Suryodhaya Yojana: ನಿಮ್ಮ ಮನೆಗೂ ಬರಲಿದೆ ಮೋದಿ ಸರ್ಕಾರದಿಂದ ಸೋಲಾರ್, ಹೊಸ ಯೋಜನೆಗೆ ಚಾಲನೆ ನೀಡಿದ ನರೇಂದ್ರ ಮೋದಿ

ಮನೆ ಮನೆಗೆ ಸೋಲಾರ್ ತಲುಪಿಸಲು ಸೂರ್ಯೋದಯ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ

Pradhan Mantri Suryodhaya Yojana: ಕೇಂದ್ರದ ಮೋದಿ ಸರ್ಕಾರ ದೇಶದಲ್ಲಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದ್ದಾರೆ. ದೇಶದ ಜನತೆಯ ಒಳಿತಿಗಾಗಿ ಸರ್ಕಾರ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಪರಿಚಯಿಸುವ ಮೂಲಕ ದೇಶದ ಜನತೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ.

ಸದ್ಯ ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗೆ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ. ಈ ಯೋಜನೆ ಹೆಸರು Pradhan Mantri Suryodhaya Yojana. ಮೋದಿ ಸರ್ಕಾರ ಪರಿಚಯಿಸಿರುವ ಈ ನೂತನ ಯೋಜನೆಯಲ್ಲಿ ಜನರು ಯಾವ ರೀತಿಯ ಪ್ರಯೋಜನವನ್ನು ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Pradhan Mantri Suryoday Yojana
Image Credit: ABP News

ಹೊಸ ಯೋಜನೆಗೆ ಚಾಲನೆ ನೀಡಿದ ನರೇಂದ್ರ ಮೋದಿ
ದೇಶ ಮತ್ತು ವಿಶ್ವದ ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳಲ್ಲಿ ಸೌರಶಕ್ತಿಯನ್ನು ವೇಗವಾಗಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಸರ್ಕಾರವು ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಿದೆ. ಇದಕ್ಕಾಗಿ ಸರ್ಕಾರವು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಚಾಲನೆ ನೀಡಲಿದೆ.

ನಿಮ್ಮ ಮನೆಗೂ ಬರಲಿದೆ ಮೋದಿ ಸರ್ಕಾರದಿಂದ ಸೋಲಾರ್
ಬಡವರು ಮತ್ತು ಮಧ್ಯಮ ವರ್ಗದವರ ವಿದ್ಯುತ್ ಕೊರತೆಯನ್ನು ಕಡಿಮೆ ಮಾಡುವುದರೊಂದಿಗೆ ದೇಶವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ ಎಂಬುದು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡುವ ಉದ್ದೇಶವಾಗಿದೆ.

Pradhan Mantri Suryoday Yojana 2024
Image Credit: cnbctv18

ನೀವು ಷೇರು ಮಾರುಕಟ್ಟೆಯಿಂದ ಗಳಿಸುವ ಬಗ್ಗೆ ಯೋಚಿಸುತ್ತಿದ್ದರೆ ಅಥವಾ ಷೇರು ಮಾರುಕಟ್ಟೆಯಲ್ಲಿ ಸಕ್ರಿಯರಾಗಿದ್ದರೆ, ನೀವು ಸೌರ ವಲಯದಲ್ಲಿ ಕೆಲಸ ಮಾಡುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ನೀವು ಲಕ್ಷಗಟ್ಟಲೆ ಗಳಿಸುವ ಯೋಜನೆಯನ್ನು ಪಡೆಯಬಹುದು. ಪಿಎಂ ಮೋದಿ ಅವರು ಪ್ರಾರಂಭಿಸಿದ ಈ ಯೋಜನೆಯಲ್ಲಿ, 1 ಕೋಟಿ ಮನೆಗಳಿಗೆ ರೂಫ್‌ ಟಾಪ್ ಸೋಲಾರ್ ಅಳವಡಿಸುವ ಗುರಿ ಇದೆ. ಇದರಿಂದ ಫಲಾನುಭವಿಗಳಿಗೆ ವಿದ್ಯುತ್ ಬಿಲ್ ಉಳಿತಾಯ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group