Svanidhi Yojana: ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರ ನೀಡುತ್ತದೆ 50 ಸಾವಿರ ರೂ ಸಾಲ, ಹೊಸ ಯೋಜನೆಯ ಜಾರಿ.

ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರ ನೀಡುತ್ತದೆ 50 ಸಾವಿರ ರೂ ಸಾಲ, ಇಂದೇ ಅರ್ಜಿ ಸಲ್ಲಿಸಿ

Pradhan Mantri Svanidhi Yojana 2024: ಕೇಂದ್ರ ಸರ್ಕಾರ ಈಗಾಗಲೇ ಸಣ್ಣ ವ್ಯಾಪಾರಿಗಳು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗಾಗಿ ಸಾಕಷ್ಟು ಸೌಲಭ್ಯವನ್ನು ಒದಗಿಸಿದೆ. ಜನರಿಗೆ ತಮ್ಮ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಲು ಸರ್ಕಾರ ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ.

ಸಣ್ಣ ಉದ್ಯಮ ಆರಂಭಿಸಲು ಬಯಸುವವರಿಗೆ ಸಾಲದ ನೆರವು ನೀಡುವ ಯೋಜನೆಗಳಲ್ಲಿ Pradhan Mantri Svanidhi Yojana ಕೂಡ ಒಂದಾಗಿದೆ. ಸರ್ಕಾರದ ಈ ಯೋಜನೆಯಡಿ ಸಾಕಷ್ಟು ಜನರು ಈಗಾಗಲೇ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

Pradhan Mantri Svanidhi Yojana Loan
Image Credit: Sarkariways

ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರ ನೀಡುತ್ತದೆ 50 ಸಾವಿರ ರೂ ಸಾಲ
Pradhan Mantri Svanidhi Yojana ಅಡಿಯಲ್ಲಿ, ಬೀದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ನಡೆಸಲು ಸರ್ಕಾರದಿಂದ ಸಾಲವನ್ನು ಪಡೆಯಬಹುದು. ತರಕಾರಿ ಮಾರಾಟಗಾರರು, ಹಣ್ಣು ಮತ್ತು ಹೂವು ಮಾರಾಟಗಾರರು, ಬೀದಿ ವ್ಯಾಪಾರಿಗಳು ಮತ್ತು ಸಣ್ಣ Fast food ಮಳಿಗೆಗಳನ್ನು ನಡೆಸುತ್ತಿರುವವರು ಈ ಸಾಲವನ್ನು ಪಡೆಯಬಹುದು.

ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ, ಕೇಂದ್ರ ಸರ್ಕಾರವು 50,000 ವರೆಗೆ ಸಾಲವನ್ನು ನೀಡುತ್ತದೆ. ಆದರೆ, 50 ಸಾವಿರ ರೂಪಾಯಿ ಸಾಲ ಒಂದೇ ಬಾರಿಗೆ ಲಭಿಸುವಿದಿಲ್ಲ. ಬದಲಾಗಿ ಕಂತುಗಳ ರೂಪದಲ್ಲಿ ಸಾಲ ನಿಮಗೆ ಸಿಗುತ್ತದೆ. ಈ ಯೋಜನೆಯಡಿ ಆರಂಭಿಕ ಸಾಲ 10,000 ರೂ. ಆಗಿದೆ. ನಿಯಮಿತ ಅವಧಿಯೊಳಗೆ ಈ ಸಾಲವನ್ನು ಪಾವತಿಸಿದರೆ ಎರಡನೇ ಸಾಲವಾಗಿ 20,000 ರೂ. ನೀಡಲಾಗುತ್ತದೆ. ಇದರ ಪಾವತಿ ಸಕಾಲದಲ್ಲಿ ಮಾಡಿದರೆ 50 ಸಾವಿರ ಸಾಲ ದೊರೆಯುತ್ತದೆ.

Pradhan Mantri Svanidhi Yojana
Image Credit: Sarkariyojnaa

ಯಾವುದೇ ಶ್ಯುರಿಟಿ ಇಲ್ಲದೆ ಸಿಗಲಿದೆ ಸಾಲ ಸೌಲಭ್ಯ
ನೀವು Pradhan Mantri Svanidhi Yojana ಸಾಲವನ್ನು ಪಡೆದುಕೊಳ್ಳಲು ಯಾವುದೇ ಗ್ಯಾರಂಟಿ ನೀಡುವ ಅಗತ್ಯ ಇರುವುದಿಲ್ಲ. ನೀವು ಹಣ ಪಡೆಯಲು ಅರ್ಹರಾಗಿದ್ದಾರೆ ಸಾಲದ ಮೊತ್ತ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ ಸಾಲ ಪಡೆಯಲು Aadhar Card ಸಾಕು. ಬೇರೆ ಯಾವುದೇ ದಾಖಲೆ ಅಗತ್ಯವಿಲ್ಲ. ಇಲ್ಲಿ ಪಡೆದ ಸಾಲವನ್ನು ಒಂದು ವರ್ಷದೊಳಗೆ ಮರುಪಾವತಿ ಮಾಡಬಹುದು. ಇದನ್ನು ಮಾಸಿಕ ಕಂತುಗಳಲ್ಲಿಯೂ ಮರುಪಾವತಿ ಮಾಡಬಹುದು. ನೀವು ಯಾವುದೇ ಸರ್ಕಾರಿ ಬ್ಯಾಂಕ್‌ ನಲ್ಲಿ ಸ್ವಾನಿಧಿ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಸರ್ಕಾರ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group