Suryodaya Yojana: ಸರ್ಕಾರದ ಇನ್ನೊಂದು ಘೋಷಣೆ, ಇನ್ಮುಂದೆ 300 ಯೂನಿಟ್ ವಿದ್ಯುತ್ ಸಂಪೂರ್ಣ ಉಚಿತ.

ದೇಶದ ಜನರಿಗೆ ಇನ್ಮುಂದೆ 300 ಯೂನಿಟ್ ವಿದ್ಯುತ್ ಸಂಪೂರ್ಣ ಉಚಿತ.

Pradhan Mantri Suryodaya Yojana: ದೇಶದ ಜನತೆಯ ಒಳಿತಿಗಾಗಿ ಸರ್ಕಾರ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಪರಿಚಯಿಸುವ ಮೂಲಕ ದೇಶದ ಜನತೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಸದ್ಯ ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗೆ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ.

ಈ ಯೋಜನೆ ಹೆಸರು Pradhan Mantri Suryodaya Yojana. ಈ ಯೋಜನೆಯಡಿ ಅರ್ಹರು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯಬಹುದು. ಬಡ ಮತ್ತು ಮಾಧ್ಯಮ ವರ್ಗದ ಜನರಿಗೆ ಈ ಯೋಜನೆಯು ಸಹಕಾರಿಯಾಗಲಿದೆ.

Pradhan Mantri Suryoday Yojana 2024
Image Credit: Original Source

ಸರ್ಕಾರದ ಇನ್ನೊಂದು ಘೋಷಣೆ
ದೇಶ ಮತ್ತು ವಿಶ್ವದ ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳಲ್ಲಿ ಸೌರಶಕ್ತಿಯನ್ನು ವೇಗವಾಗಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಸರ್ಕಾರವು ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಿದೆ. ಇದಕ್ಕಾಗಿ ಸರ್ಕಾರವು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಚಾಲನೆ ನೀಡಲಿದೆ.

ಇನ್ಮುಂದೆ 300 ಯೂನಿಟ್ ವಿದ್ಯುತ್ ಸಂಪೂರ್ಣ ಉಚಿತ
ಬಡವರು ಮತ್ತು ಮಧ್ಯಮ ವರ್ಗದವರ ವಿದ್ಯುತ್ ಕೊರತೆಯನ್ನು ಕಡಿಮೆ ಮಾಡುವುದರೊಂದಿಗೆ ದೇಶವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ ಎಂಬುದು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡುವ ಉದ್ದೇಶವಾಗಿದೆ. PM Suryodaya ಯೋಜನೆಯಡಿ ದೇಶದ 1 ಕೋಟಿಗೂ ಅಧಿಕ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸುವ ಯೋಜನೆಯನ್ನು ಸರ್ಕಾರ ಹೂಡಿದೆ.

Pradhan Mantri Suryodaya Yojana
Image Credit: Rashtrabandhu

ಇದರಿಂದಾಗಿ ದೇಶದ ಜನರು 300 ಯುನಿಟ್ ಗಿಂತಲೂ ಹೆಚ್ಚಿನ ವಿದ್ಯುತ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದರ ಜೊತೆಗೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯನ್ನು ಕೂಡ ಹೆಚ್ಚಿಸಲಾಗಿದೆ. ಸಬ್ಸಿಡಿ ಯೋಜನೆಯಲ್ಲಿ ಗ್ರಾಹಕರಿಗೆ ನೆರವು ನೀಡುವ ಉದ್ದೇಶದಿಂದ 300 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ 60 % ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ಈ ಸಬ್ಸಿಡಿ ಹೆಚ್ಚಳದಿಂದಾಗಿ ಸಾಕಷ್ಟು ಜನರು ತಮ್ಮ ಮನೆಗೆ ಸೋಲಾರ್ ಅನ್ನು ಅಳವಡಿಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group