PM- SYM: ಕೇವಲ 2 ರೂ. ಹೂಡಿಕೆಯಲ್ಲಿ ಪಡೆಯಿರಿ 36000 ಪಿಂಚಣಿ, ಕೇಂದ್ರದ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

PM- SYM ಯೋಜನೆಯಲ್ಲಿ ಯಾವ ರೀತಿ ಹೂಡಿಕೆ ಮಾಡಿದರೆ ಎಷ್ಟು ಪಿಂಚಣಿಯ ಲಾಭವನ್ನು ಪಡೆಯಬಹುದು..?

Pradhan Mantri Shram Yogi Mandhan Yojana: ಕೇಂದ್ರ ಸರ್ಕಾರ ವಿಶೇಷವಾಗಿ ಅಸಂಘಟಿತ ವಲಯವನ್ನು ಸುರಕ್ಷಿತವಾಗಿಡಲು Pradhan Mantri Shram Yogi Mandhan (PM- SYM) ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಾಸಿಕ ಪಿಂಚಣಿಯ ಲಾಭವನ್ನು ಪಡೆಯಬಹುದು. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರಿಗೆ ಈ ಯೋಜನೆ ಉತ್ತಮ ಆಯ್ಕೆ ಎನ್ನಬಹುದು. ಕಡಿಮೆ ಪ್ರೀಮಿಯಂ ನಲ್ಲಿ ನೀವು ಮಾಸಿಕ ದೊಡ್ಡ ಮೊತ್ತದ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.

Pradhan Mantri Shram Yogi Mandhan Yojana 2024
Image Credit: Thehansindia

Pradhan Mantri Shram Yogi Mandhan Yojana
ಮೋದಿ ಸರ್ಕಾರ ಹೊಸ ಪಿಂಚಣಿಯ ಯೋಜನೆ ಅಡಿಯಲ್ಲಿ 15,000 ರೂ ಹಾಗೂ ಅದಕ್ಕಿಂತ ಕಡಿಮೆ ಆದಾಯ ಹೊಂದಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟ ಅಸಂಘಟಿತ ವಲಯ ಕಾರ್ಮಿಕ ಮಾಸಿಕ ಪಿಂಚಣಿಯನ್ನು ಪಡೆಯುವ ಮೂಲಕ ನಿವೃತ್ತಿಯ ನಂತರದ ಜೀವನವನ್ನು ಯಾವುದೇ ಚಿಂತೆಯಿಲ್ಲದೆ ಕಳೆಯಬಹುದಾಗಿದೆ. PM- SYM ಯೋಜನೆಯಲ್ಲಿ ಯಾವ ರೀತಿ ಹೂಡಿಕೆ ಮಾಡಿದರೆ ಎಷ್ಟು ಪಿಂಚಣಿಯ ಲಾಭವನ್ನು ಪಡೆಯಬಹುದು ಎನ್ನುವ ಬಗ್ಗೆ ಲೆಕ್ಕಾಚಾರ ಇಲ್ಲಿದೆ.

ಕೇವಲ 2 ರೂ. ಹೂಡಿಕೆಯಲ್ಲಿ ಪಡೆಯಿರಿ 36000 ಪಿಂಚಣಿ
ಇನ್ನು 18 ರಿಂದ 40 ವರ್ಷ ವಯಸ್ಸಿನ ಜನರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಜನರು ಮಾತ್ರ Pradhan Mantri Shramayogi Mandhan ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನೀವು ಪ್ರತಿದಿನ 2 ರೂ. ಗಳನ್ನು ಉಳಿಸಬಹುದು.

PM- SYM Latest Update
Image Credit: Linkedin

ನೀವು ಪ್ರತಿ ತಿಂಗಳು 55 ರೂ. ನಿಂದ 200 ರೂ. ಹೂಡಿಕೆ ಮಾಡಿದರೆ ಮಾಸಿಕ 3,000 ರೂಪಾಯಿ ಪಿಂಚಣಿ ಸಿಗುತ್ತದೆ. ಈ ಮೂಲಕ 60 ವರ್ಷ ವಯಸ್ಸಿನ ನಂತರ ವಾರ್ಷಿಕವಾಗಿ 36000 ರೂ. ಪಿಂಚಣಿಯನ್ನು ಪಡೆಯಬಹುದು.ಇನ್ನು https://maandhan.in/ ನಲ್ಲಿ ಶ್ರಮ ಯೋಗಿ Mandhan ಯೋಜನೆಯ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಅಗತ್ಯ
*ಆಧಾರ್ ಕಾರ್ಡ್
*ಪಾಸ್‌ಪೋರ್ಟ್ ಗಾತ್ರದ ಫೋಟೋ
*ಮೊಬೈಲ್ ಸಂಖ್ಯೆ
*ಗುರುತಿನ ಚೀಟಿ
*ವ್ಯಾಪಾರ ವಿಳಾಸ
*ಆದಾಯ ಪ್ರಮಾಣಪತ್ರ

Join Nadunudi News WhatsApp Group

Join Nadunudi News WhatsApp Group