Ujjwala Yojana: ಇನ್ಮುಂದೆ ಈ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರ ಸಿಗಲಿದೆ ಕೇಂದ್ರದಿಂದ ಉಚಿತ ಗ್ಯಾಸ್, ಹೊಸ ರೂಲ್ಸ್

ಉಜ್ವಲ ಯೋಜನೆಯ ವಿಷಯವಾಗಿ ಬಹುದೊಡ್ಡ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Pradhan Mantri Ujjwala Yojana Free Gas Cylinder: ದೇಶದಲ್ಲಿ 2016 ರಲ್ಲಿ ಭಾರತ ಸರ್ಕಾರದ Pradhan Mantri Ujjwala ಯೋಜನೆ ಪರಿಚಯವಾಗಿದೆ. ಕೇಂದ್ರ ಸರ್ಕಾರ ಪರಿಚಯಿಸಿರುವ ಹಲವಾರು ಯೋಜನೆಗಳಲ್ಲಿ Pradhan Mantri Ujjwala Yojana ಕೂಡ ಒಂದಾಗಿದೆ.

ಈ ಯೋಜನೆಯ ಅಡಿಯಲ್ಲಿ ದೇಶದ ಮಹಿಳೆಯರು ಅತಿ ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ಸದ್ಯ ಈ ಯೋಜನೆಯಡಿ ಇಂತವರು ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯುವ ಅವಕಾಶ ಬಂದೊದಗಿದೆ. PMU ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಯಾರು ಅರ್ಹರು..? ಅರ್ಜಿ ಸಲ್ಲಿಕೆ ಹೇಗೆ…? ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Pradhan Mantri Ujjwala Yojana
Image Credit: Aajtak

BPL ಕಾರ್ಡ್ ಹೊಂದಿರವವರಿಗೆ ಉಚಿತ ಗ್ಯಾಸ್ ಸಿಲಿಂಡರ್
PMU ಯೋಜನೆಯಡಿ ಮಹಿಳೆಯರು ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ಆಗಿ 300 ರೂ. ಪಡೆಯುತ್ತಿದ್ದಾರೆ. ಸದ್ಯ ದೇಶದ ಮಹಿಳೆಯರು ಈ ಯೋಜನೆಯಡಿ ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಕೆಯನ್ನು ಆರಂಭಿಸಿದೆ.

BPL Ration Card ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸುವ ಮೂಲಕ ಎರಡು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬಿಪಿಎಲ್ ಕಾರ್ಡ್, ಬಿಪಿಎಲ್ ಪಟ್ಟಿಯಲ್ಲಿ ಹೆಸರು ಮುದ್ರಣ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಬ್ಯಾಂಕ್ ಫೋಟೋಕಾಪಿ, ವಯಸ್ಸಿನ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಮುಖ್ಯ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

Pradhan Mantri Ujjwala Yojana 2024
Image Credit: TV9 Hindi

PM Ujjwala ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
*https://www.pmuy.gov.in/index.aspx ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

*Website ಓಪನ್ ಆದ ತತ್ಕ್ಷಣ HP, Inden ಅಥವಾ Bharat Gas ನಂತಹ ಗ್ಯಾಸ್ ವಿತರಕರನ್ನು ಆಯ್ಕ ಮಾಡಬೇಕು. ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ನೀ ಅರ್ಜಿಯನ್ನು ಭರ್ತಿ ಮಾಡಬೇಕು.

*ದಾಖಲೆಗಳ ಸಾಫ್ಟ್ ಕಾಪಿಯನ್ನು Website ಗೆ upload ಮಾಡಬೇಕುತ್ತದೆ.

*ದಾಖಲೆಗಳನ್ನು ಪರಿಶೀಲಿಸಿದ ನಂತರ ಹೊಸ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ.

Pradhan Mantri Ujjwala Yojana Free Gas Cylinder
Image Credit: India

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಯಾರು ಅರ್ಹರು…?
•ಬಡತನ ರೇಖೆಗಿಂತ ಕೆಳಗಿರುವವರು ಅಂದರೆ BPL Ration card ಹೊಂದಿರುವವರು.

•ಭಾರತೀಯ ಮಹಿಳೆಯರು.

•ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.

•ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ, ನಗರ ಪ್ರದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆ ಇರಬೇಕು.

•ಅರ್ಜಿದಾರರ ಕುಟುಂಬವು ಇಲ್ಲಿಯವರೆಗೆ ಯಾವುದೇ ಗ್ಯಾಸ್ ಸಂಪರ್ಕವನ್ನು ಪಡೆದಿರಬಾರದು.

Pradhan Mantri Ujjwala Yojana Online Apply
Image Credit: News 24

Join Nadunudi News WhatsApp Group