PMUY KYC: ಎರಡು ದಿನದಲ್ಲಿ KYC ಮಾಡಿಸದೇ ಇದ್ದರೆ ರದ್ದಾಗುತ್ತಾ ಗ್ಯಾಸ್ ಸಬ್ಸಿಡಿ ಹಣ….? ಸ್ಪಷ್ಟನೆ ನೀಡಿದ ಕೇಂದ್ರ

ಗ್ಯಾಸ್ ಸಬ್ಸಿಡಿ KYC ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದ ಬಗ್ಗೆ ಕೇಂದ್ರದಿಂದ ಸ್ಪಷ್ಟನೆ.

Pradhan Mantri Ujjwala Yojana KYC Update: Pradhan Mantri Ujjwala ಯೋಜನೆಯಡಿ ಭಾರತ ಸರ್ಕಾರ ದೇಶದ ಬಡ ಜನರಿಗೆ ಕಡಿಮೆ ದರದಲ್ಲಿ Gas Cylinder ಅನ್ನು ನೀಡುತ್ತಿದೆ. ಜನಸಾಮಾನ್ಯರು ಈ ಯೋಜನೆಯಡಿ ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ದೇಶದ ಸಾಕಷ್ಟು ಜನರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ.

ಸದ್ಯ PMUY ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ KYC ಅಪ್ಡೇಟ್ ಹರಿದಾಡುತ್ತಿದೆ. ಈ ಕಾರಣಕ್ಕೆ ಜನರಲ್ಲಿ ಗೊಂದಲ ಉಂಟಾಗಿದೆ. PMUY ಕುರಿತು ಜನರ ಎಲ್ಲ ಗೊಂದಲಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿ ಕುರಿತಂತೆ ಕೇಂದ್ರ ಸರ್ಕಾರ ಈಗ ಇನ್ನೊಂದು ಘೋಷಣೆಯನ್ನ ಮಾಡಿದೆ. ಹೌದು ಜನರ ತಲೆಯಲ್ಲಿ ಮೂಡಿರುವ ಎಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರವನ್ನ ನೀಡಿದೆ ಎಂದು ಹೇಳಬಹುದು.

Pradhan Mantri Ujjwala Yojana KYC Update
Image Credit: online38media

December 31 ಗ್ಯಾಸ್ ಸಿಲಿಂಡರ್ KYC ಗೆ ಕೊನೆಯ ದಿನಾಂಕ
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಅಕ್ಟೋಬರ್ 18, 2023 ರಂದು ಹೊರಡಿಸಿದ ಆದೇಶವು ಪ್ರತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ KYC ಮಾಡಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಡಿಸೆಂಬರ್ 31 ರೊಳಗೆ ಗ್ಯಾಸ್ ಏಜೆನ್ಸಿ ಬಳಿ ಕೆವೈಸಿ ಕಡ್ಡಾಯ. ಇಲ್ಲವಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,400 ರೂ. ಗೆ ಬದಲಾಗಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ನಲ್ಲಿ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ KYC ಮಾಡಿಸಿಕೊಳ್ಳವು ಜನರು ಗ್ಯಾಸ್ ಏಜೆನ್ಸಿ ಬಳಿ ಧಾವಿಸಿದ್ದಾರೆ. ಗ್ಯಾಸ್ ಏಜನ್ಸಿ ಮುಂದೆ ಜನರು ಸಾಲು ಸಾಲು ನಿಂತಿರುವುದನ್ನ ಗಮನಿಸಿದ ಕೇಂದ್ರ ಸರ್ಕಾರ ಸಬ್ಸಿಡಿಗಾಗಿ ಗ್ಯಾಸ್ ಸಿಲಿಂಡರ್ KYC ಮಾಡುವುದು ಯಾರು ಯಾರಿಗೆ ಕಡ್ಡಾಯ…? ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದೆ.

 Ujjwala Yojana KYC
Image Credit: Original Source

ಗ್ಯಾಸ್ ಸಿಲಿಂಡರ್ KYC ಗೆ ಅಂತಿಮ ದಿನಾಂಕ ನಿಗದಿಪಡಿಸಿಲ್ಲ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಸಬ್ಸಿಡಿ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುವ ಖಾತೆಗೆ ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ದೇಶದ ಯಾವುದೇ ಕಂಪನಿಯಿಂದ ಗ್ಯಾಸ್ ಸಂಪರ್ಕ ಪಡೆದ ಗ್ರಾಹಕರು ಕೆವೈಸಿ ಮಾಡಬೇಕು. ಆದರೆ ಈ ದಿನಾಂಕದೊಳಗೆ ಮಾಡಲು ಯಾವುದೇ ನಿರ್ಬಂಧವಿಲ್ಲ.

Join Nadunudi News WhatsApp Group

ಗ್ಯಾಸ್ ಸಿಲಿಂಡರ್ KYC ಗೆ ಅಂತಿಮ ದಿನಾಂಕ ನಿಗದಿಪಡಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವ ಗ್ರಾಹಕರು ತಮ್ಮ ಗ್ಯಾಸ್ ಖಾತೆಗೆ ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು, ಯಾರಿಗೂ ಕಾಲಮಿತಿ ಹಾಕಿಲ್ಲ ಎನ್ನುವುದು ಸ್ಪಷ್ಟ ಮಾಹಿತಿಯಾಗಿದೆ. ಜನರು ಗ್ಯಾಸ್ ಏಜೆನ್ಸಿ ಮುಂದ ಸಾಲುಗಟ್ಟು ನಿಲ್ಲುವ ಅಗತ್ಯ ಇಲ್ಲ ಮತ್ತು KYC ಅಪ್ಡೇಟ್ ಗೆ ಸಂಬಂಧಿಸಿದಂತೆ ಯಾವುದೇ ಕಾಲಮಿತಿಯನ್ನ ನಿಗದಿ ಮಾಡಲಿಲ್ಲ ಮತ್ತು ಎಲ್ಲರೂ ಕೂಡ KYC ಮಾಡಿಸುವುದು ಕಡ್ಡಾಯ ಎಂದು ಕೇಂದ್ರ ಸ್ಪಷ್ಟನೆಯನ್ನ ನೀಡಿದೆ.

Join Nadunudi News WhatsApp Group