಹಿಸ್ಟರಿ ಚೆನ್ನಾಗಿರಬೇಕು. ಲೋನ್‌ ಡಿಫಾಲ್ಟರ್‌ ಆಗಿರಬಾರದು.

*ಹೊಸತಾಗಿ ಬಿಸಿನೆಸ್‌ ಮಾಡಲು ಬಯಸುವವರೂ ಅರ್ಜಿ ಸಲ್ಲಿಸಬಹುದು. ಆದರೆ ಸೂಕ್ತ ಬಿಸಿನೆಸ್‌ ಪ್ಲಾನ್‌ ಅನ್ನು ಹೊಂದಿರಬೇಕು. ಫ್ರಾಂಚೈಸಿ ಮಾಡೆಲ್‌ ನಲ್ಲಿ ವ್ಯಾಪಾರ ಮಾಡಲು ಬಯಸುವವರು ಕೂಡ ಮುದ್ರಾ ಸಾಲ ಗಳಿಸಬಹುದು.

Pradhan Mantri Mudra Yojana Loan
Image Credit: tneaonline

*ಸಲೂನ್‌, ಬ್ಯೂಟಿ ಪಾರ್ಲರ್‌, ಜಿಮ್ನಾಶಿಯಮ್‌, ಡ್ರೈ ಕ್ಲೀನಿಂಗ್‌, ಡಿಟಿಪಿ, ಮೆಡಿಸಿನ್‌ ಶಾಪ್‌, ಕೊರಿಯರ್‌ ಏಜೆನ್ಸಿ ಮಾಡುವುದಿದ್ದರೂ ಮುದ್ರಾ ಸಾಲ ಸಿಗುತ್ತದೆ.

*ಪದವಿ ಮುಗಿದ ಬಳಿಕ ನಿಮ್ಮದೇ ಫುಡ್‌ ಫ್ರೊಸೆಸಿಂಗ್‌ ಘಟಕ ಆರಂಭಿಸಲು ಬಯಸುತ್ತೀರಾ, ಅದಕ್ಕೂ 10 ಲಕ್ಷ ರೂ. ತನಕ ಮುದ್ರಾ ಲೋನ್‌ ಪಡೆಯಬಹುದು.

*ನೀವು ಕಾರ್ಪೆಂಟರಿ ಶಾಪ್‌ ಮಾಡಲು, ಮಿನರಲ್‌ ವಾಟರ್‌ ಪ್ಲಾಂಟ್‌ ಬಿಸಿನೆಸ್‌ ಮಾಡಲು ಮುದ್ರಾ ಸ್ಕೀಮ್‌ ಅಡಿಯಲ್ಲಿ 10 ಲಕ್ಷ ರೂ. ತನಕ ಸಾಲ ಸಿಗುತ್ತದೆ.

*ವಾಣಿಜ್ಯ ಉದ್ದೇಶಕ್ಕೆ ಬಳಸುವ ಟ್ರ್ಯಾಕ್ಟರ್‌, ಟಿಲ್ಲರ್‌, ದ್ವಿ ಚಕ್ರವಾಹನ, ಆಟೊ ರಿಕ್ಷಾ, ಸಣ್ಣ ಗೂಡ್ಸ್‌ ಟ್ರಾನ್ಸ್‌ಪೋರ್ಟ್‌ ವಾಹನಗಳನ್ನು ಹಾಗು ಲಾರಿ ಅಥವಾ ಟೆಂಪೊ ಗಳನ್ನೂ ಮುದ್ರಾ ಸಾಲದ ಮೂಲಕ ಖರೀದಿಸಬಹುದು.

Join Nadunudi News WhatsApp Group